Tuesday, June 24, 2025
25.9 C
Bengaluru
Google search engine
LIVE
ಮನೆ#Exclusive NewsTop NewsGSLV ರಾಕೆಟ್‌ ಹಾರಿಸಿ ಶತಕ ಹೊಡೆದ ಇಸ್ರೋ!

GSLV ರಾಕೆಟ್‌ ಹಾರಿಸಿ ಶತಕ ಹೊಡೆದ ಇಸ್ರೋ!

ಶ್ರೀಹರಿಕೋಟಾ: ಭಾರತೀಯ ಬಾಹ್ಯಾಕಾಶ ಸಂಸೋಧನಾ ಸಂಸ್ಥೆ ಶತಕದ ಸಾಧನೆ ಮಾಡಿ ಸಂಭ್ರಮಿಸಿದೆ. ಇಂದು ಬೆಳಗ್ಗೆ 100ನೇ ರಾಕೆಟ್‌ ಅನ್ನು ಯಶಸ್ವಿಯಾಗಿ ಉಡಾವಣೆ ಮಾಡುವ ಮೂಲಕ ವಿಶಿಷ್ಟ ಸಾಧನೆ ಮಾಡಿದೆ.

ಬೆಳಗ್ಗೆ 6:30ಕ್ಕೆ ಆಂಧ್ರ ಪ್ರದೇಶದಲ್ಲಿರುವ ಸತೀಶ್‌ ಧವನ್‌ ಬಾಹ್ಯಾಕಾಶ ಕೇಂದ್ರದಿಂದ ಜಿಯೋಸಿಂಕ್ರನೈಸ್ ಸ್ಯಾಟಲೈಟ್ ಲಾಂಚ್ ವೆಹಿಕಲ್ ಮೂಲಕ ನಾವಿಕ್ ಯೋಜನೆಯ ಎರಡನೇ ತಲೆಮಾರಿನ ಉಪಗ್ರಹ ಎನ್‌ವಿಎಸ್-02 ಉಡಾವಣೆಯನ್ನು ಯಶಸ್ವಿಗೊಳಿಸಿದೆ.

ಉಪಗ್ರಹ ಉಡಾವಣೆಯ ಬಳಿಕ ಮಾತನಾಡಿದ ಇಸ್ರೋ ಮುಖ್ಯಸ್ಥ ನಾರಾಯಣನ್‌, ನಿಗದಿ ಪಡಿಸಿದ ಕಕ್ಷೆಗೆ ಉಪಗ್ರಹ ನಿಖರವಾಗಿ ತಲುಪಿದೆ. 100ನೇ ಉಡಾವಣೆ ಇಸ್ರೋ ಪಾಲಿಗೆ ಮಹತ್ವದ ಮೈಲಿಗಲ್ಲು ಎಂದು ಬಣ್ಣಿಸಿದರು.

ಶ್ರೀಹರಿಕೋಟಾದಿಂದ ಆಗಸ್ಟ್ 10, 1979 ರಂದು ಮೊದಲ ರಾಕೆಟ್‌ ಉಡಾವಣೆಯಾಗಿತ್ತು. ಈಗ ಸುಮಾರು 46 ವರ್ಷಗಳ ಬಳಿಕ ಇಸ್ರೋ 100ನೇ ರಾಕೆಟ್‌ ಹಾರಿಸಿದೆ. ಇಲ್ಲಿಯವರೆಗೆ ಶ್ರೀಹರಿಕೋಟಾದಲ್ಲಿ ಎಲ್ಲಾ ದೊಡ್ಡ ರಾಕೆಟ್ ಉಡಾವಣೆಗಳು ಭಾರತ ಸರ್ಕಾರದಿಂದ ನಡೆದಿವೆ.

