ರಾಜ್ಯ
ಕನ್ನಡ ಬೋರ್ಡ್ ಅಳವಡಿಕೆಗೆ ಫೆ.28 ಡೆಡ್ ಲೈನ್

ಬೆಂಗಳೂರು : ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಕನ್ನಡ ಮಾಯವಾಗ್ತಿರೋ ಹೊತ್ತಲ್ಲೇ, ಫೆಬ್ರವರಿ 28ರ ಒಳಗೆ ಶೇಕಡಾ 60ರಷ್ಟು ಕನ್ನಡ ಬೋರ್ಡ್ ಬಳಸುವಂತೆ ನಿಯಮ ಹಿನ್ನೆಲೆ ಬಿಬಿಎಂಪಿ ಅಂಗಡಿಗಳ ಮಾಲೀಕರಿಗೆ ನೋಟಿಸ್ ಜಾರಿ ಮಾಡ್ತಿದೆ.
ಇನ್ನು ಫೆಬ್ರವರಿ 28ಕ್ಕೆ ಕನ್ನಡ ಬೋರ್ಡ್ ಅಳವಡಿಕೆಗೆ ಡೆಡ್ ಲೈನ್ ಹಿನ್ನಲೆ ಎಚ್ಚೆತ್ತುಕೊಂಡ ಪಾಲಿಕೆಯಿಂದ 28 ರೊಳಗಾಗಿ ಕನ್ನಡ ಬೋರ್ಡ್ ಅಳವಡಿಕೆಗೆ ಪಾಲಿಕೆ ವ್ಯಾಪ್ತಿಯಲ್ಲಿ ಬರುವ ಎಲ್ಲ ಅಂಗಡಿಗಳು, ವ್ಯಾಪಾರಸ್ಥರಿಗೆ ನೋಟಿಸ್ ನೀಡುತ್ತಿದೆ. ಈ ವರೆಗೆ ಒಟ್ಟು 34262 ಸಾವಿರಕ್ಕೂ ಅಧಿಕ ನೋಟಿಸ್ ನೀಡಲಾಗಿದೆ. ಬೊಮ್ಮನಹಳ್ಳಿ – 6762 ಯಲಹಂಕ – 4518, ಬೆಂಗಳೂರು ದಕ್ಷಿಣ – 3747, ಮಹದೇವಪುರ – 4838, ದಾಸರಹಳ್ಳಿ – 1458, ಬೆಂಗಳೂರು ಪಶ್ಚಿಮ – 5650, ಪೂರ್ವ ವಲಯ – 5579 ರಾಜ ರಾಜೇಶ್ವರಿ ವಲಯದಲ್ಲಿ 2010 ನೋಟಿಸ್ ನೀಡಲಾಗಿದೆ.




