ಕ್ರೈಂ ಸ್ಟೋರಿ

ಕೊಲೆ ಆರೋಪಿ ದರ್ಶನ್‌ಗೆ ವಿಪರೀತ ಬೆನ್ನು ನೋವು: ಎರಡು ದಿನಗಳಿಂದ ನಿದ್ದೆಯಿಲ್ಲದೆ ಪರದಾಟ!

ಹೌದು, ಕಳೆದ ಎರಡು ದಿನಗಳಿಂದ ಬೆನ್ನು ನೋವಿನಿಂದಾಗಿ ದರ್ಶನ್ ನಿದ್ದೆಯಿಲ್ಲದೆ ಒದ್ದಾಡುತ್ತಿದ್ದಾನೆ. ಫಿಜಿಯೋಥೇರಪಿ ನಿತ್ಯ ಮಾಡಲಾಗ್ತಿದೆ. ಅದರೂ ನಿರೀಕ್ಷಿತ ಮಟ್ಟದಲ್ಲಿ ನೋವು ಕಡಿಮೆಯಾಗಿಲ್ಲ. ಬೆನ್ನು ನೋವಿನ ಟ್ಯಾಬ್ಲೆಟ್,‌ ಔಷಧಿ ಕೊಟ್ರು ಬೆನ್ನು ನೋವಿನಿಂದ ದರ್ಶನ್‌ಗೆ ನಿದ್ದೆ ಮಾಡಲಾಗ್ತಿಲ್ಲ.

L5 & S1 ನಲ್ಲಿ ಊತ ಕಾಣಿಸಿಕೊಂಡಿದೆ. ಬೆನ್ನು ನೋವಿನ ಸಮಸ್ಯೆ ಹೆಚ್ಚಾಗಿದೆ. ವಿಮ್ಸ್ ನ್ಯೂರೋ ವಿಭಾಗದಿಂದ ಬಂದಿರುವ ಸ್ಕ್ಯಾನಿಂಗ್ ವರದಿ ಅನ್ವಯ ಬೆನ್ನು ಮೂಳೆ ಸರ್ಜರಿ ಮಾಡಿಸುವುದು ಅನಿವಾರ್ಯವಾಗಿದೆ ಎಂದು ತಿಳಿದು ಬಂದಿದೆ. ಬಳ್ಳಾರಿಯಲ್ಲಿ ಸರ್ಜರಿ ಬೇಡ ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಸರ್ಜರಿ ಮಾಡಿಸಿ ಅಂತ ದರ್ಶನ್ ಪಟ್ಟು ಹಿಡಿದಿದ್ದಾನೆ. ನಿನ್ನೆ ಎರಡು ಬ್ಯಾಗ್ ಹಿಡಿದು ನಡೆದು ಹೋಗಲು ಆಗದೆ ದರ್ಶನ್ ಒದ್ದಾಡಿದ್ದಾನೆ. ದರ್ಶನ್ ಸ್ಥಿತಿ ಕಂಡು ಕುಟುಂಬಸ್ಥರು ಮರಗಿದ್ದಾರೆ. ಸರ್ಜರಿಗಾಗಿ ಬೆಂಗಳೂರಿಗೆ ಶಿಫ್ಟ್‌ ಬಗ್ಗೆ ದರ್ಶನ್ ಕೋರ್ಟ್‌ ಮೊರೆ ಹೋಗಲಿದ್ದಾನೆ ಎಂದು ತಿಳಿದು ಬಂದಿದೆ.

Comments (0)

Your email address will not be published. Required fields are marked *

Back to top button