Top Newsರಾಜ್ಯಸುದ್ದಿ

ಬಾಹ್ಯಾಕಾಶ ತಂತ್ರಜ್ಞಾನದ ಸ್ಟಾರ್ಟ್‌ಅಪ್ ಪಿಕ್ಸೆಲ್ ಬಗ್ಗೆ ಮೋದಿ ಮೆಚ್ಚುಗೆ

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಭಾನುವಾರ ವರ್ಷದ ಮನ್ ಕಿ ಬಾತ್ ರೇಡಿಯೊ ಕಾರ್ಯಕ್ರಮದ ಮೊದಲ ಆವೃತ್ತಿಯನ್ನು ಉದ್ದೇಶಿಸಿ ಮಾತನಾಡಿದರು. ಈ ವೇಳೆ ದೇಶದ ಬಾಹ್ಯಾಕಾಶ ಕ್ಷೇತ್ರವನ್ನು ಬಲಪಡಿಸುವಲ್ಲಿ ಮಹತ್ವದ ಕೊಡುಗೆಗಾಗಿ ಬೆಂಗಳೂರು ಮೂಲದ ಖಾಸಗಿ ಬಾಹ್ಯಾಕಾಶ ತಂತ್ರಜ್ಞಾನ ಸ್ಟಾರ್ಟ್ಅಪ್ ಪಿಕ್ಸೆಲ್ ಅನ್ನು ಮೆಚ್ಚುಗೆಯನ್ನು ವ್ಯಕ್ತಪಡಿಸಿದರು.

ಇತ್ತೀಚೆಗೆ, ಬಾಹ್ಯಾಕಾಶ-ತಂತ್ರಜ್ಞಾನದ ಸ್ಟಾರ್ಟ್ಅಪ್ ಪಿಕ್ಸೆಲ್ ಭಾರತಕ್ಕೆ ಮೊದಲ ಖಾಸಗಿ ಭೂಮಿಯ ಚಿತ್ರಣ ನೀಡುವ ಉಪಗ್ರಹ ಸಮೂಹವನ್ನು ಕೊಡುವ ಮೂಲಕ ಐತಿಹಾಸಿಕ ಸಾಧನೆಯನ್ನು ಸಾಧಿಸಿದೆ. ಪಿಕ್ಸೆಲ್ ಅಭಿವೃದ್ಧಿಪಡಿಸಿದ ಉಪಗ್ರಹ ಸಮೂಹಕ್ಕೆ ‘ಫೈರ್‌ಫ್ಲೈ’ ಎಂದು ಹೆಸರಿಸಲಾಗಿದೆ.

ಮನ್ ಕಿ ಬಾತ್‌ನ 118 ನೇ ಸಂಚಿಕೆಯಲ್ಲಿ, “ಭಾರತದ ಬಾಹ್ಯಾಕಾಶ-ತಂತ್ರಜ್ಞಾನದ ಸ್ಟಾರ್ಟ್‌ಅಪ್ ಬೆಂಗಳೂರಿನ ಪಿಕ್ಸೆಲ್ ಭಾರತದ ಮೊದಲ ಖಾಸಗಿ ಉಪಗ್ರಹ ಸಮೂಹ ‘ಫೈರ್‌ಫ್ಲೈ’ ಅನ್ನು ಯಶಸ್ವಿಯಾಗಿ ಉಡಾವಣೆ ಮಾಡಿದೆ ಎಂದು ಹೇಳಲು ನಾನು ಇಂದು ಹೆಮ್ಮೆಪಡುತ್ತೇನೆ. ಇದು ವಿಶ್ವದ ಅತಿ ಹೆಚ್ಚು ರೆಸಲ್ಯೂಶನ್ ಹೈಪರ್‌ಸ್ಪೆಕ್ಟ್ರಲ್ ಉಪಗ್ರಹ ಸಮೂಹವಾಗಿದೆ” ಎಂದು ತಿಳಿಸಿದರು.

Comments (0)

Your email address will not be published. Required fields are marked *

Back to top button