#Exclusive NewsTop Newsಜನಸಾಮಾನ್ಯರ ದನಿಫ್ರೀಡಂ ಟಿವಿ ವಿಶೇಷವಿಶೇಷವೈರಲ್ ನ್ಯೂಸ್

ಕೇರಳವೇ ಕಂಬನಿ ಸುರಿಸಿದ ದುರಂತ ಪ್ರೇಮ ಕತೆ!

ಬಾಲ್ಯದ ಗೆಳೆಯರಾಗಿದ್ದ ಶ್ರುತಿ ಮತ್ತು ಜೀಸನ್ ಮದುವೆಯಾಗಲು ನಿರ್ಧರಿಸಿದ್ದರು. ಮದುವೆ ಶಾಪಿಂಗ್‌ಗೆ ತೆರಳುವಾಗ ಜೀಸನ್ ಕಾರು ಅಪಘಾತದಲ್ಲಿ ಸಾವನ್ನಪ್ಪಿದ್ದಾರೆ. ಈ ದುರ್ಘಟನೆಯಿಂದಾಗಿ ಶ್ರುತಿಯ ಬದುಕು ಮತ್ತೆ ಅಂಧಕಾರದಲ್ಲಿ ಮುಳುಗಿದೆ.ಜೆನ್ಸನ್, ಶೃತಿಯ ಬಾಲ್ಯದ ಗೆಳಯ. ಇಬ್ಬರದ್ದೂ ಅಪರೂಪದ ಜೋಡಿ. ಹತ್ತಾರು ವರ್ಷದ ಗೆಳೆತನ ಅವರದ್ದು. ಮೊಗ್ಗೊಂದು ಹೂವಾಗೋ ಹಾಗೆ, ಅವರ ಸ್ನೇಹವೂ ಪ್ರೇಮವಾಗಿತ್ತು. ಅದರಲ್ಲೂ ಅನಾಥೆಯಾಗಿದ್ದ ಶೃತಿ ಬಾಳಿಗೆ, ಜೀಸನ್ ಪ್ರೀತಿ ಬೆಳಕಾಗಿ ಬಂದಿತ್ತು. ಇಬ್ಬರೂ ಕೂಡ ಮದುವೆಯಾಗೋ ನಿರ್ಧಾರ ಮಾಡಿದ್ರು. ಅವತ್ತು 9 ಮಂದಿಯ ಕುಟುಂಬವನ್ನು ಕಳೆದುಕೊಂಡು ಅನಾಥಳಾಗಿದ್ದವಳು, ಅದಾಗಿ 44 ದಿನಗಳಲ್ಲೇ ಮತ್ತೆ ಅನಾಥಳಾಗಿದ್ದಾಳೆ.ಬಾಲ್ಯದ ಗೆಳೆಯರಾದ ಶ್ರುತಿ ಹಾಗೂ ಜೀಸನ್ ಮಧ್ಯೆ ವಿವಾಹ ನಿಶ್ಚಿಯವಾಗಿತ್ತು. ಈ ಹಿನ್ನೆಲೆಯಲ್ಲಿ ಮದುವೆಯ ಶಾಪಿಂಗ್‌ಗಾಗಿ ಇಬ್ಬರು ಕಾರಿನಲ್ಲಿ ಜೊತೆಯಾಗಿ ಸಾಗುತ್ತಿದ್ದಾಗ ಕಾರು ಅಪಘಾತಕ್ಕೀಡಾಗಿದೆ. ಮಂಗಳವಾರ ಮಧ್ಯಾಹ್ನ ಜೀಸನ್ ಅವರು ಪ್ರಯಾಣಿಸುತ್ತಿದ್ದ ಓಮ್ನಿ ಕಾರು ವಯನಾಡ್‌ನ ಕಲ್ಪೆಟ್ಟ ಬಳಿ ಬಸ್‌ಗೆ ಡಿಕ್ಕಿ ಹೊಡೆದಿದೆ. ಪರಿಣಾಮ ಗಂಭೀರ ಗಾಯಗೊಂಡಿದ್ದ ಜೀಸನ್   ಸಾವನ್ನಪ್ಪಿದ್ದು, ಇದರಿಂದ ಶ್ರುತಿಯವರ ಬದುಕಿನ ಭರವಸೆಯೇ ಭಗ್ನವಾಗಿದೆ.  ಇಬ್ಬರು ಅನ್ಯಧರ್ಮಕ್ಕೆ ಸೇರಿದವರಾಗಿದ್ದು, ಬಾಲ್ಯದಿಂದಲೂ ಸಹಪಾಠಿಗಳಾಗಿದ್ದರು ಇವರ ಮದುವೆಗೆ ಎರಡು ಕುಟುಂಬಗಳು ಒಪ್ಪಿಗೆ ಸೂಚಿಸಿದ್ದವು .

 

 

 

 

Comments (0)

Your email address will not be published. Required fields are marked *

Back to top button