ದೇಶ/ವಿದೇಶಸಿನಿಮಾಸುದ್ದಿ

ಕೋಟಿ ಬೆಲೆಯ ಒಡವೆ ತೊಟ್ಟ ರಶ್ಮಿಕಾ ಸ್ಲಿಪ್ಪರ್ ಬೆಲೆ ಎಷ್ಟು? ಅಭಿಮಾನಿಗಳಿಗೆ ಅಚ್ಚರಿ ಮೂಡಿಸಿದ ‘ನ್ಯಾಷನಲ್ ಕ್ರಶ್’!

ಬೆಂಗಳೂರು: ಬಹುಕಾಲದ ಕುತೂಹಲಕ್ಕೆ ತೆರೆ ಎಳೆದು ದಾಂಪತ್ಯ ಜೀವನಕ್ಕೆ ಕಾಲಿಟ್ಟಿರುವ ‘ವಿರೋಶ್’ (ವಿಜಯ್ ದೇವರಕೊಂಡ ಮತ್ತು ರಶ್ಮಿಕಾ ಮಂದಣ್ಣ) ಜೋಡಿಯ ಮದುವೆಯ ಸಂಭ್ರಮ ಇನ್ನೂ ಮುಗಿದಂತಿಲ್ಲ. ಸಾಮಾಜಿಕ ಜಾಲತಾಣಗಳಲ್ಲಿ ಈ ಜೋಡಿಯ ಮದುವೆಯ ಫೋಟೋಗಳು ಮತ್ತು ವಿಡಿಯೋಗಳು ಸಖತ್ ಸದ್ದು ಮಾಡುತ್ತಿವೆ. ವಿಶೇಷವಾಗಿ, ಮದುವೆಯ ದಿನ ರಶ್ಮಿಕಾ ಧರಿಸಿದ್ದ ಉಡುಗೆ-ತೊಡುಗೆಗಳ ಬಗ್ಗೆ ಈಗ ಹೊಸ ಚರ್ಚೆ ಆರಂಭವಾಗಿದೆ.

ದಕ್ಷಿಣ ಭಾರತದ ಸಂಪ್ರದಾಯದಂತೆ ನಡೆದ ಈ ಮದುವೆಯಲ್ಲಿ ರಶ್ಮಿಕಾ ಪೂರ್ಣ ಪ್ರಮಾಣದ ಚಿನ್ನಾಭರಣಗಳಲ್ಲಿ ಮಿಂಚಿದ್ದಾರೆ. ಕೊಡಗಿನ ಬೆಡಗಿ ಧರಿಸಿದ್ದ ಟೆಂಪಲ್ ಡಿಸೈನ್ ಆಭರಣಗಳ ಮೌಲ್ಯ ಸುಮಾರು 7 ಕೋಟಿ ರೂಪಾಯಿ! ವಿಶೇಷವೆಂದರೆ, ಈ ಆಭರಣಗಳನ್ನು ಸಿದ್ಧಪಡಿಸಲು ವಿನ್ಯಾಸಕಾರರು ಬರೋಬ್ಬರಿ 10 ತಿಂಗಳು ಸಮಯ ತೆಗೆದುಕೊಂಡಿದ್ದಾರಂತೆ. ರಶ್ಮಿಕಾ ಉಟ್ಟಿದ್ದ ಸೀರೆ ಕೂಡ ಸಾಮಾನ್ಯವಾದದ್ದಲ್ಲ ಅದು ಅಪ್ಪಟ ಚಿನ್ನದ ದಾರಗಳಿಂದ ನೇಯ್ದ ಸೀರೆಯಾಗಿತ್ತು.

ಸಾಮಾನ್ಯವಾಗಿ ಸೆಲೆಬ್ರಿಟಿಗಳ ಮದುವೆ ಎಂದರೆ ಅಲ್ಲಿ ವಜ್ರದ ವೈಭವವಿರುತ್ತದೆ. ಆದ್ರೆ, ವಜ್ರಗಳು ನೆಗೆಟಿವ್ ಎನರ್ಜಿಯನ್ನು ಆಕರ್ಷಿಸುತ್ತವೆ ಮತ್ತು ಶೀತಲ ಗುಣವನ್ನು ಹೊಂದಿವೆ ಎಂಬ ನಂಬಿಕೆಯ ಹಿನ್ನೆಲೆಯಲ್ಲಿ, ಕೇವಲ ಚಿನ್ನಕ್ಕೆ ಮಾತ್ರ ಆದ್ಯತೆ ನೀಡಲಾಗಿದ್ದು. ದಕ್ಷಿಣದ ಮದುವೆಯ ಸಂಪ್ರದಾಯದ ಗತ್ತು ಹೆಚ್ಚಿಸಲು ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಎನ್ನಲಾಗಿದೆ.

ಕೋಟಿ ಕೋಟಿ ಬೆಲೆಯ ಆಭರಣ ತೊಟ್ಟಿದ್ದ ರಶ್ಮಿಕಾ ಅವರ ಪಾದರಕ್ಷೆಯ ಮೇಲೆ ನೆಟ್ಟಿಗರ ಕಣ್ಣು ಬಿದ್ದಿದೆ. ಗೋಲ್ಡನ್ ಬಣ್ಣದ ಈ ಸ್ಲಿಪ್ಪರ್ ಬೆಲೆ ಕನಿಷ್ಠ ಒಂದು ಲಕ್ಷ ರೂಪಾಯಿ ಇರಬಹುದು ಎಂದು ಎಲ್ಲರೂ ಅಂದಾಜಿಸಿದ್ದರು. ಆದರೆ ಅಭಿಮಾನಿಗಳು ಇದರ ಅಸಲಿ ಬೆಲೆ ಪತ್ತೆ ಹಚ್ಚಿದಾಗ ಶಾಕ್ ಆಗಿದ್ದಾರೆ!

ಅಪರಾಜಿತಾ ತೂರ್ ಬ್ರ್ಯಾಂಡ್‌ನ ಈ ಚಪ್ಪಲಿಯ ಬೆಲೆ ಕೇವಲ 24,399 ರೂಪಾಯಿಗಳು. ಕೋಟಿ ಬೆಲೆಯ ಸೀರೆ ಮತ್ತು ಒಡವೆಗೆ ಹೋಲಿಸಿದರೆ ಇದು ಅತ್ಯಂತ ಕಡಿಮೆ ಬೆಲೆ ಎಂಬುದು ಅಭಿಮಾನಿಗಳ ವಾದ. “ನಟಿ ಇಷ್ಟು ಕಡಿಮೆ ಬೆಲೆಯ ಸ್ಲಿಪ್ಪರ್ ಏಕೆ ಧರಿಸಿದರು?” ಎಂದು ಸಾಮಾಜಿಕ ಜಾಲತಾಣಗಳಲ್ಲಿ ಈಗ ಭರ್ಜರಿ ಚರ್ಚೆ ನಡೆಯುತ್ತಿದೆ. ಒಟ್ಟಿನಲ್ಲಿ, ರಶ್ಮಿಕಾ ಅವರ ಸಿಂಪ್ಲಿಸಿಟಿ ಅಥವಾ ಆಯ್ಕೆ ಈಗ ಎಲ್ಲರ ಗಮನ ಸೆಳೆಯುತ್ತಿರುವುದಂತೂ ಸುಳ್ಳಲ್ಲ.

Comments (0)

Your email address will not be published. Required fields are marked *

Back to top button