ಕ್ರೈಂ ಸ್ಟೋರಿ

ರೀಲ್ಸ್​ ಸ್ಟಾರ್​​ ರಜತ್ ಮೇಲೆ ರೌಡಿಶೀಟರ್ ಓಪನ್ ಮಾಡಿದ್ರಾ ಪೋಲಿಸ್ರು?

ಬೆಂಗಳೂರು: ಇತ್ತಿಚಿಗೆಷ್ಟೇ ಮಚ್ಚು ಹಿಡಿದು ರೀಲ್ಸ್ ಮಾಡಿದ್ದ ಮಾಜಿ ಬಿಗ್​ಬಾಸ್​ ಸ್ಪರ್ಧಿಗಳಾದ ರಜತ್ ಗೆ ಮತ್ತೊಂದು ಸಂಕಷ್ಟ ಎದುರಾಗಿದೆ. ಇದೀಗ ರಜತ್ ವಿರುದ್ಧ ಕ್ರಿಮಿನಲ್​ ಹಿನ್ನಲೆ ಮಾಹಿತಿಯನ್ನು ಕಲೆ ಹಾಕುತ್ತಿದ್ದಾರೆ.

ರೀಲ್ಸ್‌ ಕೇಸ್‌ನಲ್ಲಿ ಸಾಕ್ಷ್ಯ ನಾಶ ಮಾಡಲು ಯತ್ನಿಸಿದ ಆರೋಪದಲ್ಲಿ ರಜತ್, ವಿನಯ್ ಗೌಡ ಇಬ್ಬರನ್ನು ಬಸವೇಶ್ವರ ನಗರ ಪೊಲೀಸರು ಬಂಧಿಸಿದ್ದರು. ಕೋರ್ಟ್ ನ್ಯಾಯಾಂಗ ಬಂಧನ ವಿಧಿಸಿದ ಹಿನ್ನೆಲೆಯಲ್ಲಿ ಆರೋಪಿಗಳು ಪರಪ್ಪನ ಅಗ್ರಹಾರ ಜೈಲುಪಾಲಾಗಿದ್ದರು.

ಇನ್ನು ಈ ಪ್ರಕರಣದಲ್ಲಿ ಜಾಮೀನು ಪಡೆದು ಹೊರ ಬಂದಿರುವ ವಿನಯ್ ಗೌಡ ವಿಡಿಯೋವೊಂದನ್ನು ಮಾಡಿ ಸ್ಪಷ್ಟನೆ ನೀಡಿದ್ರು. ಈ ಕೇಸ್​ನಲ್ಲಿ ಪೋಲಿಸರು ನಮ್ಮನ್ನು ಯಾವುದೇ ಸೆಲಬ್ರಿಟಿ ರೀತಿಯಲ್ಲಿ ಟ್ರೀಟ್ ಮಾಡಿಲ್ಲ, ಬದಲಾಗಿ ಸಾಮಾನ್ಯರಂತೆ ನೋಡಿಕೊಂಡಿದ್ದಾರೆ, ಇನ್ನು ಈ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಷಾದ ವ್ಯಕ್ತಪಡಿಸುತ್ತೇನೆಂದು ವಿನಯ್​ ಗೌಡ ಹೇಳಿದ್ದಾರೆ. ಇಷ್ಟಾದ್ರೂ ಸಹ ರಜತ್​​ ಈವರೆಗೂ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.

ಮಚ್ಚು ಹಿಡಿದು ರೀಲ್ಸ್ ಮಾಡಿದ ಪ್ರಕರಣದ ಬಳಿಕ ಆರೋಪಿ ರಜತ್‌ಗೆ ಮತ್ತೊಂದು ತಲೆನೋವು ಎದುರಾಗಿದೆ. ಬಸವೇಶ್ವರ ನಗರ ಪೊಲೀಸರು ರೀಲ್ಸ್ ಮಾಡಿದ ರಜತ್ ವಿರುದ್ಧ ರೌಡಿಶೀಟರ್ ಪಟ್ಟಿ ಓಪನ್‌ ಮಾಡಲು ಚಿಂತನೆ ನಡೆಸಿದ್ದಾರೆ ಎನ್ನಲಾಗಿದೆ.

ಪೊಲೀಸರು ಆರೋಪಿ ರಜತ್ ಬ್ಯಾಗ್ರೌಂಡ್ ಚೆಕ್ ಮಾಡುತ್ತಿದ್ದಾರೆ. ರಜತ್ ಚಲನವಲನ, ಕ್ರಿಮಿನಲ್ ಹಿಸ್ಟ್ರಿ ಬಗ್ಗೆ ಮಾಹಿತಿ ಕಲೆ ಹಾಕಲಾಗುತ್ತಿದೆ. ನಿಮ್ಮ ಮೇಲೆ ಯಾಕೆ ರೌಡಿಶೀಟರ್ ಪಟ್ಟಿ ಓಪನ್ ಮಾಡಬಾರದು ಎಂಬ ಬಗ್ಗೆ ಸದ್ಯದಲ್ಲೇ ರಜತ್‌ ನೊಟೀಸ್ ನೀಡುವ ಸಾಧ್ಯತೆ ಇದೆ.

Comments (0)

Your email address will not be published. Required fields are marked *

Back to top button