ರಾಜ್ಯ

ಒಳಮೀಸಲಾತಿಗೆ 100 ಕೋಟಿ ಖರ್ಚಾಗಲಿದೆ : ಸಚಿವ ಹೆಚ್​.ಸಿ.ಮಹದೇವಪ್ಪ

ಬೆಂಗಳೂರು : ಒಳಮೀಸಲಾತಿ ಕುರಿತಾದ ನಾಗಮೋಹನ್ ದಾಸ್ ಸಮೀಕ್ಷೆಗೆ ಸುಮಾರು ನೂರು ಕೋಟಿ ಖರ್ಚಾಗಲಿದೆ, ಪರಿಶಿಷ್ಠ ಜಾತಿಗಳಿಗೆ ಒಳಮೀಸಲಾತಿ ನೀಡುವ ಸಂಬಂಧ ಇಂದಿನಿಂದ ರಾಜ್ಯದಲ್ಲಿ ಮನೆ‌ಮನೆ ಗಣತಿ ಆರಂಭವಾಗಿದೆ ಎಂದು ಸಮಾಜ ಕಲ್ಯಾಣ ಸಚಿವ ಹೆಚ್​.ಸಿ.ಮಹದೇವಪ್ಪ ಹೇಳಿದರು.

ನಾಗಮೋಹನ್ ದಾಸ್ ನೇತೃತ್ವದ ಏಕಸದಸ್ಯ ಆಯೋಗದ ಜನ ಗಣತಿ ಆ್ಯಪ್ ಮೂಲಕ ಜನರ ವಿವರ ಸಂಗ್ರಹ ಕಾರ್ಯ ಆರಂಭವಾಗಿದೆ. ಕಾಂತರಾಜು ವರದಿಯಲ್ಲಿ ಮಾಹಿತಿ ಇಲ್ಲ. ಹೀಗಾಗಿ ಐತಿಹಾಸಿಕ ತೀರ್ಮಾನ ಮಾಡಲಾಗಿದೆ. ದುರುಪಯೋಗ ಆಗಬಾರದು, ಸುಳ್ಳು ಹೇಳಬಾರದು.

ಮೊಬೈಲ್ ಆ್ಯಪ್​..!

ಮೊಬೈಲ್ ಆಪ್ ಮೂಲಕವೂ ಸಮೀಕ್ಷೆಗೆ ಅವಕಾಶ ಮಾಡಿಕೊಡಲಾಗಿದೆ. ಬೆಳಗ್ಗೆ 6:30 ರಿಂದ ಸಂಜೆ 6:30ರವರೆಗೆ ಮೊಬೈಲ್ ಆಪ್ ಮೂಲಕ ದಾಖಲಾತಿ ಮಾಡಲಾಗುತ್ತದೆ. ಇದಕ್ಕೆ ಪರಿಶಿಷ್ಟ ಜಾತಿ ಸಮುದಾಯದ ಯಾರೂ ತಪ್ಪಿಸಬಾರದು. ನಾವು ನಮ್ಮ ಚುನಾವಣಾ ಪ್ರಣಾಳಿಕೆಯಲ್ಲೂ ವರದಿ ಜಾರಿ ಬಗ್ಗೆ ಘೋಷಣೆ ಮಾಡಿದ್ದೆವು.

Comments (0)

Your email address will not be published. Required fields are marked *

Back to top button