#Exclusive NewsTop Newsಕ್ರೈಂ ಸ್ಟೋರಿಫ್ರೀಡಂ ಟಿವಿ ವಿಶೇಷ

“ಜೀವನದಲ್ಲಿ ಎಲ್ಲವನ್ನೂ ಮಾಡಿ,ಮದುವೆ ಮಾತ್ರ ಅಗಬೇಡಿ..”, ಪತ್ನಿಯ ಕಿರುಕುಳಕ್ಕೆ ಬೇಸತ್ತು ಆತ್ಮಹತ್ಯೆ ಮಾಡಿಕೊಂಡ ಪತಿ

ಗಾಜಿಯಾಬಾದ್‌ನಲ್ಲಿ ಪತ್ನಿ ಮತ್ತು ಆಕೆಯ ಕುಟುಂಬದ ಕಿರುಕುಳದಿಂದ ಬೇಸತ್ತ ಪತಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಸಾವಿಗೆ ಮುನ್ನ ‘ಮದುವೆಯಾಗಬೇಡಿ’ ಎಂದು ವಿಡಿಯೋ ಸಂದೇಶದಲ್ಲಿ ಹೇಳಿರುವ ಘಟನೆ ನಡೆದಿದೆ.


ನಾನು ಸತ್ತ ಮೇಲೆ ಎಲ್ಲವನ್ನೂ ಮಾಡು. ಆದ್ರೆ ಮದುವೆ ಮಾತ್ರ ಅಗಬೇಡ ಎಂದು ವಿಡಿಯೋ ಮಾಡಿ ಪತ್ನಿಯ ಕಿರುಕುಳಕ್ಕೆ ಗಂಡ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.ಗಂಡ ಹೆಂಡತಿ ಅಂದ್ರೆ ಸಣ್ಣ ಪುಟ್ಟ ಜಗಳಗಳು ಇದ್ದೇ ಇರುತ್ತವೆ.ಆದ್ರೆ ಕೆಲವೊಮ್ಮೆ ಶುರುವಾದ ಜಗಳಗಳು ದುರಂತ ಅಂತ್ಯ ಕಾಣುತ್ತವೆ.ಇಲ್ಲೊಬ್ಬ ಪತ್ನಿಯ ಕಿರುಕುಳದಿಂದ ಬೇಸತ್ತು ಆತ್ಮಹತ್ಯೆಗೆ ಶರಣಾಗಿದ್ದಾನೆ.ಆತ್ಮಹತ್ಯೆಗೆ ಮುನ್ನ ವ್ಯಕ್ತಿ ಮಾಡಿದ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.

ಉತ್ತರ ಪ್ರದೇಶದ ಗಾಜಿಯಾಬಾದ್ ಜಿಲ್ಲೆಯ ಡಿಎಲ್‌ಎಫ್ ಕಾಲೋನಿಯ ನಿವಾಸಿಯಾಗಿರುವ 38 ವರ್ಷದ ಜಗಜಿತ್ ಸಿಂಗ್ ರಾಣಾ ಆತ್ಮಹತ್ಯೆಗೆ ಶರಣಾದ ಗಂಡ. ಔಷಧಗಳ ಪೂರೈಕೆಗೆ ಕೆಲಸ ಮಾಡಿಕೊಂಡಿದ್ದ ಜಗಜಿತ್ ಸಿಂಗ್, ಮನೆಯಲ್ಲಿ ಒಬ್ಬನೇ ವಾಸವಾಗಿದ್ದನು. ಪತ್ನಿ ಹಾಗೂ ಆಕೆಯ ಪೋಷಕರು ನೀಡಿದ ಕಿರುಕುಳದಿಂದಲೇ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂಬುವುದು ಪೊಲೀಸರ ಪ್ರಾಥಮಿಕ ತನಿಖೆಯಲ್ಲಿ ತಿಳಿದು ಬಂದಿದೆ. 3 ನಿಮಿಷದ ಸೆಲ್ಫಿ ವಿಡಿಯೋ ಮಾಡಿರುವ ಜಗಜಿತ್ ಸಿಂಗ್, ಪತ್ನಿ ಬುಲಂದ್‌ಶಹರ್ ನಿವಾಸಿ ಎಂಬ ಮಾಹಿತಿಯನ್ನು ಹೇಳಿದ್ದಾನೆ. ನಂತರ ಸೆಲ್ಫಿ ವಿಡಿಯೋವನ್ನು ತನ್ನ ಎಲ್ಲಾ ಬಂಧು ಹಾಗೂ ಆಪ್ತರಿಗೆ ವಾಟ್ಸಪ್‌ನಲ್ಲಿ ಕಳುಹಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

Comments (0)

Your email address will not be published. Required fields are marked *

Back to top button