Top Newsಸುದ್ದಿ

ಗಾಂಧಿ ಜಯಂತಿ: ಮಕ್ಕಳೊಂದಿಗೆ ಸ್ವಚ್ಛತಾ ಅಭಿಯಾನಕ್ಕೆ ಮೋದಿ ಕರೆ

ನಾವು ಸ್ವಚ್ಛಭಾರತ ಅಭಿಯಾನವನ್ನು 10ವರ್ಷಗಳಿಂದ ಆಚರಿಸುತ್ತ ಬಂದಿದೆವೆ. ಸ್ವಚ್ಛತೆಯನ್ನು ‘ಜನ ಆಂದೋಲನ’ವಾಗಿ ಮಾಡಿದಕ್ಕೆ 140 ಕೋಟಿ ಭಾರತೀಯರ ಅಚಲ ಮನೋಭಾವಕ್ಕೆ ನಾನು ವಂದಿಸುತ್ತೇನೆ ಎಂದು ದೆಹಲಿಯಲ್ಲಿ ಕಾರ್ಯಕ್ರಮವನ್ನು ಉದ್ದೇಶಿಸಿ ಮೋದಿ ಅವರು ಮಾತನಾಡುತ್ತಿದ್ದರು.

ಇನ್ನು ಸ್ವಚ್ಛ ಭಾರತ ಅಭಿಯಾನ ಶುರುವಾಗಿ 10 ವರ್ಷಗಳು ಕಳೆದಿದ್ದು, ಇಂದು ಗಾಂಧಿ ಜಯಂತಿ ಹಿನ್ನೆಲೆಯಲ್ಲಿ ಪ್ರಧಾನಿ ಮಂತ್ರಿ ಮೋದಿ ಅವರು ಮಕ್ಕಳೊಂದಿಗೆ ಸೇರಿ ಸ್ವಚ್ಛತಾ ಕಾರ್ಯ ನಡೆಸಿದರು. ಇಂದು ನಿಮ್ಮ ಸುತ್ತಮುತ್ತಲಿನ ಪ್ರದೇಶವನ್ನು ಸ್ವಚ್ಛವಾಗಿರಿಸುವಂತೆ ಕೇಳಿಕೊಳ್ಳುತ್ತೇನೆ, ಈ ಕ್ರಮವು ಸ್ವಚ್ಛ ಭಾರತದ ಉತ್ಸಾಹವನ್ನು ಮತ್ತಷ್ಟು ಬಲಪಡಿಸುತ್ತದೆ ಎಂದರು.

ಈ ಹಿಂದೆ ಹೇಳಿದಂತೆ, ಪ್ರಧಾನಿ ನರೇಂದ್ರ ಮೋದಿ ಅವರು ಅಕ್ಟೋಬರ್ 1 ರಂದು ಬೆಳಗ್ಗೆ 10 ರಂದು ಗಂಟೆಗೆ ಗಾಂಧಿ ಜಯಂತಿಯ ಸಂದರ್ಭದಲ್ಲಿ ಸ್ವಚ್ಛತಾ ಅಭಿಯಾನವದಲ್ಲಿ ಭಾಗವಹಿಸುವಂತೆ ಭಾರತದ ಎಲ್ಲಾ ನಾಗರಿಕರಿಗೆ ಕರೆ ನೀಡಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ಅವರು ಅಕ್ಟೋಬರ್ 2 ರಂದು ಸ್ವಚ್ಛ ಭಾರತ್ ದಿವಸ್ 2024 ರಲ್ಲಿ ಭಾಗವಹಿಸಿದ್ದು, ಇದು ಸ್ವಚ್ಛ ಭಾರತ್ ಮಿಷನ್‌ನ 10 ನೇ ವಾರ್ಷಿಕೋತ್ಸವದ ಸ್ಮರಣಾರ್ಥವಾಗಿದೆ. ಈ ಕಾರ್ಯಕ್ರಮವು 155 ನೇ ಗಾಂಧಿ ಜಯಂತಿಯ ಜೊತೆಗೆ ನವದೆಹಲಿಯ ವಿಜ್ಞಾನ ಭವನದಲ್ಲಿ ಭಾಗವಹಿಸಿದರು.

Comments (0)

Your email address will not be published. Required fields are marked *

Back to top button