ಏನಿದು ನಾವಿಕ್‌?
ಇಸ್ರೋದ ಪ್ರಾದೇಶಿಕ ಸಂಚರಣೆ ಉಪಗ್ರಹ ವ್ಯವಸ್ಥೆಗೆ ಮೊದಲು ಭಾರತೀಯ ಪ್ರಾದೇಶಿಕ ಪಥದರ್ಶಕ ಉಪಗ್ರಹ ವ್ಯವಸ್ಥೆ ಎಂದು ಕರೆಯಲಾಗಿತ್ತು. ಈಗ ಇದನ್ನು ಕಾರ್ಯಾಚರಣೆ ಉದ್ದೇಶದಿಂದ ಹೆಸರಿನಿಂದ ಕರೆಯಲಾಗುತ್ತದೆ.

ಅಮೆರಿಕದ ಜಿಪಿಎಸ್ ವ್ಯವಸ್ಥೆಯಲ್ಲಿ 24 ಉಪಗ್ರಹಗಳು ಇದ್ದರೆ, ಭಾರತದ `ನಾವಿಕ್’ನಲ್ಲಿ 7 ಉಪಗ್ರಹಗಳಿವೆ. ಅಮೆರಿಕದ ಉಪಗ್ರಹಗಳು ಇಡೀ ವಿಶ್ವದ ವ್ಯಾಪ್ತಿ ಹೊಂದಿದ್ದರೆ, ನಾವಿಕ್ ಭಾರತಕ್ಕೆ ಮಾತ್ರ ಸೀಮಿತವಾಗಿದೆ.

ಐಆರ್‌ಎನ್‌ಎಸ್‌ಎಸ್ ಸರಣಿಯ ಮೊದಲ ಉಪಗ್ರಹವನ್ನು 2013ರ ಜುಲೈ 1ರಂದು ಹಾರಿಬಿಡಲಾಗಿತ್ತು. ಕೊನೆಯ ಉಪಗ್ರಹವನ್ನು 2018ರ ಏಪ್ರಿಲ್ 12 ರಂದು ಕಕ್ಷೆಗೆ ಸೇರಿಸಲಾಗಿತ್ತು. ಈ `ನಾವಿಕ್’ ಪಥನಿರ್ದೇಶನ ವ್ಯವಸ್ಥೆಗೆ 4 ಉಪಗ್ರಹ ಸಾಕಾದರೂ ಜಿಪಿಎಸ್ ವ್ಯವಸ್ಥೆಯ ಹೆಚ್ಚಿನ ನಿಖರತೆಗಾಗಿ 7 ಉಪಗ್ರಹಗಳನ್ನು ಇಸ್ರೋ ಹಾರಿಸಿತ್ತು.

ಜಿಪಿಎಸ್ ವ್ಯವಸ್ಥೆ ಹೊಂದಿರುವ ದೇಶಗಳು:
ಒಟ್ಟು 4 ಗ್ಲೋಬಲ್ ನ್ಯಾವಿಗೇಶನ್ ಸ್ಯಾಟಲೈಟ್ ಸಿಸ್ಟಂಗಳು ಇವೆ. ಅವುಗಳೆಂದರೆ ಜಿಪಿಎಸ್ (ಅಮೆರಿಕ) ಗ್ಲೋನಾಸ್ (ರಷ್ಯಾ), ಗೆಲಿಲಿಯೋ (ಯುರೋಪಿಯನ್ ಒಕ್ಕೂಟ), ಬೀಡೌ (ಚೀನಾ). 2 ಪ್ರಾದೇಶಿಕ ವ್ಯವಸ್ಥೆಗಳೆಂದರೆ, ಕ್ಯುಝಿಎಸ್‌ಎಸ್ (ಜಪಾನ್) ಹಾಗೂ ಐಆರ್‌ಎನ್‌ಎಸ್‌ಎಸ್ ಅಥವಾ ನಾವಿಕ್ (ಭಾರತ).

Website |  + posts
RELATED ARTICLES

ಪ್ರತ್ಯುತ್ತರ ಬಿಟ್ಟು

ದಯವಿಟ್ಟು ನಿಮ್ಮ ಅಭಿಪ್ರಾಯವನ್ನು ನಮೂದಿಸಿ!
ದಯವಿಟ್ಟು ನಿಮ್ಮ ಹೆಸರನ್ನು ಇಲ್ಲಿ ನಮೂದಿಸಿ

Most Popular

Recent Comments