ರಾಜ್ಯಸಿನಿಮಾಸುದ್ದಿ

ಈ ಬಾರಿ ವಿಜಯಲಕ್ಷ್ಮಿ ಬಿಟ್ಟು ಬೇರೆ ಯಾರು ಇಲ್ಲ: ದೀಪಾವಳಿ ಹಬ್ಬದಂದು ಬೇಸರ ಮಾಡಿಕೊಂಡ ದರ್ಶನ್

ಬೆಂಗಳೂರು: ರೇಣುಕಾಸ್ವಾಮಿ ಕೊಲೆ ಕೇಸ್​ ನಲ್ಲಿ ಪರಪ್ಪನ ಅಗ್ರಹಾರ ಜೈಲು ಸೇರಿದ್ದು, ಈ ಬಾರಿ ಜೈಲಿನಲ್ಲೇ ದರ್ಶನ್​​​​​​​​​​​​​​ ದೀಪಾವಳಿ ಆಚರಿಸುವಂತಾಗಿದೆ..

ಕಳೆದ ವರ್ಷ ದೀಪಾವಳಿ ಹಬ್ಬದ ಸಮಯದಲ್ಲಿ ದರ್ಶನ್ ಮಧ್ಯಂತರ ಜಾಮೀನು ಪಡೆದು ರಿಲೀಸ್ ಆಗಿದ್ದರು.
ಆದ್ರೆ ಈ ಬಾರಿ ಜೈಲಿನಲ್ಲೇ ದರ್ಶನ್ ದೀಪಾವಳಿ ಆಚರಿಸುವಂತೆ ಆಗಿದೆ. ದರ್ಶನ್ ಪಾಲಿಗೆ ಬೆಳಕಿಲ್ಲದ ದೀಪಾವಳಿ ಆಗಿದೆ. ಈ ಬಗ್ಗೆ ದರ್ಶನ್ ಜೈಲಿನಲ್ಲಿ ಜೊತೆಗಿರುವವರ ಜೊತೆ ದರ್ಶನ್ ಬೇಸರ ಹೊರಹಾಕಿದ್ದಾರೆ ಎನ್ನಲ್ತಾಗಿದೆ. ಕಳೆದ ವರ್ಷ ದೀಪಾವಳಿ ಹಬ್ಬಕೆ ದರ್ಶನ್ ಜೈಲಿಂದ ಮನೆ ಸೇರಿದ್ರು . ಆಗ ಮನೆಯಲ್ಲಿದ್ರೂ ದರ್ಶನ್ ದೀಪಾವಳಿ ಆಚರಿಸದೆ ಬೆನ್ನು ನೋವಿನ ಹಿನ್ನಲೆ ಮನೆಯಲ್ಲೇ ರೆಸ್ಟ್ ಮಾಡಿದ್ದರು . ಈ ವರ್ಷ ಜೈಲಿನಲ್ಲೇ ಕಳೆಯೋದು ಕಷ್ಟವಾಗ್ತಿದೆ.

ರೇಣುಕಾಸ್ವಾಮಿ ಕೊಲೆ ಕೇಸ್ ಗೂ ಮುನ್ನ ಭರ್ಜರಿಯಾಗಿ ಪ್ರತಿ ದೀಪಾವಳಿಯಲ್ಲೂ ಕುಟುಂಬ, ಸ್ನೇಹಿತರ ಜೊತೆಗೂಡಿ ಸೆಲಬ್ರೇಷನ್ ಮಾಡ್ತಿದ್ದರು .ಆದ್ರೆ ದರ್ಶನ್ ಮಾಡಿಕೊಂಡ ಯಡವಟ್ಟನಿಂದ ಜೈಲಿನಲ್ಲೇ ಹಬ್ಬ ಆಚರಿಸುವಂತಾಗಿದೆ. ಜೈಲಿನಲ್ಲಿರು ದರ್ಶನ್​ ಅವರನ್ನ ಹೊರಗೆ ತರಲು ಯಾರು ಸಹಾಯ ಮಾಡ್ತಿಲ್ಲ ಎನ್ನುವ ಕೊರಗು ನಟನಿಗೆ ಎನ್ನಲಾಗ್ತಿದೆ. ಕಾನೂನಿನ ಹೋರಾಟಕ್ಕೆ ಪತ್ನಿ ವಿಜಯಲಕ್ಷ್ಮಿ ಬಿಟ್ಟು ಯಾರಿಂದಲೂ ದರ್ಶನ್​​ಗೆ ಸಹಾಯದ ಮಾತಿಲ್ಲ. ಈ ಬಗ್ಗೆ ಬ್ಯಾರಕ್ ನಲ್ಲೇ ಶಿಷ್ಯಂದಿರ ಬಳಿ ಬೇಸರ ಹೊರಹಾಕಿದ್ದಾರೆ ಎನ್ನಲಾಗ್ತಿದೆ. ದೀಪಾವಳಿ ಹಬ್ಬದಂದು ಕೂಡ ಸೆಲ್​ನಲ್ಲೇ ದರ್ಶನ್​ ಮೌನಕ್ಕೆ ಶರಣಾಗಿದ್ದಾರೆ ಎಂದು ತಿಳಿದು ಬಂದಿದೆ.

Comments (0)

Your email address will not be published. Required fields are marked *

Back to top button