Thursday, February 12, 2026
27.3 C
Bengaluru
Google search engine
LIVE
ಮನೆUncategorizedಭಾರತೀಯ ವಿದ್ಯಾರ್ಥಿನಿ ಸಾವಿಗೆ 262 ಕೋಟಿ ರೂ. ಪರಿಹಾರ ಘೋಷಿಸಿದ ಅಮೆರಿಕ!

ಭಾರತೀಯ ವಿದ್ಯಾರ್ಥಿನಿ ಸಾವಿಗೆ 262 ಕೋಟಿ ರೂ. ಪರಿಹಾರ ಘೋಷಿಸಿದ ಅಮೆರಿಕ!

ಅಮೇರಿಕಾ: ಸಿಯಾಟಲ್‌ನಲ್ಲಿ ನಡೆದ ಭೀಕರ ಅಪಘಾತದಲ್ಲಿ ಮೃತಪಟ್ಟಿದ್ದ ಭಾರತೀಯ ಮೂಲದ ವಿದ್ಯಾರ್ಥಿನಿ ಜಾಹ್ನವಿ ಕಂದುಲಾ ಕುಟುಂಬಕ್ಕೆ ಈಗ ನ್ಯಾಯ ಸಿಕ್ಕಂತಾಗಿದೆ. ಅಮೆರಿಕ ಇತಿಹಾಸದಲ್ಲೇ ಪೊಲೀಸರ ನಿರ್ಲಕ್ಷ್ಯದ ಪ್ರಕರಣವೊಂದರಲ್ಲಿ ನೀಡಲಾದ ಅತಿದೊಡ್ಡ ಮೊತ್ತದ ಪರಿಹಾರಗಳಲ್ಲಿ ಒಂದಾದ ಬರೋಬ್ಬರಿ 262 ಕೋಟಿ ರೂಪಾಯಿಗಳನ್ನು ಜಾಹ್ನವಿ ಕುಟುಂಬಕ್ಕೆ ನೀಡಲು ನಿರ್ಧರಿಸಲಾಗಿದೆ.

2023ರ ಜನವರಿಯಲ್ಲಿ ನಡೆದ ಈ ಹೃದಯವಿದ್ರಾವಕ ಘಟನೆ ಇಡೀ ವಿಶ್ವದಾದ್ಯಂತ ಆಕ್ರೋಶಕ್ಕೆ ಕಾರಣವಾಗಿತ್ತು.ಆಂಧ್ರಪ್ರದೇಶ ಮೂಲದ 23 ವರ್ಷದ ಜಾಹ್ನವಿ ಕಂದುಲಾ, ಸಿಯಾಟಲ್‌ನ ಈಶಾನ್ಯ ವಿಶ್ವವಿದ್ಯಾಲಯದಲ್ಲಿ ಸ್ನಾತಕೋತ್ತರ ಪದವಿ ವ್ಯಾಸಂಗ ಮಾಡುತ್ತಿದ್ದರು. 2023ರ ಜನವರಿ 23ರಂದು ರಸ್ತೆ ದಾಟುತ್ತಿದ್ದಾಗ, ಸಿಯಾಟಲ್ ಪೊಲೀಸ್ ಅಧಿಕಾರಿ ಕೆವಿನ್ ಡೇವ್ ವೇಗವಾಗಿ ಚಲಾಯಿಸುತ್ತಿದ್ದ ಕಾರು ಜಾಹ್ನವಿಗೆ ಡಿಕ್ಕಿ ಹೊಡೆದಿತ್ತು. ಕೇವಲ 25 mph ವೇಗದ ಮಿತಿ ಇದ್ದ ಜಾಗದಲ್ಲಿ ಅಧಿಕಾರಿ ಬರೋಬ್ಬರಿ 74 mph ವೇಗದಲ್ಲಿ ಕಾರು ಚಲಾಯಿಸುತ್ತಿದ್ದುದು ತನಿಖೆಯಲ್ಲಿ ಸಾಬೀತಾಗಿತ್ತು. ಈ ಘಟನೆಯ ನಂತರ ಅಧಿಕಾರಿಯ ಬೇಜವಾಬ್ದಾರಿತನದ ವಿಡಿಯೋಗಳು ವೈರಲ್ ಆಗಿ ತೀವ್ರ ವಿರೋಧ ವ್ಯಕ್ತವಾಗಿತ್ತು.

ಪ್ರಕರಣದ ತನಿಖೆಯ ವೇಳೆ ಇನ್ನೊಬ್ಬ ಪೊಲೀಸ್ ಅಧಿಕಾರಿಯ ಬಾಡಿ ಕ್ಯಾಮೆರಾದಲ್ಲಿ ಸೆರೆಯಾದ ದೃಶ್ಯಗಳು ಜಗತ್ತನ್ನೇ ಬೆಚ್ಚಿಬೀಳಿಸಿದ್ದವು. ಅಧಿಕಾರಿಯೊಬ್ಬರು ಜಾಹ್ನವಿಯ ಸಾವಿನ ಬಗ್ಗೆ ಹಾಸ್ಯ ಮಾಡುತ್ತಾ, “ಆಕೆಗೆ ಅಲ್ಪ ಮೌಲ್ಯವಿದೆ, 11 ಸಾವಿರ ಡಾಲರ್ ಚೆಕ್ ನೀಡಿದರೆ ಸಾಕು” ಎಂದು ಗೇಲಿ ಮಾಡಿದ್ದು ಭಾರೀ ವಿವಾದ ಸೃಷ್ಟಿಸಿತ್ತು. ಇದೀಗ ಕಿಂಗ್ ಕೌಂಟಿ ಸುಪೀರಿಯರ್ ನ್ಯಾಯಾಲಯದಲ್ಲಿ ಹಣಕಾಸಿನ ಇತ್ಯರ್ಥವಾಗಿದ್ದು, ನಗರ ಅಟಾರ್ನಿ ಎರಿಕಾ ಇವಾನ್ಸ್ ಅವರು ಈ ಸಾವು ಅತ್ಯಂತ ನೋವಿನ ಸಂಗತಿಯಾಗಿದ್ದು, ಈ ಆರ್ಥಿಕ ಪರಿಹಾರವು ಕುಟುಂಬಕ್ಕೆ ಸ್ವಲ್ಪ ಮಟ್ಟಿನ ಸಾಂತ್ವನ ನೀಡಲಿ ಎಂದು ಹಾರೈಸಿದ್ದಾರೆ.

RELATED ARTICLES

ಪ್ರತ್ಯುತ್ತರ ಬಿಟ್ಟು

ದಯವಿಟ್ಟು ನಿಮ್ಮ ಅಭಿಪ್ರಾಯವನ್ನು ನಮೂದಿಸಿ!
ದಯವಿಟ್ಟು ನಿಮ್ಮ ಹೆಸರನ್ನು ಇಲ್ಲಿ ನಮೂದಿಸಿ

Most Popular

Recent Comments