Monday, June 23, 2025
26.6 C
Bengaluru
Google search engine
LIVE
ಮನೆವಾಣಿಜ್ಯದೇಶದಲ್ಲಿ ಮಿಲಿಯನೇರ್​​ಗಳ ಸಂಖ್ಯೆಯೇ 1 ಲಕ್ಷ- ಭಾರತಕ್ಕಿಂತ ಮುಂದಿವೆ ಕೇವಲ 3 ದೇಶ!

ದೇಶದಲ್ಲಿ ಮಿಲಿಯನೇರ್​​ಗಳ ಸಂಖ್ಯೆಯೇ 1 ಲಕ್ಷ- ಭಾರತಕ್ಕಿಂತ ಮುಂದಿವೆ ಕೇವಲ 3 ದೇಶ!

ಹಿಂದೊಮ್ಮೆ ಭಾರತ ಅಂದ್ರೆ ಕಡು ಬಡವರ ದೇಶ, ಅಭಿವೃದ್ಧಿ ಹೊಂದದ ದೇಶ ಅಂತೆಲ್ಲಾ ಇಡೀ ವಿಶ್ವ ನಮ್ಮನ್ನ ತಾತ್ಸಾರದಿಂದ ನೋಡುತ್ತಿತ್ತು.. ಆದ್ರೀಗ ಟೈಂ ಬದಲಾಗಿದೆ. ಕಾಲ ಚಕ್ರ ಉರುಳಿದೆ.. ಇಡೀ ಪ್ರಪಂಚದಲ್ಲಿ ಈಗ ಎಲ್ಲದರಲ್ಲೂ, ಎಲ್ಲ ಕ್ಷೇತ್ರಗಳಲ್ಲೂ ಭಾರತ ಟಾಪ್ 5 ಲಿಸ್ಟ್​​​ನಲ್ಲಿ ಇದ್ದೇ ಇರುತ್ತೆ.. ಈಗ ಶ್ರೀಮಂತರ ಪಟ್ಟಿಯಲ್ಲೂ ಭಾರತ ಮುಂಚೂಣಿಯಲ್ಲಿದೆ.. ಭಾರತದಲ್ಲಿ ಈಗ ಮಿಲಿಯನೇರ್​​ಗಳ ಸಂಖ್ಯೆಯೇ ಬರೋಬ್ಬರಿ 1 ಲಕ್ಷದ ಹತ್ತಿರ ಇದೆ..

ನೈಟ್ ಫ್ರ್ಯಾಂಕ್ ಗ್ಲೋಬಲ್ ವೆಲ್ತ್ ರಿಪೋರ್ಟ್ ಪ್ರಕಾರ ಭಾರತದಲ್ಲಿ ಮಿಲಿಯನೇರ್​​ಗಳ ಸಂಖ್ಯೆ 85,000ಕ್ಕೂ ಹೆಚ್ಚಿದೆ. ವಿಶ್ವದ ಶೇ. 3.7ರಷ್ಟು ಮಿಲಿಯನೇರ್​​ಗಳು ಭಾರತೀಯರೇ ಆಗಿದ್ದಾರೆ. ಭಾರತದ ಪ್ರಬಲ ಆರ್ಥಿಕ ಬೆಳವಣಿಗೆ, ಉದ್ದಿಮೆಗಾರಿಕೆಗೆ ಪುಷ್ಟಿ, ಡಿಜಿಟಲ್ ಇನ್​ಫ್ರಾಸ್ಟ್ರಕ್ಚರ್, ಬಂಡವಾಳ ಲಭ್ಯತೆ ಇತ್ಯಾದಿ ಕಾರಣದಿಂದ ವೈಯಕ್ತಿಕ ಸಂಪತ್ತು ವೃದ್ಧಿಗೆ ಹೆಚ್ಚು ಅವಕಾಶ ಸಿಕ್ಕಿದೆ.

ಅಮೆರಿಕ, ಚೀನಾ, ಜಪಾನ್ ಬಳಿಕ ಭಾರತದಲ್ಲಿ ಅತಿಹೆಚ್ಚು ಮಿಲಿಯನೇರ್ಸ್ ಇದ್ದಾರೆ.

ಹಾಗಾದ್ರೆ ಮಿಲಿಯನೇರ್​​ಗಳೆಂದರೆ ಎಷ್ಟು ಆಸ್ತಿವಂತರಾಗಿರಬೇಕು? ಮಿಲಿಯನೇರ್​​ಗಳನ್ನು ಅಧಿಕ ಆಸ್ತಿ ಹೊಂದಿರುವ ವ್ಯಕ್ತಿಗಳು ಅಥವಾ HNWI ಎಂದು ಕರೆಯಲಾಗುತ್ತದೆ. ನಿವ್ವಳ ಆಸ್ತಿ ಮೌಲ್ಯ ಕನಿಷ್ಠ 10 ಮಿಲಿಯನ್ ಡಾಲರ್​ನಷ್ಟಾದರೂ ಇರಬೇಕು. ನೆಟ್ ವರ್ತ್ ಎಂದರೆ ಸಾಲಗಳನ್ನು ಕಳೆದು ಉಳಿಯುವ ಆಸ್ತಿಗಳ ಮೌಲ್ಯ. 10 ಮಿಲಿಯನ್ ಡಾಲರ್ ಎಂದರೆ ಸುಮಾರು 85-87 ಕೋಟಿ ರೂ ಆಗುತ್ತದೆ. ಹತ್ತಿರ ಹತ್ತಿರ ನೂರು ಕೋಟಿ ರೂ ಹಣವಂತರು. ಭಾರತದಲ್ಲಿ ಇಷ್ಟು ಪ್ರಮಾಣದಲ್ಲಿ ಸ್ಥಿತಿವಂತರಿರುವುದು ನಿಜಕ್ಕೂ ಸೋಜಿಗ.

