Tuesday, June 24, 2025
25.1 C
Bengaluru
Google search engine
LIVE
ಮನೆ#Exclusive NewsTop Newsಏಕಾಏಕಿ ಬದಲಾದ ಹರಿಯಾಣ ಫಲಿತಾಂಶ: ಕಾಂಗ್ರೆಸ್‌ ಹಿಂದಿಕ್ಕಿ ಮುನ್ನಡೆ ಕಾಯ್ದುಕೊಂಡ ಬಿಜೆಪಿ

ಏಕಾಏಕಿ ಬದಲಾದ ಹರಿಯಾಣ ಫಲಿತಾಂಶ: ಕಾಂಗ್ರೆಸ್‌ ಹಿಂದಿಕ್ಕಿ ಮುನ್ನಡೆ ಕಾಯ್ದುಕೊಂಡ ಬಿಜೆಪಿ

ಚಂಡೀಗಢ: ಎರಡು ರಾಜ್ಯಗಳ ವಿಧಾನಸಭೆ ಚುನಾವಣೆಯ ಮತ ಎಣಿಕೆ ಭಾರೀ ಬಿರುಸಿನಿಂದ ಸಾಗಿದ್ದು,ಹರಿಯಾಣ ಫಲಿತಾಂಶ 2024ದ ಚಿತ್ರಣವೇ ಕೆಲವೇ ಕೆಲವು ಕ್ಷಣದಲ್ಲಿ ಬದಲಾಗಿದೆ. ಭಾರೀ ಮುನ್ನಡೆ ಕಾಯ್ಡುಕೊಂಡು ಅರ್ಧ ಶತಕ ದಾಟಿ ಗೆಲುವಿನತ್ತ ದಾಪುಗಾಲಿಡುತ್ತಿದ್ದ ಕಾಂಗ್ರೆಸ್‌ ಏಕಾಏಕಿ ಹಿನ್ನಡೆ ಅನುಭವಿಸಿದೆ. ಬಿಜೆಪಿ ಸ್ಥಾನಗಳು ನಿಧಾನವಾಗಿ ಏರಿಕೆ ಕಂಡಿದ್ದು, ಹಾವು ಏಣಿ ಆಟ ಮುಂದುವರೆದಿದೆ.

ಸದ್ಯ ಬಿಜೆಪಿ 46, ಕಾಂಗ್ರೆಸ್‌ 38ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿದೆ. ಆ ಮೂಲಕ ಹ್ಯಾಟ್ರಿಕ್‌ ಗೆಲುವಿನ ಕನಸು ಹೊತ್ತಿರುವ ಬಿಜೆಪಿಗೆ ಕೊಂಚ ನಿರಾಳ ಎಂದೆನಿಸಿದೆ. ಹರಿಯಾಣದಲ್ಲಿ ಬಹುಮತಕ್ಕೆ 46ಸ್ಥಾನಗಳು ಬೇಕಾಗಿದ್ದು, ಈಗಾಗಲೇ ಬಿಜೆಪಿ ಅಷ್ಟೂ ಕ್ಷೇತ್ರಗಳಲ್ಲಿ ಮುನ್ನಡೆ ಕಾಯ್ದುಕೊಂಡಿದೆ. ಅ ಮೂಲಕ ಬರೋಬ್ಬರಿ ದಶಕದ ನಂತರ ಗದ್ದುಗೆ ಏರುವ ಕಾಂಗ್ರೆಸ್‌ ಕನಸು ಭಗ್ನವಾಗುವ ಆತಂಕ ಇದೆ. ಇನ್ನು ಜಮ್ಮು-ಕಾಶ್ಮೀರದಲ್ಲಿ ಎನ್‌ಸಿ-ಕಾಂಗ್ರೆಸ್‌ ಮೈತ್ರಿಕೂಟ ಭಾರೀ ಮುನ್ನಡೆ ಕಾಯ್ದುಕೊಂಡಿದ್ದು, ಸರ್ಕಾರ ರಚನೆ ಬಹುತೇಕ ಖಚಿತ ಆಗಿದೆ. ಇನ್ನು ಹರಿಯಾಣದಲ್ಲಿ ಜುಲಾನಾ ಕ್ಷೇತ್ರದಲ್ಲಿ ವಿನೇಶ್ ಪೋಗಟ್ ರವರು ಹಿನ್ನಡೆಯಾಗಿದ್ದು, ಮತ ಎಣಿಕೆ ಕೇಂದ್ರದಿಂದ ಹೊರ ಬಂದಿದ್ದಾರೆ.

 

Website |  + posts
RELATED ARTICLES

ಪ್ರತ್ಯುತ್ತರ ಬಿಟ್ಟು

ದಯವಿಟ್ಟು ನಿಮ್ಮ ಅಭಿಪ್ರಾಯವನ್ನು ನಮೂದಿಸಿ!
ದಯವಿಟ್ಟು ನಿಮ್ಮ ಹೆಸರನ್ನು ಇಲ್ಲಿ ನಮೂದಿಸಿ

Most Popular

Recent Comments