ರಾಜ್ಯ

ಬ್ರಿಟಿಷ್​ ಕಾಲದ ಪೋಲಿಸ್​ ಟೋಪಿಗೆ ತಿಲಾಂಜಲಿ..!

ಬೆಂಗಳೂರು: ಕರ್ನಾಟಕ ರಾಜ್ಯ ಪೋಲಿಸ್​ ಇಲಾಖೆಯ ಕಾನ್ಸ್ಟೇಬಲ್ ಗಳಿಗೆ ಈಗಲೂ ಬ್ರೀಟಿಷ್​ ಕಾಲದ ಟೋಪಿಯನ್ನೇ ಹಾಕ್ತಾರೆ. ಇನ್ನು ಈ ಟೋಪಿಯನ್ನು ಬದಲಿಸುವ ಕೂಗು ಮೊದಲಿನಿಂದ ಕೇಳಿಬರ್ತಿತ್ತು. ಇದೀಗ ಪೋಲಿಸ್​​ ಟೋಪಿ ಬದಲಾವಣೆಗೆ ಸಮಯ ಕೂಡಿಬಂದಿದೆ.

ಬ್ರೀಟಿಷ್ ಕಾಲದಿಂದಲೂ ಪೋಲಿಸ್​ ಈ ಟೋಪಿಗಳನ್ನು ಬಳಸಿಕೊಂಡು ಬಂದ್ರಿದ್ರು. ರ್ಯಾಲಿ, ಪ್ರೋಟೆಸ್ಟ್​ ಅಥವಾ ಲಾಟಿಚಾರ್ಜ್​ ಸಂಧರ್ಭಗಳಲ್ಲಿ ಪೋಲಿಸರಿಗೆ ಕಿರಿಕಿರಿ ಉಂಟಾಗುತ್ತಿತ್ತು. ಹೀಗಾಗಿ ಪೋಲಿಸರು ಟೋಪಿ ಬದಲಾವಣೆಗೆ ಪಟ್ಟು ಹಿಡಿದಿದ್ದರು. ಅದಕ್ಕೀಗ ಕಾಲ ಕೂಡಿಬಂದಿದೆ.

ಪ್ರಸ್ತುತ ಪೊಲೀಸ್ ಕಾನ್‌ಸ್ಟೆಬಲ್‌ಗಳು ಧರಿಸುತ್ತಿರುವ ಗ್ಲೋಚ್ ಟೋಪಿಯಿಂದಾಗಿ ಅವರ ಆರೋಗ್ಯದ ಮೇಲೆ ದುಷ್ಪರಿಣಾಮ ಉಂಟಾಗುವ ಸಾಧ್ಯತೆಗಳ ಬಗ್ಗೆ ಇತ್ತೀಚೆಗೆ ಕೇಂದ್ರ ಆರೋಗ್ಯ ಇಲಾಖೆ ಎಚ್ಚರಿಕೆ ನೀಡಿತ್ತು. ಇನ್ನು ಕೇರಳ, ಆಂಧ್ರ ಪ್ರದೇಶ ಮತ್ತು ತಮಿಳುನಾಡು ರಾಜ್ಯಗಳಲ್ಲಿ ಅಲ್ಲಿನ ಪೊಲೀಸ್ ಹೆಡ್ ಕಾನ್‌ಸ್ಟೆಬಲ್ ಹಾಗೂ ಕಾನ್‌ಸ್ಟೆಬಲ್‌ಗಳಿಗೆ ಪೀಕ್ ಕ್ಯಾಪ್‌ಗಳನ್ನು ನೀಡಲಾಗಿದೆ. ಸದ್ಯ ಅದೇ ಮಾದರಿಯಲ್ಲಿ ಕರ್ನಾಟಕದಲ್ಲಿ ನೀಡುವ ಕುರಿತಾಗಿ ಪರಿಶೀಲನೆ ನಡೆಸಿ ವರದಿ ನೀಡುವಂತೆ ಡಿಜಿ-ಐಜಿಪಿ ಡಾ. ಅಲೋಕ್​ ಮೋಹನ್ ಸೂಚಿಸಿದ್ದಾರೆ.

ಪೋಲಿಸ್​ ಟೋಪಿಯನ್ನು ಬದಲಾಯಿಸಲು ಪೋಲಿಸರು ಮೇಲಿಂದ ಮೇಲೆ ಒತ್ತಡ ಹಾಕಿದ್ರು ಸಹ ಟೋಪಿ ಬದಲಾವಣೆಗೆ ಸಮಯ ಕೂಡಿ ಬಂದಿರಲಿಲ್ಲ. ಇದೀಗ ಡಿಜಿ-ಐಜಿಪಿ ಸೂಚನೆ ಬೆನ್ನಲ್ಲೇ ಪೀಕ್ ಟೋಪಿ ವಿತರಣೆ ಬಗ್ಗೆ ಚರ್ಚಿಸಲು ರಾಜ್ಯ ಸಶಸ್ತ್ರ ಮೀಸಲು ಪಡೆ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕರ ಅಧ್ಯಕ್ಷತೆಯಲ್ಲಿ ಏಪ್ರಿಲ್​ 4ರಂದು ಕಿಟ್ ನಿರ್ದಿಷ್ಟತಾ ಸಮಿತಿ ಸಭೆ ಕರೆಯಲಾಗಿದೆ. ಪ್ರಧಾನ ಕಚೇರಿ ಐಜಿಪಿ, ಬೆಂಗಳೂರು ಉತ್ತರ ವಿಭಾಗ, ಆತ್ಮೀಯ ವಿಭಾಗ ಹಾಗೂ ಸಿಎಆರ್ ಡಿಸಿಪಿಗಳು, ಜೊತೆಗೆ ಬೆಂಗಳೂರು ನಗರ ಜಿಲ್ಲೆ ಎಸ್​​ಪಿ, ಕೆಎಸ್​ಆರ್​ಪಿ ಕಮಾಂಡೆಂಟ್​ ಸೇರಿ ಇನ್ನಿತರ ಹಿರಿಯ ಅಧಿಕಾರಿಗಳು ಸಭೆಯಲ್ಲಿ ಭಾಗಿಯಾಗಲಿದ್ದಾರೆ. ಈ ವೇಳೆ ಸಾಧಕ-ವಾಧಕಗಳ ಬಗ್ಗೆ ಚರ್ಚೆ ನಡೆಯಲಿದ್ದು, ಪೀಕ್ ಕ್ಯಾಪ್ ಕೊಡಲು ಶಿಫಾರಸ್ಸು ಮಾಡುವ ಭರವಸೆ ಎಂದು ಮೂಲಗಳು ತಿಳಿಸಿವೆ.

Comments (0)

Your email address will not be published. Required fields are marked *

Back to top button