Top Newsಸುದ್ದಿ

ಸ್ಟೋನಿ ಬ್ರೂಕ್‌ ಪಬ್‌ನಲ್ಲಿ ಪಾರ್ಟಿ ಸ್ಥಳ ಮಹಜರು-ಫೋಟೋ ರಿವೀಲ್

ಬೆಂಗಳೂರು: ರೇಣುಕಾಸ್ವಾಮಿ ಕೊಲೆಗೂ ಮುನ್ನ ಪಾರ್ಟಿ ಮಾಡಿದ್ದ ಸ್ಟೋನಿ ಬ್ರೂಕ್‌ ಪಬ್‌ನಲ್ಲಿ ಆರೋಪಿ ದರ್ಶನ್‌ ಮತ್ತು ಗ್ಯಾಂಗ್‌ ಕರೆತಂದು ಪೊಲೀಸರು ಸ್ಥಳ ಮಹಜರು ಮಾಡಿಸಿರುವ ಫೋಟೋ ಕೂಡ ರಿವೀಲ್‌ ಆಗಿದೆ.

ಹತ್ಯೆಗೂ ಮುನ್ನ ರೇಣುಕಾಸ್ವಾಮಿ ತನ್ನನ್ನು ಬಿಟ್ಟುಬಿಡುವಂತೆ ಕೇಳಿಕೊಳ್ಳುತ್ತಿರುವ ಫೋಟೊ ರಿವೀಲ್‌ ಆಗಿತ್ತು. ಅದರ ಬೆನ್ನಲ್ಲೇ ಸ್ಥಳ ಮಹಜರು ಫೋಟೊ ಕೂಡ ಹೊರಬಂದಿದೆ. ಆರ್‌ಆರ್‌ ನಗರದ ಸ್ಟೋನಿ ಬ್ರೂಕ್‌ ಪಬ್‌ನಲ್ಲಿ ದರ್ಶನ್‌ ಪಾರ್ಟಿ ಮಾಡಿದ್ದರು. ಅವರನ್ನು ಕರೆತಂದು ಸ್ಥಳ ಮಹಜರು ಮಾಡಲಾಗಿದೆ.

ದರ್ಶನ್‌ಗಾಗಿಯೇ ‘ಡಿ ಬಾಸ್ ಸಫಾರಿ’ ಅಂತಾ ಪಬ್‌ ಮಾಲೀಕ ವಿನಯ್‌ ಪ್ರತ್ಯೇಕ ಲಾಂಜ್ ಮಾಡಿದ್ದ. ದರ್ಶನ್ ಪಾರ್ಟಿ ಮಾಡುವ ವೇಳೆ ಎಲ್ಲಿ ಕುಳಿತಿದ್ದರು. ಪ್ರದೋಶ್ ಎಲ್ಲಿ ಕೂತಿದ್ದ. ನಟ ಚಿಕ್ಕಣ್ಣ ಕುಳಿತಿದ್ದ ಸ್ಪಾಟ್ ಯಾವ್ದು.. ಹೀಗೆ ಪಾರ್ಟಿ ನಡೆಸಿದ್ದ ಸ್ಪಾಟ್‌ಗಳಲ್ಲಿ ಆರೋಪಿಗಳನ್ನು ಕೂರಿಸಿ ಸ್ಥಳ ಮಹಜರು ಮಾಡಲಾಗಿತ್ತು.

ಫೋಟೋದಲ್ಲಿ ವಿನಯ್, ದರ್ಶನ್, ಚಿಕ್ಕಣ್ಣ, ಪವನ್, ನಾಗರಾಜ್ ಇತರರು ಇರೋದನ್ನು ಗಮನಿಸಬಹುದಾಗಿದೆ. ಇನ್ನು ಸ್ಟೋನಿ ಬ್ರೂಕ್ ಪಬ್​ನಲ್ಲಿ ಡಿ ಬಾಸ್ ಸಫಾರಿ ಇದೆ. ಅದು ದರ್ಶನ್​ಗಾಗಿ ಮಾಡಿರುವ ಸ್ಪೆಷಲ್ ರೂಂ. ಸ್ಟೋನಿ ಬ್ರೂಕ್ ಪಬ್​ಗೆ ಬಂದಾಗ ದರ್ಶನ್ ಇರೋದು ಇಲ್ಲೇ. ಈ ಸಪರೇಟ್ ರೂಂಗೆ ಡಿ ಬಾಸ್ ಸಫಾರಿ ಎಂದು ಹೆಸರಿಡಲಾಗಿದೆ.

Comments (0)

Your email address will not be published. Required fields are marked *

Back to top button