Top Newsಕ್ರೈಂ ಸ್ಟೋರಿಸುದ್ದಿ

ಮಗಳನ್ನು ಹಗ್ಗದಲ್ಲಿ ತಲೆಕೆಳಗಾಗಿ ನೇತುಹಾಕಿ ಮನಬಂದಂತೆ ಥಳಿಸಿದ ತಂದೆ

ಲಕ್ನೋ: ತನ್ನ 10 ವರ್ಷದ ಮಗಳನ್ನು ಹಗ್ಗದಿಂದ ತಲೆಕೆಳಗಾಗಿ ನೇತುಹಾಕಿ ತನ್ನ ತಂದೆಯೇ ಮನಬಂದಂತೆ ಥಳಿಸಿದ ಘಟನೆ ಉತ್ತರ ಪ್ರದೇಶದ ಲಲಿತ್‌ಪುರ ಜಿಲ್ಲೆಯಲ್ಲಿ ನಡೆದಿದೆ.

ಈ ಕುರಿತು ನೆರೆಮನೆಯವರು ನೀಡಿದ ದೂರಿನ ಮೇರೆಗೆ ಪೊಲೀಸರು ಆತನನ್ನು ಬಂಧಿಸಿದ್ದಾರೆ. ಗೋವಿಂದ್ ರೈ ರೈಕ್ವಾರ್ (45) ಬಂಧಿತ ಆರೋಪಿ. ವಿಚಾರಣೆ ವೇಳೆ, ಮಗಳು ನಾನು ಹೇಳುವುದನ್ನು ಪಾಲಿಸುವುದಿಲ್ಲ. ನನ್ನ ಮಾತನ್ನು ಕೇಳುವುದಿಲ್ಲ. ಆ ಕಾರಣಕಾಗಿ ನಾನು ಕೋಪಗೊಂಡು ಆಕೆಯನ್ನು ಥಳಿಸಿದ್ದೇನೆ ಎಂದು ಹೇಳಿಕೊಂಡಿರುವುದಾಗಿ ಬಾರ್ ಪೊಲೀಸ್ ಠಾಣೆಯ ಸ್ಟೇಷನ್ ಹೌಸ್ ಆಫೀಸರ್ (ಎಸ್‌ಎಚ್‌ಒ) ರಾಜಾ ದಿನೇಶ್ ಸಿಂಗ್ ಸೋಮವಾರ ಮಾಹಿತಿ ನೀಡಿದ್ದಾರೆ.

ಈ ಘಟನೆಯನ್ನು ನೆರೆಮನೆಯವರು ಗಮನಿಸಿ ವಿಡಿಯೋ ಮಾಡಿದ್ದು ವೈರಲ್ ಆಗಿದೆ. ನೆರೆಮನೆಯವರ ದೂರಿನ ಆಧಾರದಲ್ಲಿ ಆರೋಪಿಯನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ ನಂತರ ಜೈಲಿಗೆ ಕಳುಹಿಸಲಾಗಿದೆ ಎಂದು ಹೇಳಿದರು.

Comments (0)

Your email address will not be published. Required fields are marked *

Back to top button