Top Newsಸುದ್ದಿ

KSRTC ಉಪಾಧ್ಯಕ್ಷರಾಗಿ ಮಹಮ್ಮದ್ ರಿಜ್ವಾನ್ ನವಾಬ್ ನೇಮಕ-ಸರ್ಕಾರದ ಆದೇಶ

ಬೆಂಗಳೂರು: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ಉಪಾಧ್ಯಕ್ಷರಾಗಿ ಬೆಂಗಳೂರು ಮಹಾನಗರ ಪಾಲಿಕೆ ಗುರುಪ್ಪನ ಪಾಳ್ಯದ ಮಾಜಿ ಸದಸ್ಯ ಮಹಮ್ಮದ್ ರಿಜ್ವಾನ್ ನವಾಬ್ ನೇಮಕಗೊಂಡಿದ್ದಾರೆ.

ಸಚಿವ ರಾಮಲಿಂಗಾರೆಡ್ಡಿ ರೆಡ್ಡಿ ಪರಮಾಪ್ತ ರಿಜ್ವಾನ್ ನವಾಬ್ ಅವರನ್ನು ನಿಗಮದ ಉಪಾಧ್ಯಕ್ಷರಾಗಿ ನೇಮಿಸಿ ಸಾರಿಗೆ ಇಲಾಖೆಯ ಸರ್ಕಾರದ ಅಧೀನ ಕಾರ್ಯದರ್ಶಿ ವಿ. ಎಸ್.ಪುಷ್ಪ ಆದೇಶ ಹೊರಡಿಸಿದ್ದಾರೆ.

ರಾಜ್ಯದ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರನ್ನು ಬುಧುವಾರ ಆದೇಶ ಹೊರಡಿಸಿರುವ ವಿ.ಎಸ್.ಪುಷ್ಪ ಅವರು ತಕ್ಷಣದಿಂದ ಜಾರಿಗೆ ಬರುವಂತೆ ಹಾಗೂ ಮುಂದಿನ ಆದೇಶದವರೆಗೆ ನೇಮಿಸಿ ಆದೇಶಸಿದೆ ಎಂದು ತಳಿದ್ದಾರೆ.

ಉಪಾಧ್ಯಕ್ಷ ಸ್ಥಾನ ದೊರೆತ ಹಿನ್ನೆಲೆಯಲ್ಲಿ ಪಕ್ಷದ ತೀರ್ಮಾನಕ್ಕೆ ಬದ್ದರಾಗಿದ್ದು, ಪಕ್ಷ ಹೇಳಿದಂತೆ ನಾನು ಕೆಲಸ ಮಾಡಲು ಸಿದ್ದ ಎಂದು ಮಹಮ್ಮದ್ ರಿಜ್ವಾನ್ ನವಾಬ್ ತಿಳಿಸಿದ್ದಾರೆ. ನಾನು KSRTC ಸಂಸ್ಥೆಯ ಉಪಾಧ್ಯಕ್ಷನಾಗುತ್ತೇನೆ ಎಂಬ ನಿರೀಕ್ಷೆ ಮಾಡಿರಲಿಲ್ಲ. ಆದರೆ ನನಗೆ ಗೊತ್ತಿಲ್ಲದಂತೆ ಈ ಅಧಿಕಾರ ಸಿಕ್ಕದ್ದು, ಇದನ್ನು ನಿಗಮದ ಏಳಿಗೆಗಾಗಿ ಉಪಯೋಗಿಸಿಕೊಳ್ಳುತ್ತೇನೆ ಎಂದು ಹೇಳಿದ್ದಾರೆ.

Comments (0)

Your email address will not be published. Required fields are marked *

Back to top button