Top Newsರಾಜ್ಯಸುದ್ದಿ

New Year Celebrations: ಬೆಂಗಳೂರು ಜನರಿಗೆ ನ್ಯೂ ಇಯರ್ ಕಂಡೀಷನ್ಸ್ ಪೊಲೀಸ್ ಇಲಾಖೆಯ ಟಫ್ ರೂಲ್ಸ್

ಬೆಂಗಳೂರು: ಹೊಸ ವರ್ಷಾಚರಣೆಯಲ್ಲಿ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಬೆಂಗಳೂರು ಪೊಲೀಸ್ ಇಲಾಖೆ ಸಾಕಷ್ಟು ತಯಾರಿ ಮಾಡಿಕೊಳ್ಳುತ್ತಿದ್ದಾರೆ. ಬಿಬಿಎಂಪಿ, ಅಗ್ನಿಶಾಮಕ ದಳ, ಬೆಸ್ಕಾಂ, ಬಿಎಂಟಿಸಿ, ಮೆಟ್ರೋ ಜೊತೆ ಚರ್ಚೆ ನಡೆಸಿರುವ ಪೊಲೀಸರು ಎಲ್ಲಾ ಕಡೆ ಬ್ಯಾರಿಕೇಡ್ ವ್ಯವಸ್ಥೆ ಮಾಡಲಾಗಿದೆ ಎಂದು ಬೆಂಗಳೂರು ನಗರ ಕಮೀಷನರ್ ಬಿ ದಯಾನಂದ್ ಸುದ್ದಿಗೋಷ್ಠಿ ನಡೆಸಿ ಮಾಹಿತಿ ನೀಡಿದ್ದಾರೆ.

ಸಂಬಂಧ ಪಟ್ಟ ಇಲಾಖೆಗಳ ಜೊತೆ ಮೂರು ಸುತ್ತಿನ ಸಭೆ ನಡೆಸಿದ್ದು, ಇಂದಿರಾನಗರ, ಕೋರಮಂಗಲ ಪ್ರದೇಶಗಳಲ್ಲಿ ಹೆಚ್ಚಿನ ಭದ್ರತೆ ಕೈಗೊಳ್ಳಲಾಗುವುದು ಎಂದು ಕಮಿಷನರ್ ತಿಳಿಸಿದ್ದಾರೆ. ಅತಿ ಹೆಚ್ಚಿನ ಜನರು ಸೇರುವ ಎಂ ಜಿ ರಸ್ತೆ, ಬಿಗ್ರೇಡ್ ರಸ್ತೆಯಲ್ಲಿ ಹೆಚ್ಚಿನ ಭದ್ರತೆಗೆ ವ್ಯವಸ್ಥೆ ಮಾಡಲಾಗುವುದು ಎಂದು ದಯಾನಂದ್ ತಿಳಿಸಿದ್ದಾರೆ.

ಮಹಿಳಾ ಸುರಕ್ಷತೆಗೆ ಹೈಲ್ಯಾಂಡ್ ಸ್ಥಾಪನೆ, ವಾಚ್ ಟವರ್, ಶ್ವಾನ ದಳ ವ್ಯವಸ್ಥೆ. ಡ್ರೋನ್ ಕ್ಯಾಮರಾ ಮೂಲಕ ಹೆಚ್ಚಿನ ನಿಗಾ, ಸಿಸಿಟಿವಿಗಳನ್ನ ಹೆಚ್ಚಿನ ಸಂಖ್ಯೆಯಲ್ಲಿ ಅಳವಡಿಕೆ ಸೇರಿದಂತೆ ಅನೇಕ ಕ್ರಮಗಳನ್ನು ಕೈಗೊಳ್ಳಲಾಗುವುದು ಎಂದು ಕಮಿಷನರ್ ದಯಾನಂದ್ ಮಾಹಿತಿ ನಿಡಿದರು. ಬ್ರಿಗೇಡ್ ರಸ್ತೆಗೆ ಕಾವೇರಿ ಎಪೋರಿಯಂನಿಂದ ಎಂಟ್ರಿ. ಏಕಮುಖ ಸಂಚಾರ ವ್ಯವಸ್ಥೆ ಮಾಡಲು ಸೂಚನೆ ನೀಡಲಾಗಿದೆ. ಬಾರ್ ಆ್ಯಂಡ್ ರೆಸ್ಟೋರೆಂಟ್ ಮಾಲೀಕರ ಜೊತೆ ಸಭೆ ನಡೆಸಲಾಗಿದೆ ಎಂದು ತಿಳಿಸಿದರು. ರಾತ್ರಿ 1 ಗಂಟೆ ತನಕ ಹೊಸ ವರ್ಷ ಆಚರಣೆಗೆ ಸಮಯ ನಿಗದಿ ಮಾಡಲಾಗಿದೆ. ಎಲ್ಲಾ ಫೈ ಓವರ್​ಗಳನ್ನು ಮುಚ್ಚಲಾಗುವುದು ಎಂದು ತಿಳಿಸಿದ್ದಾರೆ. ನಗರದ ಹೊರವಲಯದ ರೇವ್ ಪಾರ್ಟಿಗಳ ಮೇಲೆ ನಿಗಾ ಇಡಲಾಗುವುದು ಅಲ್ಲದೆ ಅನಧಿಕೃತವಾಗಿ ಆಯೋಜನೆ ಮಾಡುವವರ ವಿರುದ್ದ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ.

