ಟೀಮ್ ಇಂಡಿಯಾದ ಸ್ಟಾರ್ ಕ್ರಿಕೆಟರ್ ಮತ್ತು ವುಮೆನ್ಸ್ ಪ್ರೀಮಿಯರ್ ಲೀಗ್ ಚಾಂಪಿಯನ್ ಕ್ಯಾಪ್ಟನ್ ಸ್ಮೃತಿ ಮಂಧಾನ ಅವರ ವೈಯಕ್ತಿಕ ಜೀವನದ ಏರಿಳಿತಗಳು ಈಗ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿವೆ. ಕಳೆದ ಐದು ವರ್ಷಗಳಿಂದ ಸಂಗೀತ ಸಂಯೋಜಕ ಪಲಾಶ್ ಮುಚ್ಚಲ್ ಅವರೊಂದಿಗೆ ಪ್ರೀತಿಯಲ್ಲಿದ್ದ ಸ್ಮೃತಿ, ಮದುವೆಯ ಹಂತಕ್ಕೆ ಬಂದು ಮಾಡುವೆ ನಿಂತು ಹೋಗಿತ್ತು. ಸಂಬಂಧ ಮುರಿದುಬಿದ್ದರೂ ಅದನ್ನು ಮೆಟ್ಟಿಲಾಗಿ ಮಾಡಿಕೊಂಡು ಮೈದಾನದಲ್ಲಿ ಟ್ರೋಫಿ ಗೆದ್ದು ಬೀಗುವ ಮೂಲಕ ಸ್ಮೃತಿ ಅವರು ತಮ್ಮ ಮಾನಸಿಕ ದೃಢತೆಯನ್ನು ಸಾಬೀತುಪಡಿಸಿದ್ದಾರೆ.

ಪಲಾಶ್ ಅವರು ಬೇರೊಬ್ಬ ಯುವತಿಯೊಂದಿಗೆ ಸಂಬಂಧ ಹೊಂದಿದ್ದರು ಮತ್ತು ಅವರ ಚಾಟ್ಗಳು ಸ್ಮೃತಿಗೆ ಸಿಕ್ಕಿಬಿದ್ದಿದ್ದೇ ಈ ದೂರಕ್ಕೆ ಕಾರಣ ಎಂಬ ಮಾತುಗಳು ಕೇಳಿ ಬುನಾದಿತ್ತು. ಇದೇ ಸಮಯದಲ್ಲಿ ಸ್ಮೃತಿ ಅವರ ತಂದೆ ಅನಾರೋಗ್ಯದಿಂದ ಆಸ್ಪತ್ರೆಗೆ ದಾಖಲಾಗಿದ್ದು ಕೂಡ ಕುಟುಂಬಕ್ಕೆ ಮತ್ತೊಂದು ಆಘಾತ ತಂದಿತ್ತು. ಇಷ್ಟೆಲ್ಲಾ ವೈಯಕ್ತಿಕ ನೋವುಗಳ ನಡುವೆಯೂ ಸ್ಮೃತಿ ಮೈದಾನದಲ್ಲಿ ದೆಹಲಿ ಕ್ಯಾಪಿಟಲ್ಸ್ ವಿರುದ್ಧ ಗೆಲುವಿನ ನಗೆ ಬೀರಿ ಟ್ರೋಫಿ ಎತ್ತಿ ಹಿಡಿದಿರುವುದು ವಿಶೇಷ.

ಸ್ಮೃತಿ ಮಂಧಾನ ಅವರ ತಾಯಿ ಕೂಡ ಈಗ ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡುತ್ತಿದ್ದಾರೆ. ದೆಹಲಿ ತಂಡ ಸೋತಾಗ ಅವರ ಬಾಡಿದ ಮುಖಗಳಿಗೆ ಪಲಾಶ್ ಅವರ ಫೋಟೋ ಹಾಕಿ ಎಡಿಟ್ ಮಾಡಿದ್ದ ಟ್ರೋಲ್ ಫೋಟೋವನ್ನು ಸ್ಮೃತಿ ತಾಯಿ ರಿಪೋಸ್ಟ್ ಮಾಡುವ ಮೂಲಕ ಎಲ್ಲರ ಗಮನ ಸೆಳೆದಿದ್ದಾರೆ. ಪೋಸ್ಟ್ ಮಾಡಿದ ಒಂದು ದಿನದ ನಂತರ ಅದನ್ನು ಡಿಲೀಟ್ ಮಾಡಲಾಗಿದ್ದರೂ, “ಇಂಡಿಯನ್ ಮಮ್ಮಿ ಗತ್ತು” ಎಂದು ನೆಟ್ಟಿಗರು ಇದನ್ನು ಬಣ್ಣಿಸುತ್ತಿದ್ದಾರೆ. ಇದು ಆಕಸ್ಮಿಕವಾಗಿ ನಡೆದ ಘಟನೆಯೇ ಅಥವಾ ಪಲಾಶ್ ಮೇಲಿನ ಅಸಮಾಧಾನವೇ ಎಂಬ ಚರ್ಚೆ ಶುರುವಾಗಿದೆ.


