Top Newsಸುದ್ದಿ

ಗಯಾನಾದಲ್ಲಿ ನರೇಂದ್ರ ಮೋದಿಗೆ ಭಾರತೀಯ ವಲಸಿಗರಿಂದ ಸ್ವಾಗತ

ಪ್ರಧಾನಿ ಮೋದಿಯವರ ಈ ಭೇಟಿ 56 ವರ್ಷಗಳ ನಂತರ ಗಯಾನಾಗೆ ಭಾರತದ ಮುಖ್ಯಸ್ಥರ ಮೊದಲ ಭೇಟಿಯಾಗಿದೆ. ಅವರು ಮಂಗಳವಾರ ರಾತ್ರಿ ಬ್ರೆಜಿಲ್‌ನಿಂದ ನಿರ್ಗಮಿಸಿದ ನಂತರ ಇಂದು ಬೆಳ್ಳಂಬೆಳಗ್ಗೆ ಗಯಾನಾಗೆ ಆಗಮಿಸಿದರು. ಬಳಿಕ ಹೋಟೆಲ್‌ನಲ್ಲಿ ಭಾರತೀಯ ಡಯಾಸ್ಪೊರಾ ಸದಸ್ಯರೊಂದಿಗೆ ಸಂವಾದ ನಡೆಸಿದರು.

ಜಾರ್ಜ್‌ಟೌನ್: ಗಯಾನಾಗೆ ಆಗಮಿಸಿದ ಪ್ರಧಾನಿ ನರೇಂದ್ರ ಮೋದಿಯವರನ್ನು ಭಾರತೀಯ ಸಮುದಾಯದವರು ಆತ್ಮೀಯವಾಗಿ ಸ್ವಾಗತಿಸಿದ್ದಾರೆ. ಈ ವೇಳೆ ಪ್ರಧಾನಿ ನರೇಂದ್ರ ಮೋದಿ ಅವರು ಭಾರತೀಯ ಡಯಾಸ್ಪೊರಾ ಸದಸ್ಯರನ್ನು ಶ್ಲಾಘಿಸಿದ್ದಾರೆ. ಅವರಲ್ಲಿ ಹಲವರು 180 ವರ್ಷಗಳ ಹಿಂದೆಯೇ ಭಾರತ ಬಿಟ್ಟು ವಲಸೆ ಬಂದವರು. ಗಯಾನಾದಲ್ಲಿ ಭಾರತೀಯ ಸಮುದಾಯದವರು ವಿವಿಧ ಕ್ಷೇತ್ರಗಳಲ್ಲಿ ಗುರುತಿಸಿಕೊಂಡಿರುವುದನ್ನು ನೋಡಿ ನನಗೆ ಸಂತೋಷವಾಗಿದೆ ಎಂದು ಹೇಳಿದ್ದಾರೆ.

 

Comments (0)

Your email address will not be published. Required fields are marked *

Back to top button