11 ಗಂಟೆ ನಂತರ ಎಂಜಿ ರಸ್ತೆ ಮೆಟ್ರೊ ಸ್ಟೇಷನ್ ಕ್ಲೋಸ್ ಮಾಡಲಾಗುವುದು ಎಂದು ಕಮಿಷನರ್ ತಿಳಿಸಿದ್ದಾರೆ. ಹೆಚ್ಚಿನ ಸಂಖ್ಯೆಯಲ್ಲಿ ಜನ ಸೇರುವ ಹಿನ್ನಲೆ, ಕೇವಲ ಬಂದು ಇಳಿಯಲು ಮಾತ್ರ ಅವಕಾಶ ನೀಡಲಾಗುವುದು. ಆದರೆ, ವಾಪಸ್ ಹೋಗಲು ಟ್ರಿನಿಟಿ ಸರ್ಕಲ್ ಅಥವಾ ಕಬ್ಬನ್ ಪಾರ್ಕ್​ಗೆ ಹೋಗಬೇಕು ಎಂದು ಮಾಹಿತಿ ನೀಡಿದ್ದಾರೆ. ಎಂಜಿ ರಸ್ತೆ, ಬಿಗ್ರೇಡ್ ರಸ್ತೆ, ಕ್ಲಬ್, ಪಬ್​ಗಳು, ರೆಸ್ಟೋರೆಂಟ್​ಗಳಲ್ಲಿ ಫೇಸ್ ಮಾಸ್ಕ್ ನಿಷೇಧ ಮಾಡಲಾಗಿದ್ದು, ಯಾರು ಕೂಡ ಫೇಸ್ ಮಾಸ್ಕ್ ಧರಿಸುವಂತಿಲ್ಲ. ಡಿಸೆಂಬರ್ 31 ರಾತ್ರಿ 8 ಗಂಟೆಯಿಂದ ಜನವರಿ 1ರ ಬೆಳಗ್ಗೆವರೆಗೆ ಎಂಜಿ ರಸ್ತೆಯಿಂದ ಅನಿಲ್ ಕುಂಬ್ಳೆ ಸರ್ಕಲ್, ಮೆಯೋ ಹಾಲ್ ಬಳಿಯ ರೆಸಿಡೆನ್ಸಿ ರಸ್ತೆ ಜಂಕ್ಷನ್ ವರೆಗೆ ಸಂಚಾರ ನಿಷೇಧಿಸಲಾಗಿದೆ ಎಂದು ಮಾಹಿತಿ ನೀಡಿದರು.

ವಿಶೇಷವಾಗಿ ಕೇಂದ್ರ ವಿಭಾಗದ ಬಿಗ್ರೇಡ್ ರಸ್ತೆಯಲ್ಲಿ ಭದ್ರತೆಗಾಗಿ 5 ಡಿಸಿಪಿ, 18 ಎಸಿಪಿ, 41 ಪೊಲೀಸ್ ಇನ್ಸ್‌ಪೆಕ್ಟರ್ ಸೇರಿದಂತೆ 2572 ಪೊಲೀಸರನ್ನು ನಿಯೋಜನೆ ಮಾಡಲಾಗುವುದು. ಪೊಲೀಸ್ ಕಿಯೋಸ್ಕ್​ಗಳನ್ನ ನಿರ್ಮಾಣ ಮಾಡಲಾಗುವುದು. ನಗರದಲ್ಲಿ ಭದ್ರತೆಗೆ 11830 ಪೊಲೀಸರನ್ನು ನಿಯೋಜನೆ ಮಾಡಲಾಗುವುದು. 2 ಹೆಚ್ಚುವರಿ ಪೊಲೀಸ ಆಯುಕ್ತರು, 1 ಜಂಟಿ ಪೊಲೀಸ್ ಆಯುಕ್ತ, 15 ಡಿಸಿಪಿ, 44 ಎಸಿಪಿಗಳು, 135 ಇನ್ಸ್‌ಪೆಕ್ಟರ್​ಗಳು, ಸಿವಿಲ್ ಡಿಫೆನ್ಸ್ 800, 1048 ಮಹಿಳಾ ಸಿಬ್ಬಂದಿ, 72 ಕೆಎಸ್ಆರ್​ಪಿ ತುಕಡಿ, 21 ಸಿಎಆರ್ ತುಕಡಿ ಯನ್ನು ನಿಯೋಜನೆ ಮಾಡಲಾಗುವುದು ಎಂದು ಕಮಿಷನರ್ ಮಾಹಿತಿ ನೀಡಿದರು.

Comments (0)

Your email address will not be published. Required fields are marked *

Back to top button