ಕ್ರೈಂ ಸ್ಟೋರಿ

ರಜತ್ & ವಿನಯ್ ರೀಲ್ಸ್ ಶೋಕಿ ಕೇಸ್​; ರಾತ್ರೋರಾತ್ರಿ ರಿಲೀಸ್​

ಬೆಂಗಳೂರು:  ಮಾಜಿ ಬಿಗ್ ಬಾಸ್​ ಸ್ಪರ್ಧಿಗಳಾದ ರಜತ್ ಹಾಗೂ ವಿನಯ್ ಗೌಡ ಸಾರ್ವಜನಿಕ ಸ್ಥಳದಲ್ಲಿ ಮಚ್ಚು ಹಿಡಿದು ಇನ್ಸ್ಟಾಗ್ರಾಮ್ ರೀಲ್ಸ್ ಮಾಡಿ ಪೋಲಿಸರ ಕೆಂಗಣ್ಣಿಗೆ ಗುರಿಯಾಗಿದ್ದರು. ಬಸವೇಶ್ವರ ನಗರ ಪೋಲಿಸರು ಇಬ್ಬರ ವಿರುದ್ಧವೂ FIR ದಾಖಲಿಸಿ ಬಂಧಿಸಿದ್ದರು, ಆದ್ರೆ ಇದೀಗ ರಾತ್ರೋ ರಾತ್ರಿ ರಜತ್ ಹಾಗೂ ವಿನಯ್ ಗೌಡರನ್ನು ರಿಲೀಸ್​ ಮಾಡಿದ್ದಾರೆ.

ರಜತ್ ಹಾಗೂ ವಿನಯ್ ಗೌಡ ಇಬ್ಬರು ಮಚ್ಚು ಹಿಡಿದು ರೀಲ್ಸ್ ಮಾಡಿ ಅಪ್​ಲೋಡ್​ ಮಾಡಿದ್ರು, ಈ ಬೆನ್ನಲ್ಲೇ ಪೋಲಿಸರು ಶಸ್ತ್ರಾಸ್ರ್ತ ಕಾಯ್ದೆಯಡಿ ದೂರು ದಾಖಲಿಸಿ, ನಿನ್ನೆ ಮದ್ಯಾಹ್ನ ಇಬ್ಬರನ್ನು ಅರೆಸ್ಟ್ ಮಾಡಿದ್ರು.

ಇದೀಗ ಬಸವೇಶ್ವರ್ ಠಾಣಾ ಪೋಲಿಸರು ಪ್ರಕರಣಕ್ಕೆ ಟ್ವೀಸ್ಟ್ ಕೊಟ್ಟಿದ್ದಾರೆ. ಇವರಿಬ್ಬರು ರೀಲ್ಸ್​ನಲ್ಲಿ ಬಳಸಿದ್ದು ಅಸಲಿ ಮಚ್ಚು ಅಲ್ಲ. ಬದಲಾಗಿ ಫೈಬರ್ ಮಚ್ಚು ಬಳಸಿದ್ದಾರೆಂದು ಪೋಲಿಸರು ಸಬೂಬು ನೀಡಿ ನಡುರಾತ್ರಿ ಬಿಟ್ಟು ಕಳಿಸಿದ್ದಾರೆ.

ರೀಲ್ಸ್​ನಲ್ಲಿ ಬಳಸಿದ್ದ ಮಚ್ಚು ಅಸಲಿ ಮಚ್ಚಿನ ರೀತಿಯೇ ಕಾಣ್ತಿತ್ತು. ಈಗ ಪೋಲಿಸರು ದಿಢೀರ್ ಫೈಬರ್ ಮಚ್ಚು ಎಂಬ ಅವರ ಸಮಜಾಯಷಿಗೆ ಒಪ್ಪಿಗೆ ಸೂಚಿಸಿ ಬಿಟ್ಟು ಕಳಿಸಿರುವ ಪೋಲಿಸರ ನಡೆ ಅನುಮಾನ ಮೂಡಿಸಿದೆ ಎಂದು ಸಾರ್ವಜನಿಕರು ಅಭಿಪ್ರಾಯ ವ್ಯಕ್ತಪಡಿಸುತ್ತಾರೆ.

Comments (0)

Your email address will not be published. Required fields are marked *

Back to top button