ಕ್ರೈಂ ಸ್ಟೋರಿ

400 ರೂ. ಐಸ್​ಕ್ರೀಂಗಾಗಿ 40 ಸಾವಿರ ರೂ. ಪಂಗನಾಮ..!

ಬೆಂಗಳೂರು: 400 ರೂಪಾಯಿ ಐಸ್​ಕ್ರೀಂಗಾಗಿ ಮಹಿಳೆಯೊಬ್ಬರು 40 ಸಾವಿರ ರೂಪಾಯಿ ಕಳೆದುಕೊಂಡಿರೋ ಘಟನೆ ವಿಧಾನಸೌಧ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.

ಮಹಿಳೆಯೊಬ್ಬರು ಬಿಗ್​ ಬಾಸ್ಕೆಟ್ ಆಪ್​ನಲ್ಲಿ 2 ಕೆ.ಜಿ ಕಿತ್ತಳೆ ಹಣ್ಣು, 250 ಗ್ರಾಂ ಕೊತ್ತುಂಬರಿ ಸೊಪ್ಪು, 1 ಕೆ.ಜಿ ಐಸ್ ಕ್ರೀಂ ಅರ್ಡರ್ ಮಾಡಿದ್ದಾರೆ. ಆದ್ರೆ, ಡೆಲಿವರಿ ಬಾಯ್ ಕೇವಲ 2 ಕೆ.ಜಿ ಕಿತ್ತಳೆ ಹಣ್ಣು, 250 ಗ್ರಾಂ ಕೊತ್ತುಂಬರಿ ಸೊಪ್ಪು ನೀಡಿದ್ದಾನೆ. ಆದ್ರೆ ಐಸ್ ಕ್ರೀಂ ಇಲ್ಲದಿದ್ದಕ್ಕೆ ನೆಟ್ ಅಲ್ಲಿ ಕಸ್ಟಮರ್ ಕೇರ್ ನಂಬರ್ ಸರ್ಚ್ ಮಾಡಿ ಕರೆ ಮಾಡಿದ್ದಾರೆ.

ಹೀಗೆ ಮೊದಲು ಕರೆ ಮಾಡಿದಾಗ ನಂಬರ್ ಅಸ್ತಿತ್ವದಲ್ಲಿ ಇಲ್ಲ ಎಂದು ಬಂದಿದೆ. ಮತ್ತೆ ಗೂಗಲ್​ನಲ್ಲಿ ಸಿಕ್ಕ ಕಸ್ಟಮರ್ ಕೇರ್ ನಂಬರ್​ಗೆ ಕರೆ ಮಾಡಿದ್ದಾರೆ. ಆಗ ವ್ಯಕ್ತಿಯೊಬ್ಬ ಕರೆ ಸ್ವೀಕರಿಸಿ ಮಹಿಳೆಯೊಂದಿಗೆ ಮಾತನಾಡಿದ್ದಾನೆ. ಆಗ ಆ ವ್ಯಕ್ತಿ ಮಹಿಳೆ ಆರ್ಡರ್ ಮಾಡಿದ್ದ ಲಿಸ್ಟ್ ಕೇಳಿದ್ದಾನೆ. ತಾನು ಮಾಡಿದ ಆರ್ಡರ್ ಬಗ್ಗೆ ಮಹಿಳೆ ತಿಳಿಸಿದ್ದಾರೆ. ಆಗ 1 ಕೆ.ಜಿ ಐಸ್ ಕ್ರೀಂನ 400 ರೂಪಾಯಿಯನ್ನು ವಾಪಸ್ಸು ನೀಡುವುದಾಗಿ ಮೊಬೈಲ್​ನಲ್ಲಿ ಕೆಲವು ಆಪ್ಶನ್ ಕ್ಲಿಕ್ ಮಾಡುವಂತೆ ತಿಳಿಸಿ 40 ಸಾವಿರ ವಂಚನೆ ಮಾಡಿದ್ದಾನೆ. ಈ ಸಂಬಂಧ ವಿಧಾನಸೌಧ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಶುರುವಾಗಿದೆ.

Comments (0)

Your email address will not be published. Required fields are marked *

Back to top button