Top Newsರಾಜ್ಯ

ವಿಜಯಪುರದ ಸಮೈರಾ ಈಗ ದೇಶದ ಅತ್ಯಂತ ಕಿರಿಯ ಪೈಲಟ್​

ದೇಶದ ಅತ್ಯಂತ ಕಿರಿಯ ಪೈಲಟ್​ ಎಂಬ ಹೆಗ್ಗಳಿಕೆಗೆ ವಿಜಯಪುರ ಜಿಲ್ಲೆಯ ಯುವತಿಯೊಬ್ಬರು ಪಾತ್ರರಾಗಿದ್ದಾರೆ..18 ವರ್ಷದ ಸಮೈರಾ ಹುಲ್ಲೂರು ಕಮರ್ಶಿಯಲ್ ಪೈಲಟ್ ಲೈಸೆನ್ಸ್​ ಪಡೆಯುವ ಮೂಲಕ ಅಭೂತಪೂರ್ವ ಸಾಧನೆಗೈದಿದ್ದಾರೆ. ಇವರ ಸಾಧನೆಯಿಂದ ಕುಟುಂಬದಲ್ಲಿ ಸಂತೋಷ ಮನೆ ಮಾಡಿದೆ. ಇತಿಹಾಸ ಸೃಷ್ಟಿಸಿರುವ ಸಮೈರಾ ವಿಜಯಪುರ ಜಿಲ್ಲೆ ಮಾತ್ರವಲ್ಲದೇ ರಾಜ್ಯದ ಕೀರ್ತಿಯ ಪತಾಕೆಯನ್ನು ಹಾರಿಸಿದ್ದಾರೆ.

ವಿಜಯಪುರದಲ್ಲಿ ಶಿಕ್ಷಣ  ಮುಗಿಸಿದ ಬಳಿಕ 6 ತಿಂಗಳ ಕಾಲ ದೆಹಲಿಯಲ್ಲಿ ಪೈಲಟ್ ಟ್ರೇನಿಂಗ್ ಮುಗಿಸಿದ್ದರು.. 18ನೇ ವಯಸ್ಸಿಗೆ ಪೈಲಟ್ ಆಗಿ ಹೊರಹೊಮ್ಮಿದ್ದಾರೆ. 25ನೇ ವಯಸ್ಸಿಗೆ ಪೈಲಟ್ ಆಗಿರುವ ಕ್ಯಾಪ್ಟನ್ ತಪೇಶ್ ಕುಮಾರ್ ಇವರ ಈ ಸಾಧನೆಗೆ ಪ್ರೇರಣೆಯಾಗಿದ್ದಾರೆ. ಸಮೈರಾಳ ಸಾಧನೆಗೆ ಜಿಲ್ಲೆ, ರಾಜ್ಯ ಹಾಗೂ ದೇಶದ ಹಲವೆಡೆಯಿಂದ ಶುಭಾಶಯಗಳ ಮಹಾಪೂರ ಹರಿದು ಬರುತ್ತಿದೆ.

Comments (0)

Your email address will not be published. Required fields are marked *

Back to top button