Wednesday, February 25, 2026
22.6 C
Bengaluru
Google search engine
LIVE
ಮನೆ#Exclusive NewsTop Newsಬೈಕ್ ಬಿಟ್ಟು ಕುದುರೆ ಏರಿದ ಬ್ಲಿಂಕಿಟ್ ಬಾಯ್! ರಾಜಸ್ಥಾನದ ಬೀದಿಗಳಲ್ಲಿ 'ರಾಯಲ್' ಡೆಲಿವರಿ ವೈರಲ್!

ಬೈಕ್ ಬಿಟ್ಟು ಕುದುರೆ ಏರಿದ ಬ್ಲಿಂಕಿಟ್ ಬಾಯ್! ರಾಜಸ್ಥಾನದ ಬೀದಿಗಳಲ್ಲಿ ‘ರಾಯಲ್’ ಡೆಲಿವರಿ ವೈರಲ್!

ರಾಜಸ್ಥಾನ: ಹೈ-ಟೆಕ್ ಡೆಲಿವರಿ ಕಂಪನಿಯೊಂದು ‘ರಾಯಲ್’ ಟಚ್ ಪಡೆದುಕೊಂಡಿದೆ. ಪೆಟ್ರೋಲ್ ಬೆಲೆ ಏರಿಕೆ ಮತ್ತು ಟ್ರಾಫಿಕ್ ಕಿರಿಕಿರಿಯಿಂದ ತಪ್ಪಿಸಿಕೊಳ್ಳಲು ಬ್ಲಿಂಕಿಟ್ ಡೆಲಿವರಿ ಬಾಯ ಮಾಡಿರುವ ಸಾಹಸ ಈಗ ಇಡೀ ದೇಶದ ಗಮನ ಸೆಳೆದಿದೆ. ಬೈಕ್ ಬದಲಿಗೆ ಕುದುರೆಯನ್ನೇರಿ ಆರ್ಡರ್ ತಲುಪಿಸಲು ಬಂದ ಯುವಕನ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದ್ದು, ನೆಟ್ಟಿಗರು ಈತನ ‘ಹಾರ್ಸ್ ಪವರ್’ಗೆ ಫಿದಾ ಆಗಿದ್ದಾರೆ.

ಮಾರುತಿ ಸುಜುಕಿ ಶೋರೂಂ ಎದುರು ಕುದುರೆ ಏರಿ ಬಂದ ಈ ಡೆಲಿವರಿ ಬಾಯ್, ತನಗ ಬಂದಿರುವ ಆರ್ಡರ್ ಲೋಕೇಶನ್ ನೋಡಲು ಮೊಬೈಲ್ ಚೆಕ್ ಮಾಡುತ್ತಿರುವ ದೃಶ್ಯ ಎಲ್ಲರ ಕುತೂಹಲಕ್ಕೆ ಕಾರಣವಾಗಿದೆ. “ಇದು ನಿಜವಾದ ಎಕೋ-ಫ್ರೆಂಡ್ಲಿ ಡೆಲಿವರಿ” ಎಂದು ಜನರು ಕಾಮೆಂಟ್ ಮಾಡುತ್ತಿದ್ದು, ಮಾಡರ್ನ್ ಬ್ಯುಸಿನೆಸ್‌ನಲ್ಲಿ ‘ಓಲ್ಡ್ ಈಸ್ ಗೋಲ್ಡ್’ ಐಡಿಯಾ ವರ್ಕ್ ಆಗಿದೆ ಎಂದು ಬಣ್ಣಿಸುತ್ತಿದ್ದಾರೆ. ಅಮೆಜಾನ್, ಫ್ಲಿಪ್‌ಕಾರ್ಟ್‌ಗಿಂತಲೂ ಇದು ಒಂದು ಹೆಜ್ಜೆ ಮುಂದೆ ಹೋಗಿ ‘ರಾಜಸ್ಥಾನಿ ಸ್ಟೈಲ್’ನಲ್ಲಿ ಡೆಲಿವರಿ ನೀಡುತ್ತಿದೆ ಎನ್ನುವ ತಮಾಷೆಯ ಚರ್ಚೆಗಳೂ ನಡೆಯುತ್ತಿವೆ.

ಲಕ್ಷಾಂತರ ವೀಕ್ಷಣೆಗಳನ್ನು ಕಂಡಿರುವ ಈ ವಿಡಿಯೋ, ತಂತ್ರಜ್ಞಾನ ಎಷ್ಟೇ ಬೆಳೆದರೂ ಟ್ರಾಫಿಕ್ ಕಿರಿಕಿರಿ ಇಲ್ಲದೆ, ಪೆಟ್ರೋಲ್ ಚಿಂತೆ ಇಲ್ಲದೆ ಸಮಯಕ್ಕೆ ಸರಿಯಾಗಿ ಆರ್ಡರ್ ತಲುಪಿಸುವ ಈತನ ಐಡಿಯಾ ನಿಜಕ್ಕೂ ಮೆಚ್ಚುವಂತದ್ದು.

RELATED ARTICLES

ಪ್ರತ್ಯುತ್ತರ ಬಿಟ್ಟು

ದಯವಿಟ್ಟು ನಿಮ್ಮ ಅಭಿಪ್ರಾಯವನ್ನು ನಮೂದಿಸಿ!
ದಯವಿಟ್ಟು ನಿಮ್ಮ ಹೆಸರನ್ನು ಇಲ್ಲಿ ನಮೂದಿಸಿ

Most Popular

Recent Comments