ರಾಜ್ಯ

ಈ ವರ್ಷ 11 ದಿನ ಮೈಸೂರು ದಸರಾ ಹಬ್ಬ

ಸೆಪ್ಟಂಬರ್‌ 22ರಂದು ದಸರಾ ಹಬ್ಬಕ್ಕೆ ಚಾಲನೆ ಸಿಗಲಿದೆ.ಅಕ್ಟೋಬರ್‌ 2ರಂದು ವಿಜಯದಶಮಿ, ಜಂಬೂ ಸವಾರಿ ನಡೆಯಲಿದೆ. ದಸರಾ ಈ ಬಾರಿ 10ದಿನಗಳ ಬದಲು 11ದಿನಗಳ ಕಾಲ ನಡೆಯಲಿದೆ. ಈ ಬಾರಿ ದಸರಾ ಉದ್ಘಾಟನೆಗೆ ಯಾರನ್ನು ಆಹ್ವಾನಿಸಬೇಕು ಎಂಬುವುದನ್ನು ಮುಖ್ಯಮಂತ್ರಿ ವಿವೇಚನೆಗೆ ಬಿಡಲು ಇಂದಿನ ಸಭೆಯಲ್ಲಿ ನಿರ್ಧರಿಸಲಾಯಿತು.

ಬೆಂಗಳೂರಲ್ಲಿ ದಸರಾ ಪೂರ್ವಭಾವಿ ಸಭೆ ನಡೆಸಿದ ಸಿಎಂ ಸಿದ್ದರಾಮಯ್ಯ, ಅಗಸ್ಟ್ 4 ಗಜ ಪ್ರಯಾಣ ಆರಂಭವಾಗಲಿದೆ.. ಸೆಪ್ಟೆಂಬರ್22 ದಸರಾ ಉತ್ಸವಕ್ಕೆ ಚಾಲನೆ ಸಿಗಲಿದೆ.. ಬೆಳಗ್ಗೆ 10-10 ಕ್ಕೆ ಚಾಮುಂಡಿ ಬೆಟ್ಟದಲ್ಲಿ ದಸರಾ ಉದ್ಘಾಟನೆ.. ಅಕ್ಟೋಬರ್ ೨ರಂದು ನಂದಿ ಧ್ವಜ ಪೂಜೆ ಆಗುತ್ತೆ ಎಂದು ತಿಳಿಸಿದ್ರು. ಸೆಪ್ಟೆಂಬರ್22 ರಿಂದ ಅಕ್ಟೋಬರ್ 2ವರೆಗೆ ಒಟ್ಟು 11 ದಿನ ದಸರಾ ನಡೆಯಲಿದೆ.. ಈ ಬಾರಿ ರಾಜ್ಯದಲ್ಲಿ ಒಳ್ಳೆಯ ಮಳೆಯಾಗಿದೆ.. ಕೆರೆ ಕಟ್ಟೆ ನದಿಗಳು ತುಂಬಿವೆ.. ರೈತರ ಮುಖದಲ್ಲಿ ಸಂತಸ ಇದೆ.. ಸರ್ಕಾರದ ಆಡಳಿತ ಬಗ್ಗೆ ಜನರಿಗೆ ಖುಷಿ ಇದೆ ಎಂದು ಸಿಎಂ ಸಿದ್ದರಾಮಯ್ಯ ತಿಳಿಸಿದ್ರು.

Comments (0)

Your email address will not be published. Required fields are marked *

Back to top button