#Exclusive NewsTop Newsಮನರಂಜನೆಸುದ್ದಿ

ಸಿದ್ದಗಂಗಾ ಮಠಕ್ಕೆ ನಟ ಡಾಲಿ ಧನಂಜಯ್‌  ಭೇಟಿ

ತುಮಕೂರಿನ ಸಿದ್ದಗಂಗಾ ಮಠಕ್ಕೆ ನಟ ಡಾಲಿ ಧನಂಜಯ್‌  ಭೇಟಿ ನೀಡಿದ್ದಾರೆ. ವಿವಾಹ ಸಮಾರಂಭಕ್ಕೆ ಆಗಮಿಸುವಂತೆ ಸಿದ್ದಗಂಗಾ ಶ್ರೀಗಳಿಗೆ ಡಾಲಿ ಆಹ್ವಾನ ನೀಡಿದ್ದಾರೆ.ನಟ ಡಾಲಿ ಧನಂಜಯ ಅವರು ಇತ್ತಿಚಿಗೆ ಸುತ್ತುರು  ಮಠಕ್ಕೆ ಭೇಟಿ ನೀಡಿ ನಂದಿ ಧ್ವಜ ಕಂಬ ಹಿಡಿದು ಕುಣಿದು ಕುಪ್ಪಳಿಸಿದರು.ಈಗ  ಸಿದ್ದಗಂಗಾ ಮಠಕ್ಕೆ ಬೇಟಿ ನೀಡಿ  ಮಠಾಧ್ಯಕ್ಷ ಸಿದ್ದಲಿಂಗ ಸ್ವಾಮಿಗಳ ಆಶೀರ್ವಾದ ಪಡೆದರು.

ಮೊದಲು ಶಿವಕುಮಾರ ಶ್ರೀಗಳ ಗದ್ದಿಗೆಗೆ ಪೂಜೆ ಸಲ್ಲಿಸಿದರು. ಲಗ್ನ ಪತ್ರಿಕೆ ಪೂಜೆ ಮಾಡಿಸಿದರು. ಬಳಿಕ ಸಿದ್ದಗಂಗಾ ಮಠಾಧ್ಯಕ್ಷ ಸಿದ್ದಲಿಂಗ ಸ್ವಾಮಿಗಳ ಆಶೀರ್ವಾದ ಪಡೆದರು. ಈ ವೇಳೆ ಸ್ನೇಹಿತರು ಜೊತೆಗಿದ್ದರು. ಇದೇ ಫೆ.16ಕ್ಕೆ ವೈದ್ಯೆ ಧನ್ಯತಾ ಅವರೊಂದಿಗೆ ಸ್ಯಾಂಡಲ್‌ವುಡ್‌ ನಟ ಡಾಲಿ ಧನಂಜಯ್‌ ಹಸೆಮಣೆ ಏರಲಿದ್ದಾರೆ. ಕಳೆದ ವರ್ಷ ನ.17 ರಂದು ವೈದ್ಯೆಯೊಂದಿಗೆ ಸರಳವಾಗಿ ನಟ ನಿಶ್ಚಿತಾರ್ಥ ಮಾಡಿಕೊಂಡಿದ್ದರು.

Comments (0)

Your email address will not be published. Required fields are marked *

Back to top button