Top Newsಸುದ್ದಿ

ಬುಕಿಂಗ್ ಕ್ಯಾನ್ಸಲ್ ಮಾಡಿದ್ದಕ್ಕೆ ಮಹಿಳೆ ಕೆನ್ನೆಗೆ ಬಾರಿಸಿದ ಆಟೋ ಡ್ರೈವರ್-ವಿಡಿಯೋ ವೈರಲ್

ಬೆಂಗಳೂರು: ನಗರದಲ್ಲಿ ಆಟೋ, ಕ್ಯಾಬ್ ಚಾಲಕರು ಮತ್ತು ಸವಾರರ ಆಗಾಗ್ಗೆ ಸಣ್ಣ ಪುಟ್ಟ ಜಗಳ, ವಾಗ್ವಾದಗಳು ಸಾಮಾನ್ಯವಾಗಿರುತ್ತವೆ. ಇನ್ಯೂ ಕೆಲವು ಬಾರಿ ಸಂಕಷ್ಟಕದಲ್ಲಿ ಆಸರೆಯಾದ ಕ್ಯಾಬ್, ಆಟೋ ಚಾಲಕರ ಬಗ್ಗೆ ಕೂಡ ವರದಿಯಾಗುತ್ತವೆ. ಈಗ ಆಟೋ ಚಾಲಕನೊಬ್ಬ ಓಲಾ ಆಟೋ ಬುಕ್ ಮಾಡಿ ಕ್ಯಾನ್ಸಲ್ ಮಾಡಿದ್ದಕ್ಕೆ ಮಹಿಳೆ ಜೊತೆ ಜಗಳ ಆಡಿದ್ದಲ್ಲದೆ ಕಪಾಳಕ್ಕೆ ಬಾರಿಸಿದ್ದು, ವಿಡಿಯೋ ವೈರಲ್ ಆಗಿದೆ.

ನಿತಿ ಎನ್ನುವ ಮಹಿಳೆ ಈ ಬಗ್ಗೆ ವಿಡಿಯೋ ಹಂಚಿಕೊಂಡಿದ್ದು ಸದ್ಯ ವೈರಲ್ ಆಗಿದೆ. ನಿತಿ ಮತ್ತು ಆಕೆಯ ಸ್ನೇಹಿತೆ ಇಬ್ಬರೂ ಕೂಡ ಒಲಾ ಅಪ್ಲಿಕೇಷನ್​ನಲ್ಲಿ ಎರಡು ಆಟೋ ಬುಕ್ ಮಾಡಿದ್ದಾರೆ. ನಿತಿ ಬುಕ್ ಮಾಡಿದ್ದ ಆಟೋ ಮೊದಲು ಬಂದ ಕಾರಣ, ಆಕೆಯ ಸ್ನೇಹಿತೆ ತಾನು ಆಟೋ ಬುಕ್ ಮಾಡಿದ್ದು ಕ್ಯಾನ್ಸಲ್ ಮಾಡಿ, ನಿಧಿ ಜೊತೆ ಆಟೋ ಹತ್ತಿದ್ದಾರೆ. ಬುಕಿಂಗ್ ಕ್ಯಾನ್ಸಲ್ ಮಾಡಿದ್ದಕ್ಕೆ ಸಿಟ್ಟಾದ ಆಟೋ ಡ್ರೈವರ್, ಆಕೆಯನ್ನು ಹಿಂಬಾಲಿಸಿಕೊಂಡಿ ಬಂದು ಜಗಳ ಮಾಡಿದ್ದಾನೆ.

ಘಟನೆಗೆ ಸಂಬಂಧಪಟ್ಟಂತೆ ಓಲಾ ಪ್ರತಿಕ್ರಿಯೆ ನೀಡಿದ್ದು, ಚಾಲಕನ ವಿರುದ್ಧ ಕ್ರಮ ತೆಗೆದುಕೊಳ್ಳುವ ಭರವಸೆ ನೀಡಿದೆ. ಪ್ರಯಾಣಿಕರ ಸುರಕ್ಷತೆ ತಮ್ಮ ಆದ್ಯತೆಯಾಗಿದ್ದು, ಅದಕ್ಕಾಗಿ ಸೂಕ್ತ ಕ್ರಮ ತೆಗೆದುಕೊಳ್ಳುತ್ತೇವೆ ಎಂದು ಹೇಳಿದೆ.

Comments (0)

Your email address will not be published. Required fields are marked *

Back to top button