Top Newsಸುದ್ದಿ

ವಿದ್ಯುತ್ ಬೇಡಿಕೆ ಹೆಚ್ಚಳದಿಂದ ಆತಂಕಕ್ಕೆ ಒಳಗಾದ ಬೆಸ್ಕಾಂ ಅಧಿಕಾರಿಗಳು

ಬೆಂಗಳೂರು: ಗೌರಿ ಗಣೇಶ ಹಬ್ಬಕ್ಕೆ ಕ್ಷಣಗಣನೆ ಆರಂಭವಾಗಿದೆ. ಸೆ. 7ರಂದು ಕರ್ನಾಟಕದಾದ್ಯಂತ ಗೌರಿ ಗಣೇಶ ಹಬ್ಬವನ್ನು ಸಂಭ್ರಮದಿಂದ ಆಚರಿಸಲಾಗುತ್ತದೆ. ಈಗಾಗಲೇ ಸಾರ್ವಜನಿಕರು ಗಣೇಶೋತ್ಸವ ಆಚರಣೆಗೆ ಬೆಸ್ಕಾಂಗೆ ವಿದ್ಯುತ್ ಪೂರೈಕೆಗೆ ಬೇಡಿಕೆಯಿಟ್ಟಿದ್ದ, ಹಬ್ಬಕ್ಕೆ ವಿದ್ಯುತ್ ಬೇಡಿಕೆ ಹೆಚ್ಚಳ ಬಗ್ಗೆ ಬೆಸ್ಕಾಂ ಅಧಿಕಾರಿಗಳು ಆತಂಕಕ್ಕೊಳಗಾಗಿದ್ದಾರೆ.

ಈ ಬಗ್ಗೆ ಟ್ವೀಟ್ ಮಾಡಿರುವ ಬೆಸ್ಕಾಂ ಅಧಿಕಾರಿಗಳು, ಗೃಹಜ್ಯೋತಿಯಿಂದ ಗೌರಿ- ಗಣೇಶ ಹಬ್ಬಕ್ಕೆ ಬೇಡಿಕೆಯಿಂದ ದಾಖಲೆ ಸಂಭವಿಸಬಹುದು. ಸದ್ಯ ಬೆಸ್ಕಾಂ ವ್ಯಾಪ್ತಿಯಲ್ಲಿ ನಿತ್ಯ 6,293 ಮೆಗಾವ್ಯಾಟ್ ವಿದ್ಯುತ್ ಪೂರೈಕೆಗೆ ಬೇಡಿಕೆ ಇದ್ದು, ಈ ಬಾರಿ ಹಬ್ಬದ ವೇಳೆ 7,5 ರಿಂದ 8 ಸಾವಿರ ಮೆಗಾವ್ಯಾಟ್ ವಿದ್ಯುತ್ ಬೇಡಿಕೆ ಹೆಚ್ಚುವ ಸಾಧ್ಯತೆ ಇದೆ. ಬೆಸ್ಕಾಂ ಅಧಿಕಾರಿಗಳು ವಿದ್ಯುತ್ ಬೇಡಿಕೆ ಹೆಚ್ಚಳ ಭೀತಿಯಿಂದ ಕೆಪಿಟಿಸಿಎಲ್ ಮೊರೆ ಹೋಗಿದ್ದಾರೆ.

ಬೆಸ್ಕಾಂ ವ್ಯಾಪ್ತಿಯಲ್ಲಿ ಗಣೇಶ ಹಬ್ಬದ ವೇಳೆ ಹೆಚ್ಚುವರಿ ವಿದ್ಯುತ್ ಬಳಕೆ ಸಾಧ್ಯತೆ ಇದೆ. ಈಗಾಗಲೇ ಗಣೇಶೋತ್ಸವಕ್ಕೆ ತಾತ್ಕಾಲಿಕವಾಗಿ ವಿದ್ಯುತ್ ಸಂಪರ್ಕ ಗ್ರಾಹಕರು ಪಡೆದಿದ್ದಾರೆ.  ಇನ್ನೂ ಹಬ್ಬದ ದಿನ ಹೆಚ್ಚಿನ ಸಂಖ್ಯೆಯಲ್ಲಿ ಗ್ರಾಹಕರು ತಾತ್ಕಾಲಿಕ ಸಂಪರ್ಕ ಪಡೆಯುವ ಸಾಧ್ಯತೆಯಿದೆ. ಹೀಗಾಗಿ ಬೇಡಿಕೆಗೆ ತಕ್ಕಂತೆ ವಿದ್ಯುತ್ ಪೂರೈಸೋದು ಬೆಸ್ಕಾಂಗೆ ದೊಡ್ಡ ಸವಾಲಾಗಿದೆ.

ರಾಜ್ಯದ ಪ್ರತಿ ಮನೆ ಮನೆಗಳಲ್ಲಿ ಗೃಹಜ್ಯೋತಿ ಬಳಕೆ ಮಾಡುತ್ತಿದ್ದು ಇದರಿಂದ ವಿದ್ಯುತ್ ಪೂರೈಕೆಗೆ ತುಂಬಾ ಪರಿಣಾಮ ಬೀರಲಿದೆ. ಹೀಗಾಗಿ ವಿದ್ಯುತ್ ಬೇಡಿಕೆ ಬಗ್ಗೆ ಕೆಪಿಸಿಎಲ್​ಗೆ ಮನವಿ ಮಾಡಿದ್ದೆವೆ ಎಂದು ಬೆಸ್ಕಾಂ ಅಧಿಕಾರಿಗಳು ತಿಳಿಸಿದರು.

Comments (0)

Your email address will not be published. Required fields are marked *

Back to top button