Tuesday, June 24, 2025
25.9 C
Bengaluru
Google search engine
LIVE
ಮನೆ#Exclusive NewsTop Newsಮನೆಬಿಟ್ಟು ಬಂದ 253 ಮಕ್ಕಳ ರಕ್ಷಣೆ ಮಾಡಿದ RPF ತಂಡ

ಮನೆಬಿಟ್ಟು ಬಂದ 253 ಮಕ್ಕಳ ರಕ್ಷಣೆ ಮಾಡಿದ RPF ತಂಡ

ಬೆಂಗಳೂರು: 2024 ರಲ್ಲಿ ರೈಲ್ವೆ ರಕ್ಷಣಾ ಪಡೆಯ ಮಕ್ಕಳ ಕಳ್ಳಸಾಗಣೆ ವಿರೋಧಿ ಘಟಕದಿಂದ 49 ಬಾಲಕಿಯರು ಸೇರಿದಂತೆ ಒಟ್ಟು 253 ಮಕ್ಕಳನ್ನು  ರಕ್ಷಿಸಲಾಗಿದೆ. ರೈಲಿನಲ್ಲಿ ಪ್ರಯಾಣಿಸುವ ದುರ್ಬಲ ಮಕ್ಕಳ ಸುರಕ್ಷತೆ ಖಾತ್ರಿ ನಿಟ್ಟಿನಲ್ಲಿ ಈ ವಿಶೇಷ ಪಡೆ, ‘ನನ್ಹೆ ಫರಿಷ್ಟೆಯನ್ನು  ಮೇ 2018 ರಲ್ಲಿ ಭಾರತೀಯ ರೈಲ್ವೆಯಾದ್ಯಂತ ಸ್ಥಾಪಿಸಲಾಯಿತು. ಕಳೆದ ವರ್ಷಕ್ಕೆ ಹೋಲಿಸಿದರೆ ಡಿಸೆಂಬರ್‌ ನಲ್ಲಿ ಈ ಸಂಖ್ಯೆ ಹೆಚ್ಚಾಗಿದೆ. 2023ರ ಜನವರಿಯಿಂದ ಡಿಸೆಂಬರ್‌ವರೆಗೆ 50 ಬಾಲಕಿಯರು ಸೇರಿದಂತೆ ಒಟ್ಟು 237 ಮಕ್ಕಳನ್ನು ರಕ್ಷಿಸಲಾಗಿತ್ತು.

RPF ಹಿರಿಯ ವಿಭಾಗೀಯ ಭದ್ರತಾ ಕಮಿಷನರ್ ಶ್ರೇಯನ್ಸ್ ಚಿಂಚವಾಡೆ ಮಾತನಾಡಿ, “ರೈಲ್ವೆ ರಕ್ಷಣಾ ಪಡೆ, ಸರ್ಕಾರಿ ರೈಲ್ವೆ ಪೊಲೀಸರು ಬಚಾಪನ್ ಬಚಾವೋ ಆಂದೋಲನದೊಂದಿಗೆ ಮಕ್ಕಳ ಸುರಕ್ಷಿತ ಸಂಚಾರಕ್ಕಾಗಿ ರೈಲುಗಳು ಮತ್ತು ನಿಲ್ದಾಣದಲ್ಲಿ ನಿರಂತರವಾಗಿ ಮೇಲ್ವಿಚಾರಣೆ ಮಾಡುತ್ತಿದ್ದಾರೆ. ರೈಲ್ವೆ ನಿಲ್ದಾಣದಲ್ಲಿ ತೊಂದರೆಯಲ್ಲಿರುವ ಯಾವುದೇ ಮಕ್ಕಳಿಗೆ ತಿಳಿಸಲು ರೈಲ್ವೆ ಸಹಾಯವಾಣಿ 139 ಲಭ್ಯವಿದೆ ಎಂದು ತಿಳಿಸಿದರು.

ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಜೊತೆಗೆ ಮಾತನಾಡಿದ ಬೆಂಗಳೂರು ಹೆಚ್ಚುವರಿ ವಿಭಾಗೀಯ ರೈಲ್ವೆ ಮ್ಯಾನೇಜರ್, ಪರೀಕ್ಷಿತ್ ಮೋಹನ್‌ಪುರಿಯಾ, ಈ 253 ಮಕ್ಕಳನ್ನು ಸಂಭಾವ್ಯ ಶೋಷಣೆಯಿಂದ ರಕ್ಷಿಸಲಾಗಿದೆ. ಈ ಮಕ್ಕಳ ಪೈಕಿ ಬಹುಪಾಲು ಮಕ್ಕಳನ್ನು ಬಾಲಕಾರ್ಮಿಕತೆ, ವೇಶ್ಯಾವಾಟಿಕೆ ಮತ್ತಿತರ ಹೀನ ಕೆಲಸಗಳಲ್ಲಿ ಬಳಸಿಕೊಳ್ಳಲಾಗುತ್ತದೆ. ಕೆಲ ಮಕ್ಕಳು ಪೋಷಕರೊಂದಿಗ ಸಣ್ಣ ಜಗಳ ಅಥವಾ ಪರೀಕ್ಷೆಗಳಲ್ಲಿ ಕಳಪೆ ಸಾಧನೆ ನಂತರ ಮನೆ ಬಿಟ್ಟು ಬರುತ್ತಿದ್ದಾರೆ ಎಂದು ಮತ್ತೋರ್ವ ಅಧಿಕಾರಿ ತಿಳಿಸಿದರು.ರಕ್ಷಣಾ ಕ್ರಮಗಳ ಬಗ್ಗೆ ವಿವರಿಸಿದ ಮೋಹನ್ ಪುರಿಯಾ, ರಕ್ಷಿಸಿದ ಮಕ್ಕಳನ್ನು ಜಿಲ್ಲಾ ಮಕ್ಕಳ ರಕ್ಷಣಾ ಸಮಿತಿ ಮತ್ತು ಎನ್ ಜಿಒಗಳಿಗೆ ಹಸ್ತಾಂತರಿಸಲಾಗುತ್ತದೆ. ನಂತರ ಮಕ್ಕಳ ಕಲ್ಯಾಣ ಸಮಿತಿಗೆ ಕಳುಹಿಸಲಾಗುತ್ತದೆ. ಈ ಸಮಿತಿಗಳು ಸಮಾಲೋಚನೆ ನಡೆಸಿದ ಬಳಿಕ ಪುನರ್ವಸತಿ ಕೇಂದ್ರಕ್ಕೆ ಕಳುಹಿಸಲಾಗುವುದು ಎಂದು ತಿಳಿಸಿದರು.

 

 

 

 

 

+ posts
RELATED ARTICLES

ಪ್ರತ್ಯುತ್ತರ ಬಿಟ್ಟು

ದಯವಿಟ್ಟು ನಿಮ್ಮ ಅಭಿಪ್ರಾಯವನ್ನು ನಮೂದಿಸಿ!
ದಯವಿಟ್ಟು ನಿಮ್ಮ ಹೆಸರನ್ನು ಇಲ್ಲಿ ನಮೂದಿಸಿ

Most Popular

Recent Comments