Top Newsಸುದ್ದಿ

ವರ್ಗಾವಣೆ ಹೆಸರಿನಲ್ಲಿ ಭ್ರಷ್ಟಾಚಾರದ ಅಕ್ರಮ ತಡೆಯಲು ಮುಂದಾದ ಸಿಎಂ

ರಾಜ್ಯ ಅಬಕಾರಿ ಇಲಾಖೆಯಲ್ಲಿ ಭ್ರಷ್ಟಾಚಾರ ಮಿತಿ‌ಮೀರಿ ನಡೆಯುತಿದೆ. ಲೈಸೆನ್ಸ್ ನವೀಕರಣ , ಸಿಎಲ್-7 ಲೈಸೆನ್ಸ್ , ವರ್ಗಾವಣೆ ಹೆಸರಿನಲ್ಲಿ ಭ್ರಷ್ಟಾಚಾರ ತಾಂಡವಾಡ್ತಿದೆ. ಇಲಾಖೆಯಲ್ಲಿ ಎಗ್ಗಿಲ್ಲದೆ ನಡೆಯುತ್ತಿರು ಅಕ್ರಮ ತಡೆಯಲು ಸಿಎಂ ಮುಂದಾಗಿದ್ದಾರೆ.

ಇವತ್ತು ವಿಧಾನಸೌಧದಲ್ಲಿ ಅಬಕಾರಿ ಇಲಾಖೆ ಅಧಿಕಾರಿಗಳೊಂದಿಗೆ ಸಿಎಂ ಮಹತ್ವ ಸಭೆ ಮಾಡ್ತಿದ್ದಾರೆ. ಅಬಕಾರಿ ಇಲಾಖೆ ಅಧಿಕಾರಿಗಳಿಗೆ ಈ ಬಾರಿ 38 ಸಾವಿರ ಕೋಟಿ ಆದಾಯ ಸಂಗ್ರಹ ಗುರಿ ನೀಡಿದ್ದಾರೆ. ಆದ್ರೆ ಆರು ತಿಂಗಳು ಆದ್ರೂ ಅರ್ಧದಷ್ಟು ಆದಾಯ ಸಂಗ್ರಹ ಮಾಡಿಲ್ಲ. ಹೀಗಾಗಿ ಹಣಕಾಸು ಇಲಾಖೆ ಅಸಮಾಧಾನ ವ್ಯಕ್ತಪಡಿಸಿದೆ. ಜೊತೆಗೆ ಸಿಎಲ್- 7 ಲೈಸೆನ್ಸ್ ಹೆಸರಿನಲ್ಲಿ ಡಿಸಿ, ಜಂಟಿ ಆಯುಕ್ತರ ಲೂಡಿ ಮಾಡ್ತಿದ್ದಾರೆ. ಮದ್ಯದಂಗಡಿ ಮಾಲೀಕರ ಬಳಿ ಹಣಕ್ಕೆ ಹಿಂಸೆ ನೀಡ್ತಿರೋ ಆರೋಪ ಇದೆ.

ಈ ಸಂಬಂಧ ನವೆಂಬರ್ 20ರಂದು ರಾಜ್ಯ ವ್ಯಾಪ್ತಿ ಮುಷ್ಕರ ನಡೆಸಲು ಮದ್ಯದಂಗಡಿ ಮಾಲೀಕರು ನಿರ್ಧಾರ ಮಾಡಿದ್ದಾರೆ. ಹೀಗಾಗಿ ಅಬಕಾರಿ ಇಲಾಖೆಯಲ್ಲಿ ತಾಂಡವಾಡ್ತಿರೋ ಸಮಸ್ಯೆಗಳನ್ನ ಬಗೆಹರಿಸಲು ಸಿಎಂ ಸಿದ್ದರಾಮಯ್ಯ ಸಭೆ ಮಾಡುತ್ತಿದ್ದಾರೆ. ಸಭೆಯಲ್ಲಿ ಅಬಕಾರಿ ಮಂತ್ರಿ ಆರ್ ಬಿ ತಿಮ್ಮಾಪುರ ಕಮಿಷನರ್ ರವಿಶಂಕರ್, ಡಿಸಿ, ಜಂಟಿ ಆಯುಕ್ತರು, ಅಪರ ಆಯುಕ್ತರು ಬಾಗಿಯಾಗ್ತಿದ್ದಾರೆ. ಇವತ್ತಿನ ಸಭೆಯಲ್ಲಿ ಬಿಯರ್ ದರ ಪರಿಷ್ಕರಣೆ ಸಂಬಂಧ ಸಿಎಂ ಅಂತಿಮ ನಿರ್ಧಾರ ಕೈಗೊಳ್ಳುತ್ತಿದ್ದಾರೆ..

Comments (0)

Your email address will not be published. Required fields are marked *

Back to top button