#Exclusive NewsSportsTop Newsಕ್ರಿಕೆಟ್ಫ್ರೀಡಂ ಟಿವಿ ವಿಶೇಷ

ಐಸಿಸಿ ನೂತನ ಅಧ್ಯಕ್ಷ ಜಯ್ ಶಾ ಒಟ್ಟು ಸಂಪತ್ತು ಎಷ್ಟು? ಅಮಿತ್ ಶಾ ಪುತ್ರನ ಎಜುಕೇಷನ್ ಏನು?

ಬಿಸಿಸಿಐ ಕಾರ್ಯದರ್ಶಿಯಾಗಿ ಸೈ ಎನಿಸಿಕೊಂಡಿರುವ ಜಯ್ ಶಾ ಇದೀಗ, ಜಾಗತಿಕ ಕ್ರಿಕೆಟ್ ಮಂಡಳಿಯ ಅಧ್ಯಕ್ಷ ಹುದ್ದೆಗೆ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಬನ್ನಿ ನಾವಿಂದು ಅಮಿತ್ ಶಾ ಅವರ ಒಟ್ಟು ಸಂಪತ್ತು ಎಷ್ಟು? ಅವರು ಶಿಕ್ಷಣ ಪಡೆದಿದ್ದು ಎಷ್ಟು ಎನ್ನುವುದನ್ನು ನೋಡೋಣ ಬನ್ನಿ

ಜಗತ್ತಿನ ಶ್ರೀಮಂತ ಕ್ರಿಕೆಟ್ ಮಂಡಳಿ ಎನಿಸಿಕೊಂಡಿರುವ ಬಿಸಿಸಿಐ ಕಾರ್ಯದರ್ಶಿಯಾಗಿ ಕಾರ್ಯ ನಿರ್ವಹಿಸಿರುವ ಜಯ್ ಶಾ ಇದೀಗ, ಅವಿರೋಧವಾಗಿ ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿಯ ನೂತನ ಅಧ್ಯಕ್ಷರಾಗಿ ನೇಮಕವಾಗಿದ್ದಾರೆ.ಕೇವಲ 35 ವರ್ಷದ ಜಯ್ ಶಾ ಇದೀಗ ಜಾಗತಿಕ ಕ್ರಿಕೆಟ್ ಮಂಡಳಿಯ ಅಧ್ಯಕ್ಷ ಹುದ್ದೆಗೇರುವ ಮೂಲಕ ಈ ಸಾಧನೆ ಮಾಡಿದ ಅತ್ಯಂತ ಕಿರಿಯ ವ್ಯಕ್ತಿ ಎನ್ನುವ ಹಿರಿಮೆಗೆ ಜಯ್ ಶಾ ಪಾತ್ರರಾಗಿದ್ದಾರೆ.ಜಯ್ ಶಾ ಈಗಾಗಲೇ ಐಸಿಸಿ ಅಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾಗಿದ್ದರೂ, ಅವರ ಅಧಿಕಾರ ಸ್ವೀಕರಿಸುವುದು ಡಿಸೆಂಬರ್ 01, 2024ರಿಂದ. ಅಲ್ಲಿಂದ ಮೂರು ವರ್ಷಗಳ ಕಾಲ ಜಯ್ ಶಾ ಐಸಿಸಿ ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸಲಿದ್ದಾರೆ.

Comments (0)

Your email address will not be published. Required fields are marked *

Back to top button