Freedom TVರಾಜ್ಯಸುದ್ದಿ

ಬೆಳಗಾವಿಯಲ್ಲಿ ನೈತಿಕ ಪೊಲೀಸ್‌ಗಿರಿ ; ಪ್ರೇಮಿಗಳೆಂದು ಅಕ್ಕ-ತಮ್ಮನ ಮೇಲೆ ಹಲ್ಲೆ

ಬೆಳಗಾವಿ : ಬೆಳಗಾವಿಯಲ್ಲಿ ನೈತಿಕ ಪೊಲೀಸ್‌ಗಿರಿ ನಡೆದಿದ್ದು, ಯಮನಾಪೂರ ಗೊಂಡವಾಡ ಗ್ರಾಮದ ಜೋಡಿ ಮೇಲೆ 10ಕ್ಕೂ ಹೆಚ್ಚು ಯುವಕರು ಏಕಾಏಕಿ ದಾಳಿ ಮಾಡಿದ್ದಾರೆ.

 

ಯಮನಾಪೂರ ಗ್ರಾಮದ ಸಚಿನ್ ಲಮಾಣಿ (22) ಹಾಗೂ ಮುಸ್ಕಾನ್ ಪಟೇಲ್(23) ಹಲ್ಲೆಗೊಳಗಾದ ಜೋಡಿಯಾಗಿದ್ದಾರೆ. ನಿನ್ನೆ (ಶನಿವಾರ) ಈ ಜೋಡಿ ಯುವನಿಧಿ ಅಪ್ಲಿಕೇಶನ್ ಹಾಕುವುದಕ್ಕೆ ಬಂದಿದ್ದರು. ಆದರೆ ಸರ್ವರ್ ಸಮಸ್ಯೆ ಹಿನ್ನಲೆ ಸಂಜೆ ಕಿಲ್ಲಾ ಕೆರೆಯ ಪಕ್ಕ ಸುತ್ತಾಡಿ ಕೆರೆಯ ಪಕ್ಕದಲ್ಲಿ ಕುಳಿತಿದ್ದರು. ಇಲ್ಲಿಗೆ ಬಂದ ಪುಂಡರು ಬಲವಂತವಾಗಿ ಜೋಡಿಯನ್ನು ಕರೆದೊಯ್ದು, ಕಿಲ್ಲಾ ಕೆರೆ ಪಕ್ಕದಲ್ಲಿಯೇ ರೋಮಿನಲ್ಲಿ ಕೂಡಿಹಾಕಿ ಹಲ್ಲೆ ಮಾಡಿದ್ದಾರೆ.

ಮೂರು ಗಂಟೆಗಳ ಕಾಲ ನಿರಂತರವಾಗಿ ಹುಡುಗ- ಹುಡಗಿ ಮೇಲೆ ಹಲ್ಲೆ ಮಾಡಿದ್ದಾರೆ. ಜೋಡಿಗಳು ಮನೆಗೆ ಬಾರದಿದ್ದಾಗ ಪೋಷಕರು 112ಗೆ ಕರೆ ಮಾಡಿ ಮಾಹಿತಿ ನೀಡಿದ್ದಾರೆ. ಪೊಲೀಸರ ಲೋಕೇಶನ್ ಟ್ರೇಸ್ ಮಾಡಿ ಸ್ಥಳಕ್ಕೆ ಬಂದು ಪರಿಶೀಲನೆ ನಡೆಸಿದಾಗ ಹುಡುಗ- ಹುಡಗಿ ಪತ್ತೆಯಾಗಿದ್ದಾರೆ. ಬೆಳಗಾವಿ ಮಾರ್ಕೆಟ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

Comments (0)

Your email address will not be published. Required fields are marked *

Back to top button