ಕಲಬುರಗಿ: ಜಿಲ್ಲಾ ಪೊಲೀಸರು ಭರ್ಜರಿ ಬೇಟೆಯಾಡಿದ್ದಾರೆ. CERI ಪೋರ್ಟಲ್ನಲ್ಲಿ 128 ಮೊಬೈಲ್ಗಳನ್ನು ಪತ್ತೆ ಮಾಡಿದ್ದಾರೆ. 2024ರ ಸೆಪ್ಟೆಂಬರ್ನಿಂದ 2025ರ ಫೆಬ್ರವರಿ-2025ರ ಅವಧಿಯಲ್ಲಿ ದಾಖಲಾದ ದೂರುಗಳನ್ನು ಆಧರಿಸಿ ತನಿಖೆಗಿಳಿದ ಪೊಲೀಸರು, ಸುಮಾರು 17.49 ಲಕ್ಷ ರೂಪಾಯಿ ಮೌಲ್ಯದ 128 ಮೊಬೈಲ್ಗಳನ್ನು ಪತ್ತೆ ಮಾಡಿದ್ದಾರೆ. CERI ಪೋರ್ಟಲ್ನಲ್ಲಿ ಪತ್ತೆಯಾದ ಈ ಮೊಬೈಲ್ಗಳನ್ನು ನಗರದ ಪೊಲೀಸ್ ಭವನದಲ್ಲಿ ವಾರಸುದಾರರಿಗೆ ಎಸ್ಪಿ ಹಸ್ತಾಂತರ ಮಾಡಿದರು.