Top Newsಸುದ್ದಿ

ದೇವಾಲಯಗಳ ನಿರ್ವಹಣೆಯನ್ನು ಧಾರ್ಮಿಕ ಮುಖಂಡರಿಗೆ ವಹಿಸುವ ಸಮಯ ಬಂದಿದೆ-ರವಿಶಂಕರ್

ಬೆಂಗಳೂರು: ತಿರುಪತಿ ಲಾಡು ವಿವಾದದ ಕುರಿತು ಪ್ರತಿಕ್ರಿಯೆ ನೀಡಿರುವ ಆಧ್ಯಾತ್ಮಿಕ ಗುರು ಶ್ರೀ ಶ್ರೀ ರವಿಶಂಕರ್, ಈ ಘಟನೆಯು ಹಿಂದೂಗಳ ಮನಸ್ಸಿನಲ್ಲಿ ತೀವ್ರ ನೋವು ಹಾಗೂ ಆಕ್ರೋಶವನ್ನು ಉಂಟು ಮಾಡಿದೆ ಎಂದು ಹೇಳಿದ್ದಾರೆ.

ಈ ಕುರಿತು ಸಾಮಾಜಿಕ ಮಾಧ್ಯಮ ಎಕ್ಸ್​ನಲ್ಲಿ ಪೋಸ್ಟ್ ಮಾಡಿರುವ ಅವರು ಸ್ವ ಹಿತಾಸಕ್ತಿಯ ಅಧಿಕಾರಿಗಳು, ನಿರ್ದಯಿ ವ್ಯಾಪಾರಸ್ಥರು ಮತ್ತು ರಾಜಕಾರಣಿಗಳ ಬದಲು ದೇವಾಲಯದ ನಿರ್ವಹಣೆಯನ್ನು ಧಾರ್ಮಿ ಮುಖಂಡರು ಹಾಗೂ ಭಕ್ತರಿಗೆ ವಹಿಸಿಕೊಡುವ ಸಮಯ ಬಂದಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.

ತಿರುಪತಿ ಲಾಡುವಿನ ಶುದ್ಧತೆ ಮತ್ತು ಕಲಬೆರಕೆ ಬಗ್ಗೆ ಸರ್ಕಾರ ತನಿಖೆ ನಡೆಸಬೇಕು. ತಪ್ಪಿತಸ್ಥರಿಗೆ ಕಠಿಣ ಶಿಕ್ಷೆ ನೀಡಬೇಕು ಎಂದು ಅವರು ಬಯಸಿದ್ದಾರೆ.

ತಿರುಪತಿಯ ಪ್ರಸಾದ ಲಾಡು ತಯಾರಿಸಲು ಬಳಸುವ ತುಪ್ಪದಲ್ಲಿ ಪ್ರಾಣಿಗಳ ಕೊಬ್ಬಿನ ಅಂಶ ಪತ್ತೆಯಾಗಿರುವುದು ಅಸಹ್ಯಕರವಾಗಿದೆ. ಹಾಗಾಗಿ ದೇವಾಲಯಗಳು ಭಕ್ತರಿಂದ ನಡೆಯಬೇಕು ಹೊರತು ಸರ್ಕಾರದ ಆಡಳಿತದಿಂದಲ್ಲ. ಎಲ್ಲ ಭಕ್ತಿ ಇಲ್ಲವೋ ಅಲ್ಲಿ ಪಾವಿತ್ರ್ಯತೆ ಇರುವುದಿಲ್ಲ. ಹಿಂದೂ ದೇವಾಲಯಗಳನ್ನು ಧರ್ಮನಿಷ್ಠ ಹಿಂದೂಗಳೂ ನಡೆಸುತ್ತಾರೆ, ಸರ್ಕಾರದ ಆಡಳಿತದಿಂದಲ್ಲ ಎಂದು ಜಗ್ಗಿ ವಾಸುದೇವ್ ಅವರು ಎಕ್ಸ್​​ನಲ್ಲಿ ಪೋಸ್ಟ್ ಮಾಡಿದ್ದಾರೆ.

ಇತ್ತ ತಿರುಪತಿ ಲಾಡು ವಿವಾದದ ಕುರಿತು ಪ್ರತಿಕ್ರಿಯೆ ನೀಡಿರುವ ಆಧ್ಯಾತ್ಮಿಕ ಗುರು ಶ್ರೀ ಶ್ರೀ ರವಿಶಂಕರ್ ಗುರೂಜಿ, ಈ ಘಟನೆಯು ಹಿಂದೂಗಳ ಮನಸ್ಸಿನಲ್ಲಿ ತೀವ್ರ ನೋವು ಹಾಗೂ ಆಕ್ರೋಶವನ್ನು ಉಂಟು ಮಾಡಿದೆ ಎಂದು ಹೇಳಿದ್ದಾರೆ.

Comments (0)

Your email address will not be published. Required fields are marked *

Back to top button