ರಾಜ್ಯಸುದ್ದಿ

IPL 2025: ಐಪಿಎಲ್ ಇಟಲಿ ಆಟಗಾರ ಎಂಟ್ರಿ

IPL 2025: ಈ ಬಾರಿಯ ಐಪಿಎಲ್ ಮೆಗಾ ಹರಾಜು ನವೆಂಬರ್ 24 ಮತ್ತು 25 ರಂದು ನಡೆಯಲಿದೆ. ಈ ಹರಾಜು ಪ್ರಕ್ರಿಯೆಗೆ ಸೌದಿ ಅರೇಬಿಯಾದ ಜಿದ್ಧಾದ ಅಬಾದಿ ಅಲ್ ಜೋಹರ್ ಅರೇನಾ ಆತಿಥ್ಯವಹಿಸಲಿದೆ. ಈ ಹರಾಜು ಪಟ್ಟಿಯಲ್ಲಿ ಇಟಲಿಯ ಆಟಗಾರ ಕೂಡ ಕಾಣಿಸಿಕೊಂಡಿದ್ದಾರೆ. IPL 2025: ಐಪಿಎಲ್ ಸೀಸನ್-18ರ ಮೆಗಾ ಹರಾಜಿಗಾಗಿ 409 ವಿದೇಶಿ ಆಟಗಾರರು ಹೆಸರು ನೋಂದಾಯಿಸಿಕೊಂಡಿದ್ದಾರೆ. ಈ ನಾನೂರ ಒಂಭತ್ತು ಆಟಗಾರರಲ್ಲಿ ಇಟಲಿಯ ಯುವ ಕ್ರಿಕೆಟಿಗ ಕೂಡ ಇರುವುದು ವಿಶೇಷ. ಅಂದರೆ ಇದೇ ಮೊದಲ ಬಾರಿಗೆ ಇಟಲಿ ಆಟಗಾರರೊಬ್ಬರು ಐಪಿಎಲ್ ಮೆಗಾ ಹರಾಜಿಗಾಗಿ ಹೆಸರು ನೀಡಿದ್ದಾರೆ.  ಹೀಗೆ ಚೊಚ್ಚಲ ಐಪಿಎಲ್ ಅವಕಾಶವನ್ನು ಎದುರು ನೋಡುತ್ತಿರುವ ಇಟಲಿಯ ಆಟಗಾರನ ಹೆಸರು ಥಾಮಸ್ ಜ್ಯಾಕ್ ಡ್ರಾಕಾ. 24 ವರ್ಷದ ಥಾಮಸ್ ಜ್ಯಾಕ್ ಈ ಹಿಂದೆ ಇಂಟರ್​ನ್ಯಾಷನಲ್ ಲೀಗ್ ಟಿ20 ಟೂರ್ನಿಯಲ್ಲಿ ಮುಂಬೈ ಇಂಡಿಯನ್ಸ್ ಫ್ರಾಂಚೈಸಿಯ ಎಂಐ ಎಮಿರೇಟ್ಸ್ ತಂಡದಲ್ಲಿ ಕಾಣಿಸಿಕೊಂಡಿದ್ದರು. ಹಾಗೆಯೇ ಕೆನಡಾ ಟಿ20 ಲೀಗ್​ನಲ್ಲೂ ಕಣಕ್ಕಿಳಿದಿದ್ದಾರೆ.

 

Comments (0)

Your email address will not be published. Required fields are marked *

Back to top button