ರಾಜ್ಯಸುದ್ದಿ

ತುಮಕೂರಿನಲ್ಲಿ ಡಿಸೇಲ್​​ ಲಾರಿ ಪಲ್ಟಿ ; ಡಿಸೇಲ್​ಗಾಗಿ ಮುಗಿಬಿದ್ದ ಜನರು

ತುಮಕೂರು : ಡಿಸೇಲ್​​ ಟ್ಯಾಂಕರೊಂದು ಪಲ್ಟಿಯಾದ ಅದರಲ್ಲಿ ಡಿಸೇಲ್​ ಸೋರಿಕೆಯಾದ ಕಾರಣ ಡಿಸೇಲ್ ಸಂಗ್ರಹಿಸಲು ಜನರು ಮುಗಿಬಿದ್ದಿರುವ ಘಟನೆ ತುಮಕೂರು ಜಿಲ್ಲೆಯ ತಿಪಟೂರಿನ ಹರಿಸಮುದ್ರಗೇಟ್​ ಬಳಿ ನಡೆದಿದೆ.

ಟ್ಯಾಂಕರ್​ ಲಾರಿ ಬಿದ್ದ ತಕ್ಷಣ ಡೀಸೆಲ್​ ನೀರಿನಂತೆ ಹರಿಯುತ್ತಿದ್ದು, ಡೀಸೆಲ್​ ತುಂಬಿಕೊಳ್ಳಲು ಜನರು ಮುಗಿಬಿದ್ದಿದ್ದಾರೆ. ಘಟನಾ ಸ್ಥಳದಲ್ಲಿ ರಸ್ತೆ ಪೂರ್ತಿ ಟ್ರಾಫಿಕ್​ ಜಾಮ್​ ಉಂಟಾಗಿದೆ. ಮುನ್ನಚ್ಚರಿಕೆಯಾಗಿ ಅಗ್ನಿಶಾಮಕ ದಳದಿಂದ ಬೆಂಕಿ ಹೊತ್ತಿಕೊಳ್ಳದಂತೆ ಕ್ರಮ ಕೈಗೊಂಡಿದ್ದಾರೆ. ಸ್ಥಳದಲ್ಲಿ ಜನತೆ ನಿಯಂತ್ರಿಸಲು ಪೊಲೀಸರು ಹರಸಾಹಸ ಪಡುವಂತಾಯಿತು.

Comments (0)

Your email address will not be published. Required fields are marked *

Back to top button