Top Newsದೇಶ/ವಿದೇಶವೈರಲ್ ನ್ಯೂಸ್ಸುದ್ದಿ

ರೀಲ್ಸ್‌ಗಾಗಿ ಚಲಿಸುವ ಬಸ್ಸಿನ ಬಾಗಿಲು ತೆರೆದ ಯುವಕ

ದೆಹಲಿ: ರೀಲ್ಸ್‌ ಹುಚ್ಚಿಗಾಗಿ ಚಲಿಸುವ ಬಸ್ಸಿನ ಬಾಗಿಲು ತೆರೆದು ಹುಚ್ಚಾಟ ಮೆರೆದಿದ್ದ ಯುವಕನನ್ನು ಪೊಲೀಸರು ಬಂಧಿಸಿದ್ದಾರೆ. ಖಜುರಿ ಖಾಸ್ ನಿವಾಸಿಯಾದ ತುಷಾರ್ ಪುನಿಯಾ ಎಂಬಾತನೇ ಈ ಕೃತ್ಯ ಎಸಗಿದ ಆರೋಪಿ. ಈತ ನಂಬರ್ ಪ್ಲೇಟ್ ಇಲ್ಲದ ಬೈಕ್‌ನಲ್ಲಿ ಬಂದು ಚಾಲಕನ ಬದಿಯ ಬಾಗಿಲನ್ನು ಏಕಾಏಕಿ ತೆರೆಯುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು.

ಈ ಘಟನೆಯು ಚಾಲಕನ ಏಕಾಗ್ರತೆಗೆ ಭಂಗ ತರುವಂತಿತ್ತು ಮತ್ತು ಒಂದು ವೇಳೆ ಚಾಲಕ ಗಾಬರಿಯಾಗಿದ್ದರೆ ದೊಡ್ಡ ಅಪಘಾತವೇ ಸಂಭವಿಸುವ ಸಾಧ್ಯತೆಯಿತ್ತು. ಬಾಗಿಲು ತೆರೆದ ಕೂಡಲೇ ಚಾಲಕ ಅದನ್ನು ಎಚ್ಚರಿಕೆಯಿಂದ ಮುಚ್ಚಿಕೊಂಡಿದ್ದಾರೆ. ಸದ್ಯ ನ್ಯೂ ಉಸ್ಮಾನ್‌ಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಆರೋಪಿಯನ್ನು ವಶಕ್ಕೆ ಪಡೆದು ಮುಂದಿನ ತನಿಖೆ ಕೈಗೊಂಡಿದ್ದಾರೆ.

Comments (0)

Your email address will not be published. Required fields are marked *

Back to top button