ಭಾರತದ ಪ್ರಬಲ ಆರ್ಥಿಕ ಬೆಳವಣಿಗೆಯು ಶ್ರೀಮಂತರ ಸಂಖ್ಯೆ ಹೆಚ್ಚಳಕ್ಕೆ ಕಾರಣ.. ನೈಟ್ ಫ್ರ್ಯಾಂಕ್​​ನ ಈ ವರದಿ ಪ್ರಕಾರ, ಭಾರತದಲ್ಲಿ ಆಗುತ್ತಿರುವ ಪ್ರಬಲ ಆರ್ಥಿಕ ವಾತಾವರಣ, ಉದ್ದಿಮೆಗಾರಿಕೆ ಚಟುವಟಿಕೆ, ಬಂಡವಾಳ ಲಭ್ಯತೆ ಇತ್ಯಾದಿ ಕಾರಣಗಳು ವ್ಯಕ್ತಿಗತ ಸಂಪತ್ತು ಹೆಚ್ಚಳಕ್ಕೆ ಕಾರಣವಾಗಿವೆ ಎನ್ನಲಾಗಿದೆ.

ಸ್ಮಾರ್ಟ್​ಫೋನ್​​ಗಳು ಹೆಚ್ಚು ಮಂದಿಯ ಕೈಲಿರುವುದು, ಡಿಜಿಟಲ್ ಬ್ಯಾಂಕಿಂಗ್ ಎಲ್ಲೆಡೆ ವ್ಯಾಪಿಸುತ್ತಿರುವುದು, ಹೀಗೆ ಡಿಜಿಟಲ್ ಇನ್​ಫ್ರಾಸ್ಟ್ರಕ್ಚರ್ ಬೆಳೆದಿರುವುದು ಸಂಪತ್ತು ಗಳಿಕೆಗೆ ಹೆಚ್ಚಿನ ಅವಕಾಶ ಸಿಕ್ಕಿದೆ ಎಂದು ಈ ವರದಿಯು ಅಭಿಪ್ರಾಯಪಟ್ಟಿದೆ.

ಭಾರತದಲ್ಲಿ ಬಿಲಿಯನೇರ್​​ಗಳ ಸಂಖ್ಯೆಯಲ್ಲೂ ಹೆಚ್ಚಳ.. ಭಾರತದಲ್ಲಿ ಬಿಲಿಯನೇರ್​​ಗಳ ಸಂಖ್ಯೆಯೂ ಕೂಡ ಬಹಳ ವೇಗವಾಗಿ ಹೆಚ್ಚುತ್ತಿದೆ. ಭಾರತದಲ್ಲಿ ಈಗ ಬಿಲಿಯನೇರ್​​ಗಳ ಸಂಖ್ಯೆ 191 ಇದೆ. 2023ರಲ್ಲಿ 165 ಮಂದಿ ಅತಿಶ್ರೀಮಂತರಿದ್ದರು. ಒಂದೇ ವರ್ಷದಲ್ಲಿ 26 ಹೊಸ ಬಿಲಿಯನೇರ್​​ಗಳು ಸೇರ್ಪಡೆಯಾಗಿದ್ದಾರೆ. ಅಂದರೆ, ಶೇ. 12ರಷ್ಟು ಬಿಲಿಯನೇರ್​​ಗಳ ಸಂಖ್ಯೆ ಹೆಚ್ಚಳ ಆಗಿದೆ.

ಬಿಲಿಯನೇರ್ ಎಂದರೆ ಕನಿಷ್ಠ ಒಂದು ಬಿಲಿಯನ್ ಡಾಲರ್ ಮೌಲ್ಯದ ನಿವ್ವಳ ಆಸ್ತಿ ಹೊಂದಿರುವವರು. ಒಂದು ಬಿಲಿಯನ್ ಡಾಲರ್ ಎಂದರೆ ಸುಮಾರು 8,500 ಕೋಟಿ ರೂ. ಭಾರತದಲ್ಲಿರುವ ಎಲ್ಲಾ 191 ಬಿಲಿಯನೇರ್​​ಗಳ ಒಟ್ಟು ಆಸ್ತಿ ಗಣಿಸಿದರೆ ಬಹುತೇಕ ಒಂದು ಟ್ರಿಲಿಯನ್ ಡಾಲರ್​ನಷ್ಟಾಗುತ್ತದೆ ಎನ್ನಲಾಗಿದೆ..

Website |  + posts
RELATED ARTICLES

ಪ್ರತ್ಯುತ್ತರ ಬಿಟ್ಟು

ದಯವಿಟ್ಟು ನಿಮ್ಮ ಅಭಿಪ್ರಾಯವನ್ನು ನಮೂದಿಸಿ!
ದಯವಿಟ್ಟು ನಿಮ್ಮ ಹೆಸರನ್ನು ಇಲ್ಲಿ ನಮೂದಿಸಿ

Most Popular

Recent Comments