
ಟೀಮ್ ಇಂಡಿಯಾ ಸ್ಪಿನ್ ಮೆಜಿಶಿಯನ್ ಎಂದು ಹೆಸರು ಪಡೆದ ಯುಜುವೇಂದ್ರ ಚಹಲ್ ಪತ್ನಿ ಧನಶ್ರೀ ವರ್ಮಾಗೆ ಒಂದು ಬಿಗ್ ಬಜೆಟಿನ ಸಿನಿಮಾದಲ್ಲಿ ಆಫರ್ ಬಂದಿದೆ. ಚಹಲ್ ಪತ್ನಿಯ ಡಾನ್ಸ್ಗೆ ಫುಲ್ ದಿಲ್ ಖುಷ್ ಆಗಿರೋ ಟಾಲಿವುಡ್ನ ಟಾಪ್ ನಿರ್ಮಾಪಕರೊಬ್ಬರು ಸಿನಿಮಾದಲ್ಲಿ ಆಫರ್ ಕೊಟ್ಟಿದ್ದಾರೆ. ಚಹಲ್ ಪತ್ನಿಗೆ ಬಂದಿರೋ ಬೊಂಬಾಟ್ ಆಫರ್ ಏನು ಎಂದು ಚಹಲ್ ಅಭಿಮಾನಿಗಳಲ್ಲಿ ಕುತುಹಲ ಹೇಚ್ಚಾಗಿದೆ.
ಧನಶ್ರೀ ವರ್ಮಾಗೆ ಈ ಹೈ ಎನರ್ಜಿಯ ಜಬರ್ದಸ್ತ್ ಡ್ಯಾನ್ಸ್ ಮಾಡುತ್ತಾರೆ. ಈ ಸುಂದರಿ ಟೀಮ್ ಇಂಡಿಯಾದ ಸ್ಪಿನ್ ಮೆಜಿಶಿಯನ್ ಯುಜುವೇಂದ್ರ ಚಹಲ್ರ ಪತ್ನಿ. ಇವರು ಸೋಷಿಯಲ್ ಮೀಡಿಯಾದಲ್ಲಿ ಯಾವಾಗ್ಲೂ ಟ್ರೆಂಡಿಂಗ್ನಲ್ಲಿರ್ತಾರೆ. ಸಖತ್ ಸ್ಟೆಪ್ಸ್ಗಳನ್ನ ಹಾಕೋ ಧನಶ್ರೀಯ ಡ್ಯಾನ್ಸ್ ವಿಡಿಯೋಗಳಂತೂ ಸೆನ್ಸೇಷನ್ ಸೃಷ್ಟಿಸಿ ಬಿಡುತ್ತವೆ. ಈಕೆಯಲ್ಲಿರುವ ಡಾನ್ಸ್ ಕಲೆಗಾರಿಕೆಗೆ ಫಿದಾ ಆಗದೇ ಇರೋರೆ ಇಲ್ಲ ಬಿಡಿ.
ಧನಶ್ರೀ ವರ್ಮಾ ಡಾನ್ಸ್ಗೆ ಕೇವಲ ಸೋಷಿಯನ್ ಮೀಡಿಯಾದ ಫ್ಯಾನ್ಸ್ ಮಾತ್ರವಲ್ಲ.. ಬಾಲಿವುಡ್ ಅಂಗಳದ ಹಲವರು ಕೂಡ ಕ್ಲೀನ್ಬೋಲ್ಡ್ ಆಗಿದ್ದಾರೆ. ಇದೀಗ ಧನಶ್ರೀಯ ಡಾನ್ಸ್ಗೆ ತೆಲುಗಿನ ಫೇಮಸ್ ನಿರ್ಮಾಪಕ ದಿಲ್ ರಾಜು ದಿಲ್ ಖುಷ್ ಆಗಿದ್ದಾರೆ. ಇಷ್ಟೇ ಅಲ್ಲ, ಅವ್ರ ಮುಂದಿನ ಪ್ರಾಜೆಕ್ಟ್ ಭಾಗವಾಗುವಂತೆ ಬಿಗ್ ಆಫರ್ ನೀಡಿದ್ದಾರೆ.
ಅಂದ್ಹಾಗೆ ದಿಲ್ ರಾಜು ಬಗ್ಗೆ ಬಹುತೇಕರಿಗೆ ಗೊತ್ತೇ ಇದೆ. ಆರ್ಯ, ಬೊಮ್ಮರಿಲ್ಲು, ಮಹರ್ಷಿ, ವಾರಿಸು, ಮಿ.ಪರ್ಫೆಕ್ಟ್, ವಕಿಲ್ ಸಾಬ್, ದುವ್ವಾಡ ಜಗನ್ನಾಥಂನಂತ ಫೇಮಸ್ ಚಿತ್ರಗಳ ನಿರ್ಮಾಪಕ. ತೆಲಗು ಇಂಡಸ್ಟ್ರಿಯ ಈ ಟಾಪ್ ನಿರ್ಮಾಪಕರಿಂದ ಧನಶ್ರೀಗೆ ಆಫರ್ಗೆ ಹೋಗಿದೆ.

