
ಬೆಂಗಳೂರಿನ ಯಶವಂತಪುರ ರೈಲು ನಿಲ್ದಾಣದಲ್ಲಿ ಕಾಮಗಾರಿ ನಡೆಯುತ್ತಿದೆ.ಇದರ ಪರಿಣಾಮ ಕೆಲ ರೈಲು ಸೇವೆ ರದ್ದು ಮಾಡಲಾಗಿದೆ. 8ಕ್ಕೂ ಹೆಚ್ಚು ರೈಲುಗಳನ್ನು ಬೇರೆ ನಿಲ್ದಾಣಕ್ಕೆ ಮಾರ್ಗ ಬದಲಾಯಿಸಲಾಗಿದೆ. ರದ್ದಾಗಿರುವ ರೈಲು ವಿವರ ಇಲ್ಲಿದೆ.

ಭಾರತದಲ್ಲಿ ರೈಲು ಸೇವೆಯನ್ನು ನೆಚ್ಚಿಕೊಂಡಿರುವವರ ಸಂಖ್ಯೆ ಹೆಚ್ಚು. ಪ್ರತಿ ದಿನ ಕೋಟ್ಯಾಂತರ ಮಂದಿ ರೈಲು ಪ್ರಯಾಣ ಮಾಡುತ್ತಾರೆ. ಇತ್ತೀಚೆಗೆ ರೈಲಿನಲ್ಲಿ ಕಿಕ್ಕಿರಿದ ಪ್ರಯಾಣಿಕರಿಂದಾಗಿ ಸೀಟು ಸಮಸ್ಯೆ, ಬುಕಿಂಗ್ ಮಾಡಿದರೂ ಸೀಟು ಸಿಗುತ್ತಿಲ್ಲ ಅನ್ನೋ ಆರೋಪಗಳು ಕೇಳಿಬಂದಿತ್ತು. ಇದರ ಬೆನ್ನಲ್ಲೇ ಇದೀಗ ಕೆಲ ರೈಲು ಪ್ರಯಾಣಿಕರಿಗೆ ಸಂಕಷ್ಟ ಎದುರಾಗಿದೆ. ಬೆಂಗಳೂರಿನ ಯಶವಂಪುತರದ ರೈಲು ನಿಲ್ದಾಣದಲ್ಲಿನ ಕಾಮಗಾರಿಯಿಂದ ಕೆಲ ರೈಲು ಸೇವೆಗಳು ಸಂಪೂರ್ಣವಾಗಿ ಬಂದ್ ಆಗಿದ್ದರೆ, ಮತ್ತೆ ಕೆಲ ರೈಲುಗಳು ಭಾಗಶಃ ರದ್ದಾಗಿದೆ. ಆಗಸ್ಟ್ 21 ರಿಂದ ಸೆಪ್ಟೆಂಬರ್ 19ರ ವರೆಗೆ ಈ ವ್ಯತ್ಯಯ ಇರಲಿದೆ.
ಯಶವಂತಪುರ ರೈಲು ನಿಲ್ದಾಣದ 2, 3, 4 ಹಾಗೂ 5ನೇ ಪ್ಲಾಟ್‌ಫಾರ್ಮ್‌ನಲ್ಲಿ ಕಾಮಗಾರಿಗಳು ನಡೆಯುತ್ತಿದೆ. ಹೀಗಾಗಿ ತಾತ್ಕಾಲಿಕವಾಗಿ ಈ ಪ್ಲಾಟ್‌ಫಾರ್ಮ್ ಬಂದ್ ಮಾಡಲಾಗಿದೆ. ಇದರ ಪರಿಣಾಮ ಈ ಪ್ಲಾಟ್‌ಫಾರ್ಮ್‌ನಿಂದ ಹೊರಡುವ ಹಾಗೂ ಆಗಮಿಸುವ ಹಲವು ರೈಲು ಸೇವೆಗಳು ರದ್ದಾಗಿದೆ.




