Top Newsವೈರಲ್ ನ್ಯೂಸ್ಸುದ್ದಿ

ಅತ್ಯಾಚಾರ ಎಸಗಲು ಮುಂದಾದ ಕಾಮುಕನಿಗೆ ಕೊಂಬಿನಿಂದ ತಿವಿದು ಬಿಸಾಕಿದ ಹಸು- ವಿಡಿಯೋ ವೈರಲ್

ಅತ್ಯಾಚಾರ ಪ್ರಕರಣಗಳ ಸಂಖ್ಯೆ ಹೆಚ್ಚುತ್ತಲೇ ಇದ್ದು, ಕಾಮುಕರು ತಮ್ಮ ಲೈಂಗಿಕತೆ  ತೀರಿಸಿಕೊಳ್ಳಲು ಮಹಿಳೆಯರು, ವೃದ್ಧೆಯರು, ಹಸುಗೂಸು ಮಾತ್ರವಲ್ಲದೆ ಪ್ರಾಣಿಗಳ ಮೇಲೂ ಸಹ ಅತ್ಯಾಚಾರ ಎಸಗುತ್ತಿದ್ದಾರೆ. ಇದೀಗ ಇಲ್ಲೊಬ್ಬ ಕಾಮಾಂಧ ಕುಡಿದ ಮತ್ತಿನಲ್ಲಿ ಹಸುವಿನ ಮೇಲೆ ಅತ್ಯಾಚಾರಕ್ಕೆ ಯತ್ನಿಸಿದ್ದು, ಕೋಪಗೊಂಡ ಹಸು ಆತನನ್ನು ಕೊಂಬಿನಿಂದ ತಿವಿದು ಎತ್ತಿ ಬಿಸಾಕಿದೆ. ಈ ಕುರಿತ ವಿಡಿಯೋವೊಂದು ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್ ಆಗುತ್ತಿದ್ದು, ಮಾಡಿದ ತಪ್ಪಿಗೆ ಆತನಿಗೆ ತಕ್ಕ ಶಿಕ್ಷೆಯಾಗಿದೆ ಎಂದು ನೆಟ್ಟಿಗರು ಮಾತನಾಡಿಕೊಳ್ಳುತ್ತಿದ್ದಾರೆ.

ಈ ಅಘಾತಕಾರಿ ಘಟನೆ ಥೈಲ್ಯಾಂಡ್ ನಲ್ಲಿ ನಡೆದಿದ್ದು, ಇಲ್ಲಿಗೆ ಪ್ರವಾಸ ಬಂದಿದ್ದ ರಷ್ಯಾದ 26 ವರ್ಷದ ಕುವ್ಶಿನೋವ್ ಎಂಬಾತ ಕುಡಿದ ಮತ್ತಿನಲ್ಲಿ ಸಂಪೂರ್ಣ ಬೆತ್ತಲಾಗಿ ಹಸುವಿನ ಮೇಲೆ ಅತ್ಯಾಚಾರ ಎಸಗಲು ಮುಂದಾಗಿದ್ದಾನೆ. ಹೀಗೆ ಅತ್ಯಾಚಾರ ಎಸಗಲು ಹೋದ ಸಂದರ್ಭದಲ್ಲಿ ಕೋಪಗೊಂಡ ಹಸು ಈ ಕಾಮಾಂಧನ ಮೇಲೆ ಕೊಂಬಿನಿಂದ ಸರಿಯಾಗಿ ದಾಳಿ ನಡೆಸಿದೆ. ಕೊನೆಗೆ ಪೊಲೀಸರು ಸ್ಥಳಕ್ಕಾಗಮಿಸಿ ಆತನನ್ನು ರಕ್ಷಿಸಿ, ಆಸ್ಪತ್ರೆಗೆ ದಾಖಲಿಸಿದ್ದಾರೆ. ಇದೀಗ ಆತನನ್ನು ಬಂಧಿಸಲಾಗಿದ್ದು, ಹೆಚ್ಚಿನ ತನಿಖೆ ನಡೆಯುತ್ತಿದೆ.

ವೈರಲ್ ವಿಡಿಯೋದಲ್ಲಿ ತನ್ನ ಮೇಲೆ ಅತ್ಯಾಚಾರ ಎಸಗಲು ಬಂದ ವ್ಯಕ್ತಿಯ ಮೇಲೆ ಭೀಕರವಾಗಿ ದಾಳಿ ನಡೆಸುವ ದೃಶ್ಯವನ್ನು ಕಾಣಬಹುದು. ಆ ಸಂದರ್ಭದಲ್ಲಿ ಕೋಪಗೊಂಡ ಹಸು ಆತನನ್ನು ಕೊಂಬಿನಿಂದ ತಿವಿದು ಎತ್ತಿ ಬಿಸಾಡಿ, ಸರಿಯಾಗಿ ದಾಳಿ ನಡೆಸಿದೆ. ಕೊನೆಯಲ್ಲಿ ಸ್ಥಳಕ್ಕಾಗಮಿಸಿದ ಪೊಲೀಸರು ಆತನನ್ನು ರಕ್ಷಿಸಿದ್ದಾರೆ. ಬಳಕೆದಾರರು ‘ಕಾಮುಕನ ಸೊಕ್ಕಡಗಿಸಿದ ಹಸುವಿಗೆ ನನ್ನ ಸಲಾಂ’ ಎಂದು ಹೇಳಿದ್ದಾರೆ.

 

Comments (0)

Your email address will not be published. Required fields are marked *

Back to top button