ಟಾಲಿವುಡ್ ನಿರ್ಮಾಪಕ ದಿಲ್ ರಾಜು ‘ಆಕಾಶಮ್ ದಾಟಿ ವಸ್ತಾವಾ’ ಅನ್ನೋ ಡಾನ್ಸ್ ಬೇಸ್ಡ್ ಮೂವಿನ ಪ್ರೋಡ್ಯೂಸ್ ಮಾಡ್ತಿದ್ದಾರೆ. ಈಗಾಗಲೇ ಕೋರಿಯಾಗ್ರಾಫರ್ ಯಶ್ ಹಾಗೂ ಮಲಯಾಳಂ ನಟಿ ಕಾರ್ತಿಕಾ ಮುರಳೀಧರನ್ ಪ್ರಮುಖ ಪಾತ್ರದಲ್ಲಿ ನಟಿಸ್ತಿದ್ದಾರೆ. ಇದೀಗ ಚಿತ್ರದ ಮತ್ತೊಂದು ಮಹತ್ವದ ಪಾತ್ರಕ್ಕೆ ಚಹಲ್ ಪತ್ನಿಗೆ ಆಫರ್ ಹೋಗಿದೆ.
ಸದ್ಯ ಸ್ಟೋರಿ ಲೈನ್ ಕೇಳಿರುವ ಧನಶ್ರೀ, ನಟಿಸೋಕೆ ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ ಎನ್ನಲಾಗಿದೆ. ಮುಂಬೈನಲ್ಲಿ ಈಗಾಗಲೇ ಟ್ರಯಲ್ ಶೂಟ್ಗಳನ್ನ ಮಾಡಲಾಗಿದೆ. ಎಲ್ಲಾ ಅಂದುಕೊಂಡಂತೆ ಆದ್ರೆ, ತೆಲುಗು ಇಂಡಸ್ಟ್ರಿಗೆ ಶೀಘ್ರದಲ್ಲೇ ಧನಶ್ರೀ ವರ್ಮಾ ಡೆಬ್ಯೂ ಮಾಡಲಿದ್ದಾರೆ.
ಧನಶ್ರೀ ವರ್ಮಾ ಈವರೆಗೆ ಯಾವುದೇ ಚಿತ್ರದಲ್ಲಿ ನಟಿಸಿಲ್ಲ.. ಆದ್ರೆ, ಜಲಕ ದಿಕಲಾಜಾನಂತಹ ಡಾನ್ಸ್ ರಿಯಾಲಿಟಿ ಶೋನಲ್ಲಿ ಕಾಣಿಸಿಕೊಂಡಿದ್ದರು. ಜೊತೆಗೆ ಹಲವು ಮ್ಯೂಸಿಕ್ ಅಲ್ಬಂಗಳ ಭಾಗವಾಗಿದ್ದಾರೆ. 2023ರ ಏಕದಿನ ವಿಶ್ವಕಪ್ನಂತ ಬಿಗ್ ಪ್ರಾಜೆಕ್ಟ್ನಲ್ಲೂ ಕಾಣಿಸಿಕೊಂಡಿದ್ದರು.
ಸೋಷಿಯಲ್ ಮೀಡಿಯಾದಲ್ಲಿ ಧನಶ್ರಿ ವರ್ಮಾ ಸಪರೇಟ್ ಫ್ಯಾನ್ ಬೇಸ್ ಇದೆ. ಇನ್ಸ್ಸ್ಟಾಗ್ರಾಂನಲ್ಲಿ 6.2 ಮಿಲಿಯನ್ ಫಾಲೋವರ್ಸ್ ಹೊಂದಿದ್ದಾರೆ. ಯೂಟೂಬ್, ಫೇಸ್ಬುಕ್ಗಳಲ್ಲೂ ಧನಶ್ರೀಗೆ ಫಾಲೋವರ್ಸ್ ಇದ್ದಾರೆ. ಈ ಪ್ರಸಿದ್ಧಿ ಹಾಗೂ ಟ್ಯಾಲೆಂಟ್ಗೆ ಇದೀಗ ಟಾಲಿವುಡ್ನಿಂದ ಆಫರ್ ಬಂದಿದೆ. ಈ ಆಫರ್ ಒಪ್ಪಿ ಧನಶ್ರೀ ತೆಲುಗು ಸಿನಿ ಇಂಡಸ್ಟ್ರಿಯಲ್ಲಿ ಬಣ್ಣ ಹಚ್ತಾರಾ ಎಂದು ಕಾದು ನೋಡಬೇಕಿದೆ.




