#Exclusive NewsTop Newsರಾಜ್ಯ

ರಾಜ್ಯದ ಡಿಜಿ-ಐಜಿಪಿಯಾಗಿ ಎಂ. ಸಲೀಂ ನೇಮಕ

ಬೆಂಗಳೂರು: ಕರ್ನಾಟಕದ ಪೊಲೀಸ್​ ಮಹಾನಿರ್ದೇಶಕರಾಗಿ ಹಿರಿಯ ಐಪಿಎಸ್​ ಅಧಿಕಾರಿ ಎಂ. ಸಲೀಂ ಅವರನ್ನು ನೇಮಕ ಮಾಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.

ಅವರು ಮೇ 21 ರಿಂದ ಹಂಗಾಮಿ ಡಿಜಿ-ಐಜಿಪಿಯಾಗಿ ಕಾರ್ಯ ನಿರ್ವಹಿಸುತ್ತಿದ್ದರು. ಐಪಿಎಸ್​ ಅಧಿಕಾರಿ ಡಾ.ಎಂ ಸಲೀಂ ಅವರನ್ನು ರಾಜ್ಯ ಪೊಲೀಸ್​ ಮುಖ್ಯಸ್ಥರಾಗಿ ನೇಮಿಸುವ ರಾಜ್ಯ ಸರ್ಕಾರದ ನಡೆಯನ್ನು ಪ್ರಶ್ನಿಸಿ ಸಲ್ಲಿಸಲಾಗಿದ್ದ ಅರ್ಜಿಯನ್ನು ಕರ್ನಾಟಕ ಹೈಕೋರ್ಟ್ ವಜಾಗೊಳಿಸಿದ ಬೆನ್ನಲ್ಲೇ ರಾಜ್ಯ ಸರ್ಕಾರ ಅವರನ್ನು ನೇಮಕ ಮಾಡಿ ಆದೇಶ ಹೊರಡಿಸಿದೆ.

UPSCಯಿಂದ  ಆಯ್ಕೆ ಪಟ್ಟಿ ಬಂದ ಒಂದು ವಾರದೊಳಗೆ ನಿಯಮಿತ ಡಿಜಿಪಿಯನ್ನು ನೇಮಿಸಲಾಗುವುದು ಎಂದು ಸರ್ಕಾರ ನ್ಯಾಯಾಲಯಕ್ಕೆ ತಿಳಿಸಿದ್ದು, ಅದರಂತೆ ಇದೀಗ ಎಂ ಸಲೀಂ ಅವರನ್ನು ನೇಮಕ ಮಾಡಿ ಸರ್ಕಾರ ಆದೇಶ ಹೊರಡಿಸಿದೆ.

Comments (0)

Your email address will not be published. Required fields are marked *

Back to top button