Top Newsರಾಜ್ಯಸುದ್ದಿ

ಬ್ರೇಕ್ ಫೇಲ್ ಆಗಿ ಡಾಬಾ, ಬೀಡಾ ಅಂಗಡಿಗೆ ನುಗ್ಗಿದ ಬಿಎಂಟಿಸಿ ಬಸ್!

ಬೆಂಗಳೂರು: ಇತ್ಬಿತೀಚಿಗೆ ರಾಜಧಾನಿಯಲ್ಲಿ ಬಿಎಂಟಿಸಿ ಬಸ್​​ಗಳ ಅವ್ಯವಸ್ಥೆಗಳು ಪದೇ ಪದೇ ನೋಡಬಹುದು. ಅದೇ ರೀತಿ ಇಲ್ಲೊಂದು ಬಿಎಂಟಿಸಿ ಎಲೆಕ್ಟ್ರಿಕಲ್ ಬಸ್ ಬ್ರೇಕ್ ಫೇಲ್ ಆಗಿ ಬೀಡಾ ಅಂಗಡಿ ಹಾಗೂ ಡಾಬಾ ಗೋಡೆಗೆ ಡಿಕ್ಕಿಯಾದ ಘಟನೆ ನಾಗದೇವನಹಳ್ಳಿ ರಸ್ತೆಯಲ್ಲಿ ನಡೆದಿದೆ.

ಬೆಳಗ್ಗೆ 6:27ರ ಸುಮಾರಿಗೆ ಬಸ್ ಶಿರ್ಕೆ ಸರ್ಕಲ್‌ನಿಂದ ನಾಗರಭಾವಿ ಕಡೆ ಹೊರಟಿತ್ತು. ಈ ಸಮಯದಲ್ಲಿ ಬಸ್ ಅಪಘಾತ ಘಟನೆ ನಡೆದಿದೆ. ಅಪಘಾತದ ವೇಳೆ ರಸ್ತೆಯಲ್ಲಿ ಯಾರು ಇಲ್ಲದ ಕಾರಣ ಭಾರೀ ಅನಾಹುತ ತಪ್ಪಿದಂತಾಗಿದೆ. ಅವಘಡದಿಂದ ಬಸ್‌ನಲ್ಲಿದ್ದ ಮೂವರು ಪ್ರಯಾಣಿಕರು ಕೆಲ ಸಮಯ ಆತಂಕಕ್ಕೆ ಒಳಗಾಗಿದ್ದರು.

ಅಪಘಾತದ ವಿಡಿಯೋ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ವಿಡಿಯೋ ಎದೆ ನಡುಗಿಸುವಂತಿದೆ.

Comments (0)

Your email address will not be published. Required fields are marked *

Back to top button