
ಸ್ಥಳಾಂತರವಾಗಲು ಶಾಸಕರು, ಸಚಿವರೇ ಕಾರಣವೇ?


ಬೆಂಗಳೂರು: ಐಪಿಎಲ್ 2026 ರ ಫೈನಲ್ ಪಂದ್ಯ ಈ ಬಾರಿ ಬೆಂಗಳೂರಿನ ಚಿನ್ನಸ್ವಾಮಿ ಮೈದಾನದಿಂದ ನರೇಂದ್ರ ಮೋದಿ ಮೈದಾನಕ್ಕೆ ಶಿಫ್ಟ್ ಆಗಿದೆ. ಇದಕ್ಕೆ ಕರ್ನಾಟಕದ ಶಾಸಕರು, ಸಚಿವರ ಟಿಕೆಟ್ ಬೇಡಿಕೆಯೇ ಮೂಲ ಕಾರಣ ಎನ್ನಲಾಗುತ್ತಿದೆ.ಈ ಬಾರಿ ಉದ್ಘಾಟನಾ ಪಂದ್ಯ ಚಿನ್ನಸ್ವಾಮಿ ಮೈದಾನದಲ್ಲಿ ನಡೆದಿತ್ತು. ಸಾಮಾನ್ಯವಾಗಿ ಹಾಲಿ ಚಾಂಪಿಯನ್ ತವರು ಮೈದಾನದಲ್ಲೇ ಫೈನಲ್ ಪಂದ್ಯ ನಡೆಯುತ್ತದೆ. ಅದರಂತೆ ಈ ಬಾರಿ ಚಿನ್ನಸ್ವಾಮಿಯಲ್ಲಿ ಫೈನಲ್ ನೋಡಬಹುದು ಎಂದು ಅಭಿಮಾನಿಗಳು ಕಾದಿದ್ದರು.
ಆದರೆ ಅವರಿಗೆ ನಿರಾಸೆಯಾಗಿದೆ. ಈ ಬಾರಿ ಚಿನ್ನಸ್ವಾಮಿ ಮೈದಾನದಲ್ಲಿ ನಡಯಬೇಕಿದ್ದ ಫೈನಲ್ ಅಹಮದಾಬಾದಿನ ಮೋದಿ ಸ್ಟೇಡಿಯಂಗೆ ಶಿಫ್ಟ್ ಆಗಿದೆ. ಇದಕ್ಕೆ ಶಾಸಕರು ವಿಐಪಿ ಟಿಕೆಟ್ ಗೆ ಇಟ್ಟ ಬೇಡಿಕೆಯೇ ಮುಖ್ಯ ಕಾರಣ ಎನ್ನಲಾಗುತ್ತಿದೆ.ಏನೇ ಆಗಲಿ ಐಪಿಎಲ್ ಫೈನಲ್ ಪಂದ್ಯವನ್ನೇ ಬೇರೆಡೆಗೆ ಸ್ಥಳಾಂತರಿಸಿರುವುದು ಕ್ರಿಕೆಟ್ ಅಭಿಮಾನಿಗಳಿಗೆ ಬೇಸರ ತರಿಸಿದೆ.
IPL2026 #IPLFinal #ChinnaswamyStadium #NarendraModiStadium #Bengaluru #CricketNews #RCB




