Tuesday, June 24, 2025
25.1 C
Bengaluru
Google search engine
LIVE
ಮನೆ#Exclusive NewsTop Newsಮೂಡಿಗೆರೆ ಕೆಎಸ್​ಆರ್​ಟಿಸಿ ಬಸ್ ನಿಲ್ದಾಣದಲ್ಲಿ ಬಸ್​​ಗಳು ನಿಲ್ಲಿಸದೇ ವಿದ್ಯಾರ್ಥಿಗಳ ಪರದಾಟ..

ಮೂಡಿಗೆರೆ ಕೆಎಸ್​ಆರ್​ಟಿಸಿ ಬಸ್ ನಿಲ್ದಾಣದಲ್ಲಿ ಬಸ್​​ಗಳು ನಿಲ್ಲಿಸದೇ ವಿದ್ಯಾರ್ಥಿಗಳ ಪರದಾಟ..

ಚಿಕ್ಕಮಗಳೂರು: ಮಹಿಳೆಯರಿಗೆ ಉಚಿತ ಪ್ರಯಾಣದ ಅವಕಾಶ ಕಲ್ಪಿಸುವ ಶಕ್ತಿ ಯೋಜನೆಯ ಪರಿಣಾಮ ಚಿಕ್ಕಮಗಳೂರಿನ ಮೂಡಿಗೆರೆಯಲ್ಲಿ ಬಸ್ ಸಿಗದೆ ಶಾಲಾ ಕಾಲೇಜುಗಳಿಗೆ ತೆರಳಲು ವಿದ್ಯಾರ್ಥಿಗಳು ಪರದಾಡುವಂತಾಗಿದೆ. ಮಂಗಳೂರು, ಉಡುಪಿ ಜಿಲ್ಲೆಗಳ ಮಾರ್ಗವಾಗಿ ಮೂಡಿಗೆರೆಗೆ ಆಗಮಿಸಿದ, ಚಿಕ್ಕಮಗಳೂರು ನಗರಕ್ಕೆ ತೆರಳುವ ಬಹುತೇಕ ಬಸ್​​ಗಳು ಮಹಿಳಾ ಪ್ರಯಾಣಿಕರಿಂದ ತುಂಬಿದ್ದವು. ಹೀಗಾಗಿ ಮೂಡಿಗೆರೆ ನಿಲ್ದಾಣದಲ್ಲಿ ಸ್ಟಾಪ್ ನೀಡದೆ ತೆರಳಿವೆ. ಇದರಿಂದಾಗಿ ವಿದ್ಯಾರ್ಥಿಗಳು ತೊಂದರೆ ಅನುಭವಿಸುವಂತಾಗಿದೆ.

ಹೆಚ್ಚುವರಿ ಬಸ್ ಬಿಡುವಂತೆ ವಿದ್ಯಾರ್ಥಿಗಳು ಆಗ್ರಹಿಸಿದ್ದು, ಕೆಎಸ್​ಆರ್​ಟಿಸಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಮೂಡಿಗೆರೆ ಕೆಎಸ್​ಆರ್​ಟಿಸಿ ವಿಭಾಗದ ಟಿಸಿಯೊಂದಿಗೆ ವಿದ್ಯಾರ್ಥಿಗಳು ವಾಗ್ವಾದ ನಡೆಸಿದ್ದಾರೆ. ದಕ್ಷಿಣ ಕನ್ನಡ, ಉಡುಪಿ ಪ್ರವಾಸಿ ತಾಣಗಳಿಗೆ ಹೆಚ್ಚಿನ ಸಂಖ್ಯೆಯಲ್ಲಿ ಮಹಿಳೆಯರು ತೆರಳುತ್ತಿದ್ದು, ಬಸ್​​ಗಳು ರಷ್ ಆಗಿವೆ. ಇದು ವಿದ್ಯಾರ್ಥಿಗಳನ್ನ ಸಂಕಷ್ಟಕ್ಕೆ ದೂಡಿದೆ.

 

+ posts
RELATED ARTICLES

ಪ್ರತ್ಯುತ್ತರ ಬಿಟ್ಟು

ದಯವಿಟ್ಟು ನಿಮ್ಮ ಅಭಿಪ್ರಾಯವನ್ನು ನಮೂದಿಸಿ!
ದಯವಿಟ್ಟು ನಿಮ್ಮ ಹೆಸರನ್ನು ಇಲ್ಲಿ ನಮೂದಿಸಿ

Most Popular

Recent Comments