
ಕಲಬುರಗಿ: ಖಾಕಿ ಸಮವಸ್ತ್ರದಲ್ಲೇ ಹೋಳಿ ಹಬ್ಬ ಆಚರಿಸುವ ಪೋಲಿಸರ ವಿರುದ್ಧ ಭಾರಿ ಜನಾಕ್ರೋಶ ವ್ಯಕ್ತವಾಗಿದೆ.
ಕಲಬುರಗಿ ಜಿಲ್ಲೆಯ ಸೇಡಂ ಪೋಲಿಸ್ ಠಾಣೆಯಲ್ಲಿ ಹೋಳಿ ಹಬ್ಬದ ಹಿನ್ನಲೇ ಪೋಲಿಸರು ತಮ್ಮ ಯುನಿಫಾರ್ಮ್ನಲ್ಲಿಯೇ ಬಣ್ಣದ ಹಬ್ಬವನ್ನು ಆಚರಿಸಿದ್ದಾರೆ.
ಸದ್ಯ ಪೋಲಿಸರು ಪರಸ್ಪರ ಬಣ್ಣ ಎರಚಿ ಡ್ಯಾನ್ಸ್ ಮಾಡಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಈ ಬೆನ್ನಲೇ ಸಿಟ್ಟಾದ ಜನರು ಡ್ಯುಟಿ ಮುಗಿಸಿ ಮನೆಗೆ ಹೋಗಿ ಹೆಂಡ್ತಿ-ಮಕ್ಕಳ ಜೊತೆ ಹೋಳಿ ಆಚರಿಸಿ, ಬದಲಾಗಿ ಕರ್ತವ್ಯದ ಸಮಯದಲ್ಲೇ ಹೋಳಿ ಆಡಿದ್ದು ತಪ್ಪು ಎಂದು ಆಕ್ಷೇಪ ವ್ಯಕ್ತಪಡಿಸಿದ್ದಾರೆ.




