ರಾಜ್ಯ
ರಾಜ್ಯದಲ್ಲಿ ಇನ್ಮುಂದೆ ದುಬಾರಿ ಲೈಫ್

ಬೆಂಗಳೂರು: ರಾಜ್ಯದಲ್ಲಿ ಇನ್ಮುಂದೆ ದುಬಾರಿ ದುನಿಯಾ ಶುರುವಾಗಲಿದೆ. ಈಗಾಗಲೇ ಬಸ್, ಮೆಟ್ರೋ, ಹಾಲು ದರ ಏರಿಕೆಯಿಂದ ಬೇಸತ್ತರಿವ ಜನತೆಗೆ ಯುಗಾದಿ ಹಬ್ಬದ ಶುರುವಿನಲ್ಲೇ ಜನರಿಗೆ ವಿದ್ಯುತ್ ದರ ಏರಿಕೆ ಮಾಡಿ ಜನತೆಗೆ ಸರ್ಕಾರ ಶಾಕ್ ಕೊಟ್ಟಿದೆ.
ಯಾವುದಕ್ಕೇ ಏಷ್ಟು ದರ ಏರಿಕೆಯಾಗಿದೆ ಅನ್ನೋದರ ಮಾಹಿತಿ ಇಲ್ಲಿದೆ,
- ಈಗಾಗಲೇ ಮೆಟ್ರೋ ಪ್ರಯಾಣ ದರ 46% ಏರಿಕೆ
- ಸರ್ಕಾರಿ ಬಸ್ ಟಿಕೆಟ್ ದರ ಶೇ.15ರಷ್ಟು ಏರಿಕೆ
ಹಾಲಿನ ದರ
- ಪ್ರತಿ ಲೀಟರ್ಗೆ 4 ರೂ. ಹೆಚ್ಚಳ
- ಪರಿಷ್ಕೃತ ಹಾಲಿನ ದರ ಏಪ್ರಿಲ್ 1ರಿಂದ ಜಾರಿ
ಕರೆಂಟ್ ಬಿಲ್
- ವಿದ್ಯುತ್ ಪ್ರತಿ ಯೂನಿಟ್ಗೆ 36 ಪೈಸೆ ಹೆಚ್ಚಳ
- ಏಪ್ರಿಲ್ 1ರಿಂದ ಪರಿಷ್ಕೃತ ವಿದ್ಯುತ್ ದರ ಜಾರಿ
ಕಸದ ಸೆಸ್
- ಕಸದ ಸೆಸ್ ಪ್ರತಿ ಕೆ.ಜಿಗೆ 12 ರೂ. ವಿಧಿಸಿ ಪಾಲಿಕೆ ಆದೇಶ
- ಏಪ್ರಿಲ್ 1ರಿಂದ ಪರಿಷ್ಕೃತ ದರ ಜಾರಿ ಎಂದು BBMP ಮಾಹಿತಿ
ನೀರಿನ ದರ
- ನೀರಿನ ದರ ಹೆಚ್ಚಳಕ್ಕೆ ಸರ್ಕಾರಕ್ಕೆ ಜಲಮಂಡಳಿ ಪ್ರಸ್ತಾವನೆ
- 4 ರಿಂದ 5 ಬಾರಿ ಪ್ರಸ್ತಾವನೆ ಸಲ್ಲಿಸಿರುವ ಜಲಮಂಡಳಿ
ಆಟೋ ಮೀಟರ್ ದರ
- ಆಟೋ ಮೀಟರ್ ದರ ₹30ರ ಬದಲು ₹40ಕ್ಕೆ ಏರಿಕೆ ಸಾಧ್ಯತೆ
- ಯುಗಾದಿಗೆ ನಗರದ ಆಟೋ ಮೀಟರ್ ದರ ಏರಿಕೆ ಸಾಧ್ಯತೆ
ವಾಹನ ಮೇಲಿನ ಟ್ಯಾಕ್ಸ್
- 10 ಲಕ್ಷದೊಳಗಿನ ವಾಹನಗಳಿಗೆ ಲೈಫ್ ಟೈಮ್ ಟ್ಯಾಕ್ಸ್
- 25 ಲಕ್ಷದ ಮೇಲಿನ ಎಲೆಕ್ಟ್ರಿಕ್ ಕಾರಿಗೆ 10% ರಷ್ಟು ಟ್ಯಾಕ್ಸ್
ಟೋಲ್ ಶುಲ್ಕ
- ಟೋಲ್ ಸುಂಕ ಹೆಚ್ಚಳ
- ಶೇಕಡ.5 ರಷ್ಟು ಸುಂಕ ಹೆಚ್ಚಳ
ಟೀ, ಕಾಫಿ ದರ
- ಹಾಲಿನ ದರ ಏರಿಕೆ ನೆಪ, ಟೀ-ಕಾಫಿ ರೇಟ್ ಹೆಚ್ಚಳ
- ಟೀ, ಕಾಫಿ ದರ 15% ರಷ್ಟು ಏರಿಕೆ




