SportsTop Newsಕ್ರಿಕೆಟ್ಸುದ್ದಿ

IPL 2025: ಮಾರ್ಚ್‌ 23 ರಿಂದ ಐಪಿಎಲ್‌ ಆರಂಭ : ಬಿಸಿಸಿಐ ಘೋಷಣೆ

ಮುಂಬೈ: 2025ರ (IPL) ಇಂಡಿಯನ್‌ ಪ್ರೀಮಿಯರ್‌ ಲೀಗ್‌ ಇದೇ ಮಾರ್ಚ್‌ 23ರಿಂದ ಆರಂಭವಾಗಲಿದೆ ಎಂದು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿಯ  ಉಪಾಧ್ಯಕ್ಷರಾದ ರಾಜೀವ್‌ ಶುಕ್ಲಾ ತಿಳಿಸಿದ್ದಾರೆ.

ಮುಂಬೈನಲ್ಲಿ ನಡೆದ ವಿಶೇಷ ಸಭೆಯಲ್ಲಿ ಭಾಗವಹಿಸಿದ್ದ ಶುಕ್ಲಾ ಅವರು ಮಾಧ್ಯಮಗಳ ಜತೆ ಮಾತನಾಡಿದ ಅವರು, ಕಳೆದ ನವೆಂಬರ್ 24 ಮತ್ತು 25 ರಂದು ಜೆಡ್ಡಾದಲ್ಲಿ ನಡೆದ ಮೆಗಾ ಹರಾಜಿನಲ್ಲಿ ಎಲ್ಲಾ 10 ಫ್ರಾಂಚೈಸಿಗಳು ಈಗಾಗಲೇ ತಮ್ಮ ತಂಡವನ್ನು ಆಯ್ಕೆ ಮಾಡಿವೆ. ಹರಾಜು ಮುಗಿದ ನಂತರ ಲೀಗ್ ಯಾವಾಗ ಆರಂಭವಾಗುತ್ತದೆ ಎಂಬ ಬಗ್ಗೆ ಊಹಾಪೋಹಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದವು. ಈಗ ಮಾರ್ಚ್ 23ರಿಂದ ಐಪಿಎಲ್ ಪ್ರಾರಂಭವಾಗಲಿದೆ ಎಂದು ಮಾಹಿತಿ ಹೊರ ಬಿದ್ದಿದೆ.

Comments (0)

Your email address will not be published. Required fields are marked *

Back to top button