Freedom TV

ತುಮಕೂರಿನಲ್ಲಿ ತಪ್ಪಿತ್ತು ದೊಡ್ಡ ಅನಾಹುತ

ತುಮಕೂರಿನಲ್ಲಿ ತಪ್ಪಿತ್ತು ಬಾರಿ ಅನಾಹುತ , ಸ್ಥಳಕ್ಕೆ ಬುಕ್ಕಾಪಟ್ಟಣ ಪೋಲಿಸರು ಭೇಟಿ ಮಾಡಿ ವಿಚಾರಣೆಗೆ ಮುಂದಾಗಿದ್ದಾರೆ ಪೋಲಿಸರು. ಶಾಲೆ ಪಕ್ಕದಲ್ಲೇ ಎಸೆದಿದ್ದ ಸಿಡಿಮದ್ದಿನ ಉಂಡೆ , ಆ ಸಿಡಿಮದ್ದಿನ ಉಂಡೆಯನ್ನು ಶಾಲಾ ಮಕ್ಕಳು ಬಾಲ್ ಅಂತ ತಿಳಿದು ಆಟವಾಡುತ್ತಿದ್ದರು. ತಕ್ಷಣ ಎಚ್ಚೆತ್ತುಕೊಂಡ ಯುವರಾಜ್ ಆತನ ತಂದೆಯ ಕೈಗೆ ನೀಡಿದ್ದರು. ಮಕ್ಕಳ ಕೈ ಸಿಕ್ಕಿತ್ತು ಹಂದಿ ಬೇಟೆಗೆ ಬಳಸುವ ಸಿಡಿ ಮದ್ದಿನ ಹುಂಡೆ.ತುಮಕೂರು ಜಿಲ್ಲೆ ಚಿಕ್ಕನಾಯನಕನಹಳ್ಳಿ ತಾಲ್ಲೂಕಿನ ಮಾದೇನಹಳ್ಳಿಯಲ್ಲಿ ನಡೆದಿರುವ ಘಟನೆ.

ಶಾಲೆ ಪಕ್ಕದಲ್ಲೇ ಎಸೆದಿದ್ದ ಸಿಡಿಮದ್ದಿನ ಉಂಡೆ.ಸಿಡಿ ಮದ್ದಿನ ಉಂಡೆಯನ್ನು ಬಾಲ್ ಅಂತ ಭಾವಿಸಿದ್ದ ಬಾಲಕ.ಸಿಡಿ ಮದ್ದಿನ ಉಂಡೆಯನ್ನು ಕೈಯಲ್ಲಿ ಹಿಡಿದು ಓಡಾಡಿದ್ದ ಮಕ್ಕಳು.ಯುವರಾಜ ಹಾಗೂ ಶ್ರೀನಿವಾಸ್ ಎಂಬ ಬಾಲಕರಿಗೆ ಸಿಕ್ಕಿದ್ದ ಸ್ಪೋಟಕ.ಶ್ರೀನಿವಾಸ್ ನಿಗೆ ನೀಡಿದ್ದ ಯುವರಾಜ.ಆ ಸ್ಪೋಟಕ ಉಂಡೆಯನ್ನು ತಂದೆಗೆ ನೀಡಿದ್ದ ಶ್ರೀನಿವಾಸ್.ಇದು ಯಾವುದೋ ಮಾಟ ಮಂತ್ರದ ಬಾಲ್ ಇರಬೇಕೆಂದು ಭಾವಿಸಿದ ಶ್ರೀನಿವಾಸ್ ತಂದೆ ಅದನ್ನು ದೂರಕ್ಕೆ ಎಸೆದಿದ್ದರು.

ಶ್ರೀನಿವಾಸ್ ತಂದೆ ಎಸೆದ ಬಾಲನ್ನು ಬಾಯಲ್ಲಿ ಕಚ್ಚಿದ್ದ ಬೀದಿನಾಯಿ,ನಾಯಿ ಕಚ್ಚುತ್ತಿದ್ದಂತೆ ಸ್ಫೋಟಗೊಂಡ ಮದ್ದಿನ ಉಂಡೆ.ಸ್ಫೋಟಗೊಳ್ಳುತ್ತಿದ್ದಂತೆ ಬಾಯಿ ಛಿದ್ರಗೊಂಡ ಸ್ಥಳದಲ್ಲೇ ಪ್ರಾಣ ಬಿಟ್ಟ ನಾಯಿ.ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾದ ಬಾಲಕ.ಹಂದಿ ಬೇಟೆಯಾಡಲು ಬಳಸುವ ಮದ್ದಿನ ಉಂಡೆ ಶಾಲೆ ಪಕ್ಕದಲ್ಲಿ ಎಸೆದರು ಯಾರು ? ಸ್ಥಳಕ್ಕೆ ಬುಕ್ಕಾಪಟ್ಟಣ ಪೊಲೀಸರು ಭೇಟಿ.ಮಕ್ಕಳೊಂದಿಗೆ ಮಾಹಿತಿ ಪಡೆದು ವಿಚಾರಣೆ ಮುಂದುವರೆಸಿದ ಪೊಲೀಸರು.

Comments (0)

Your email address will not be published. Required fields are marked *

Back to top button