ರಾಜ್ಯಸುದ್ದಿ

ವಿಜಯಪುರದಲ್ಲಿ ಜೋಡಿ ಕೊ*ಲೆ.. ಬೆಚ್ಚಿಬಿದ್ದ ಜಿಲ್ಲೆಯ ಜನ

ವಿಜಯಪುರ: ವಿಜಯಪುರ ತಾಲೂಕಿನ ಕನ್ನೂರು ಗ್ರಾಮದಲ್ಲಿ ಜೋಡಿ ಕೊಲೆ ನಡೆದಿದ್ದು, ಜೋಡಿ ಕೊಲೆ ಕಂಡು ಜನರು ಬೆಚ್ಚಿಬಿದ್ದಿದ್ದಾರೆ..

ಸಾಗರ ಬೆಳುಂಡಗಿ (25) ಹಾಗೂ ಇಸಾಕ್ ಖರೇಷಿ (24) ಎಂಬ ಇಬ್ಬರು ಯುವಕರನ್ನ ಕಲ್ಲಿನಿಂದ ಜಜ್ಜಿ ಭೀಕರವಾಗಿ ಹತ್ಯೆ ಮಾಡಲಾಗಿದೆ. ತಡರಾತ್ರಿ ಅಪರಿಚಿತರ ತಂಡ ಇಬ್ಬರನ್ನು ಕೊಲೆ ಮಾಡಿ ಪರಾರಿಯಾಗಿದ್ದು, ಹಳೆ ವೈಷಮ್ಯದಿಂದ ಸಾಗರ್ ಹಾಗೂ ಇಸಾಕ್ ಕೊಲೆಗೈದಿರುವ ಸಾಧ್ಯತೆ ಇದೆ ಎನ್ನಲಾಗ್ತಿದೆ.

ಎರಡು ವರ್ಷಗಳ ಹಿಂದೆ ತಮ್ಮೂರಿನ ಈರನಗೌಡ ಮೇಲೆ ಇಸಾಕ್ ಖರೇಷಿ ಹಾಗೂ ಸಾಗರ ತೀವ್ರ ಹಲ್ಲೆ ಮಾಡಿದ್ದರು ಎನ್ನಲಾಗ್ತಿದೆ. ವಿಜಯಪುರ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ಕೆಲ ದಿನಗಳ ಕಾಲ ಚಿಕಿತ್ಸೆ ಪಡೆದು ಈರನಗೌಡ ಮೃತಪಟ್ಟಿದ್ದ‌‌. ಈ ದ್ವೇಷದ ಕಾರಣ ಇಬ್ಬರ ಕೊಲೆ ನಡೆದಿರಬಹುದು ಎಂದು ಕುಟುಂಬಸ್ಥರು ಅನುಮಾನ ವ್ಯಕ್ತಪಡಿಸಿದ್ದಾರೆ. ಸ್ಥಳಕ್ಕೆ ವಿಜಯಪುರ ಗ್ರಾಮೀಣ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

Comments (0)

Your email address will not be published. Required fields are marked *

Back to top button